ಕರ್ನಾಟಕ

karnataka

ETV Bharat / sports

5 ಎಸೆತ, 5 ಸಿಕ್ಸರ್​​​... ಐಪಿಎಲ್ ಪ್ರಾರಂಭಕ್ಕೂ ಮುನ್ನ ಅಬ್ಬರಿಸಿದ ಧೋನಿ!

ಈಗಾಲೇ ಚೆನ್ನೈ ತಂಡದೊಂದಿಗೆ ತರಬೇತಿಯಲ್ಲಿ ನಿರತರಾಗಿರುವ ಮಹೇಂದ್ರ ಸಿಂಗ್ ಧೋನಿ ಅಭ್ಯಾಸದ ವೇಳೆ 5 ಸಿಕ್ಸರ್​ ಸಿಡಿಸಿ ಐಪಿಎಲ್​ ಟೂರ್ನಿಯಲ್ಲಿ ಅಬ್ಬರಿಸುವ ಸೂಚನೆ ನೀಡಿದ್ದಾರೆ.

CSK skipper Dhoni sounds warning bells,ಐಪಿಎಲ್ ಪ್ರಾರಂಭಕ್ಕೂ ಮುನ್ನ ಅಬ್ಬರಿಸಿದ ಧೋನಿ
ಐಪಿಎಲ್ ಪ್ರಾರಂಭಕ್ಕೂ ಮುನ್ನ ಅಬ್ಬರಿಸಿದ ಧೋನಿ

By

Published : Mar 6, 2020, 7:12 PM IST

ಚೆನ್ನೈ: ಏಕದಿನ ವಿಶ್ವಕಪ್ ಟೂರ್ನಿ ನಂತರ ಮೊದಲ ಬಾರಿಗೆ ಇಂಡಿಯನ್ ಪ್ರೀಮಿಯರ್​ ಲೀಗ್ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್​ನಲ್ಲಿ ಕಾಣಿಸಿಕೊಳ್ಳಲಿರುವ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಐಪಿಎಲ್​ನಲ್ಲಿ ಅಬ್ಬರಿಸುವ ಮುನ್ಸೂಚನೆ ನೀಡಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿರುವ ಮಹೇಂದ್ರ ಸಿಂಗ್ ಧೋನಿ ಈಗಾಲೇ ತಂಡದೊಂದಿಗೆ ತರಬೇತಿಯಲ್ಲಿ ನಿರತರಾಗಿದ್ದಾರೆ. ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿರುವ ಮಾಹಿ ಎದುರಿಸಿದ 5 ಎಸೆತಗಳಲ್ಲೂ ಸಿಕ್ಸರ್​ ಬಾರಿಸಿದ್ದಾರೆ.

ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸಾಧನೆ

2019ರ ಜುಲೈನಿಂದ ಮೈದಾನಕ್ಕಿಳಿಯದ ಧೋನಿ ನಿವೃತ್ತಿ ಸಮಯ ಸಮೀಪಿಸಿದೆ ಎಂದೇ ಹೇಳಲಾಗಿತ್ತು. ಆದರೆ ಅಭ್ಯಾಸದ ವೇಳೆ ಅಬ್ಬರಿಸಿರುವ ಧೋನಿ ತಮ್ಮಲ್ಲಿನ್ನೂ ಕ್ರಿಕೆಟ್ ಉಳಿದಿದೆ ಎಂದು ಸಾಬೀತುಪಡಿಸಿದ್ದಾರೆ.

ಮಹೇಂದ್ರ ಸಿಂಗ್ ಧೋನಿ

ಧೋನಿ ಐಪಿಎಲ್​ನಲ್ಲಿ ನೀಡುವ ಪ್ರದರ್ಶನದ ಮೇಲೆ ಅವರ ಅಂತಾರಾಷ್ಟ್ರೀಯ ಕ್ರಿಕೆಟ್​ ಬದುಕು ನಿಂತಿದೆ ಎಂದು ಟೀಂ ಇಂಡಿಯಾ ಕೋಚ್​ ರವಿಶಾಸ್ತ್ರಿ ತಿಳಿಸಿದ್ದಾರೆ. ಹೀಗಾಗಿ ಮುಂಬರುವ ಟಿ-20 ವಿಶ್ವಕಪ್​ನಲ್ಲಿ ಸ್ಥಾನ ಪಡೆದುಕೊಳ್ಳಲು ಧೋನಿ ಐಪಿಎಲ್​ನಲ್ಲಿ ಅಬ್ಬರಿಸುವ ಅಗತ್ಯತೆ ಇದೆ.

ABOUT THE AUTHOR

...view details