ದುಬೈ: ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅವರಂತೆ ಪಂದ್ಯವನ್ನು ಅದ್ಭುತವಾಗಿ ಫಿನಿಶಿಂಗ್ ಮಾಡುವುದನ್ನು ರೂಢಿಸಿಕೊಳ್ಳುವ ಗುರಿ ಹೊಂದಿದ್ದೇನೆ ಎಂದು ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಆಡುತ್ತಿರುವ ಡೇವಿಡ್ ಮಿಲ್ಲರ್ ತಿಳಿಸಿದ್ದಾರೆ.
ಹರಿಣಗಳ ಮಿಡ್ಲ್ ಆರ್ಡರ್ ಬ್ಯಾಟ್ಸ್ಮನ್ ಮಿಲ್ಲರ್ ಈ ಬಾರಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 2019ರ ಹರಾಜಿನಲ್ಲಿ ಕೈಬಿಟ್ಟಿದ್ದರಿಂದ ರಾಜಸ್ಥಾನ ರಾಯಲ್ಸ್ ಸೇರಿಕೊಂಡಿದ್ದಾರೆ. ನಾವು ಆಡುವ ಮತ್ತು ಭಾವಿಸುವ ರೀತಿ (ಮಧ್ಯಮ ಕ್ರಮಾಂಕದ ಬಗ್ಗೆ) ತುಂಬಾ ವಿಭಿನ್ನರಾಗಿದ್ದೇವೆ ಎಂದು ನಾನು ಭಾವಿಸುತ್ತೇನೆ. ಧೋನಿ ಅವರ ಜವಾಬ್ದಾರಿಯನ್ನು ನಿರ್ವಹಿಸುವುದನ್ನು ನಾನು ಖಂಡಿತವಾಗಿ ಪ್ರೀತಿಸುತ್ತೇನೆ.
ಅದರಲ್ಲೂ ಅವರ ತಾಳ್ಮೆ, ಅದು ಯೋಚಿಸಿ ನೋಡಿ ಅವರು ಅದನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡಿರುತ್ತಾರೆ. ಅವರು ತಾಳ್ಮೆಯನ್ನು ಚಿತ್ರಿಸಿಕೊಳ್ಳುವ ರೀತಿ ತುಂಬಾ ಉತ್ತಮವಾಗಿರುತ್ತದೆ. ನಾನು ಅದನ್ನು ಆನಂದಿಸುತ್ತೇನೆ. ಮತ್ತು ಅದನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ಅದರಲ್ಲೂ ಚೇಸ್ ಮಾಡುವ ವೇಳೆ. ಅವರು ಬ್ಯಾಟ್ಸ್ಮನ್ ಆಗಿ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಹೊಂದಿದ್ದಾರೆ, ನಾನು ಕೂಡ ಹೊಂದಿದ್ದೇನೆ ಎಂದು ಮಿಲ್ಲರ್ ಇಎಸ್ಪಿನ್ಗೆ ನೀಡಿದ ಸಂದರ್ಭದಲ್ಲಿ ತಿಳಿಸಿದ್ದಾರೆ.