ಕರ್ನಾಟಕ

karnataka

ETV Bharat / sports

99ರನ್​ಗಳಿಸಿ ಔಟ್​... ಸಿಟ್ಟಿನಿಂದ ಬ್ಯಾಟ್​ ಎಸೆದು ಆಕ್ರೋಶ ಹೊರಹಾಕಿದ ಗೇಲ್​! - ಬ್ಯಾಟ್​ ಎಸೆದ ಗೇಲ್​ ಸುದ್ದಿ

ಐಪಿಎಲ್​ನಲ್ಲಿ ಅಬ್ಬರಿಸುತ್ತಿರುವ ಕ್ರಿಸ್​ ಗೇಲ್​ ನಿನ್ನೆಯ ಪಂದ್ಯದಲ್ಲಿ 99ರನ್​ಗಳಿಕೆ ಮಾಡಿ ವಿಕೆಟ್​ ಒಪ್ಪಿಸಿದ್ದು, ಈ ವೇಳೆ ನಿರಾಸೆಗೊಂಡು ಬ್ಯಾಟ್​ ಎಸೆದಿದ್ದಾರೆ.

Chris Gayle fined for throwing bat
Chris Gayle fined for throwing bat

By

Published : Oct 31, 2020, 6:14 AM IST

ಅಬುಧಾಬಿ:ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಅಬ್ಬರಿಸುತ್ತಿರುವ ಸ್ಫೋಟಕ ಬ್ಯಾಟ್ಸಮನ್​ ಕ್ರಿಕಸ್​ ಗೇಲ್​​ ನಿನ್ನೆ ರಾಜಸ್ಥಾನ ವಿರುದ್ಧದ ಪಂದ್ಯದಲ್ಲೂ ಆಕರ್ಷಕ ಬ್ಯಾಟಿಂಗ್​ ಪ್ರದರ್ಶನ ನೀಡಿದರು.

41 ವರ್ಷದ ಗೇಲ್​​ ನಿನ್ನೆಯ ಪಂದ್ಯದಲ್ಲಿ 63 ಎಸೆತಗಳಲ್ಲಿ 6 ಬೌಂಡರಿ, 8 ಸಿಕ್ಸರ್​ ಸೇರಿದಂತೆ 99ರನ್​ಗಳಿಕೆ ಮಾಡಿದ್ದರು. ಶತಕ ಸಿಡಿಸಿ ಅಬ್ಬರಿಸುವುದಕ್ಕೂ ಮುಂಚಿತವಾಗಿ ವಿಕೆಟ್ ಒಪ್ಪಿಸಿದ್ದು ಅವರಲ್ಲಿ ನಿರಾಸೆ ಮೂಡಿಸುವಂತೆ ಮಾಡಿತು. 99ರನ್​ಗಳಿಕೆ ಮಾಡಿದ್ದ ವೇಳೇ ಜೋಪ್ರಾ ಆರ್ಚರ್​ ಎಸೆದ ಓವರ್​ನಲ್ಲಿ ಬೌಲ್ಡ್ ಆದ ಗೇಲ್​ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಪ್ರಸಕ್ತ ಸಾಲಿನ ಐಪಿಎಲ್​ನಲ್ಲಿ ಚೊಚ್ಚಲ ಶತಕ ಸಿಡಿಸುವ ತವಕದಲ್ಲಿದ್ದ ಗೇಲ್​ ಔಟ್​ ಆಗುತ್ತಿದ್ದಂತೆ ಆಕ್ರೋಶ ಹಾಗೂ ನಿರಾಸೆಯಿಂದ ಬ್ಯಾಟ್​​ ಎಸೆದಿದ್ದಾರೆ. ತದನಂತರ ಆರ್ಚರ್​​ ಅವರಿಗೆ ಹಸ್ತಲಾಘವ ನೀಡಿ, ತಾವು ಎಸೆದ ಬ್ಯಾಟ್​ ಎತ್ತಿಕೊಂಡು ಪೆವಿಲಿಯನ್​ ಕಡೆ ತೆರಳಿದ್ದಾರೆ.

ಪಂಜಾಬ್​ ವಿರುದ್ಧ 7ವಿಕೆಟ್​ಗಳ ಜಯ ಸಾಧಿಸಿ ಪ್ಲೇ-ಆಫ್​ ರೇಸ್​ನಲ್ಲಿ ಉಳಿದ ರಾಯಲ್ಸ್​!

ದಂಡ ತೆತ್ತ ಕ್ರಿಸ್​ ಗೇಲ್​!

ಮೈದಾನದಲ್ಲೇ ಈ ರೀತಿಯಾಗಿ ನಡೆದುಕೊಂಡಿದ್ದಕ್ಕಾಗಿ ಪಂದ್ಯದ ಶುಲ್ಕದ ಶೇ. 10ರಷ್ಟು ದಂಡ ವಿಧಿಸಲಾಗಿದೆ. ಐಪಿಎಲ್ ನೀತಿ ಸಂಹಿತೆಯ ಲೆವೆಲ್​ 1 ಅಪರಾದ ಆಗಿರುವ ಕಾರಣ ಅವರಿಗೆ ದಂಡ ವಿಧಿಸಲಾಗಿದೆ.

ABOUT THE AUTHOR

...view details