ಶಾರ್ಜಾ: ಪ್ಲೇ ಆಫ್ ನಿರ್ಧರಿಸುವ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಈ ಪಂದ್ಯವನ್ನು ಗೆದ್ದರೆ ಮಾತ್ರ ಡೇವಿಡ್ ಪಡೆ ಪ್ಲೇ ಆಫ್ ಪ್ರವೇಶಿಸಲಿದೆ. ಇಲ್ಲವಾದಲ್ಲಿ ಕೆಕೆಆರ್ ತಂಡ ಕ್ವಾಲಿಫೈಯರ್ ಅವಕಾಶ ಗಿಟ್ಟಿಸಿಕೊಳ್ಳಲಿದೆ.
ಪ್ಲೇ ಆಫ್ ನಿರ್ಧರಿಸುವ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಹೈದರಾಬಾದ್ - ಮುಂಬೈ ಇಂಡಿಯನ್ಸ್ vs ಸನ್ರೈಸರ್ಸ್ ಹೈದರಾಬಾದ್ ಡ್ರೀಮ್ 11 ಟೀಮ್
ಔಪಚಾರಿಕವಾಗಿರುವ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಕೆಲವು ಬದಲಾವಣೆ ಮಾಡಿಕೊಂಡಿದೆ. ರೋಹಿತ್ ಶರ್ಮಾ ಕಮ್ಬ್ಯಾಕ್ ಮಾಡಿದ್ದು, ಬುಮ್ರಾ ಹಾಗೂ ಬೌಲ್ಟ್ ವಿಶ್ರಾಂತಿ ಪಡೆದಿದ್ದಾರೆ. ಇವರ ಸ್ಥಾನಕ್ಕೆ ದವಳ್ ಕುಲಕರ್ಣಿ ಹಾಗೂ ಪ್ಯಾಟಿನ್ಸನ್ ಅವಕಾಶ ಪಡೆದುಕೊಂಡಿದ್ದಾರೆ. ಹೈದರಾಬಾದ್ ತಂಡ ಅಭಿಷೇಕ್ ಶರ್ಮಾ ಬದಲಿಗೆ ಪ್ರಿಯಂ ಗರ್ಗ್ಗೆ ಅವಕಾಶ ನೀಡಿದೆ.
ಹೈದರಾಬಾದ್ ತಂಡ 12 ಅಂಕಗಳನ್ನು ಹೊಂದಿದ್ದು 5ನೇ ಸ್ಥಾನದಲ್ಲಿದೆ. ಈ ಪಂದ್ಯ ಗೆದ್ದರೆ 14 ಅಂಕಗಳೊಂದಿಗೆ 3ನೇ ಸ್ಥಾನಕ್ಕೇರಲಿದೆ. 18 ಅಂಕಗಳ ಮೂಲಕ ಮೊದಲ ಸ್ಥಾನದಲ್ಲಿ ಭದ್ರವಾಗಿರುವ ಹಾಲಿ ಚಾಂಪಿಯನ್ಸ್ ಮುಂಬೈ ಈ ಪಂದ್ಯವನ್ನು ಸೋತರೂ ಅಥವಾ ಗೆದ್ದರೂ ಮೊದಲ ಸ್ಥಾನದಲ್ಲೇ ಮುಂದುವರೆಯಲಿದೆ. ಔಪಚಾರಿಕವಾಗಿರುವ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಕೆಲವು ಬದಲಾವಣೆ ಮಾಡಿಕೊಂಡಿದೆ. ರೋಹಿತ್ ಶರ್ಮಾ ಕಮ್ಬ್ಯಾಕ್ ಮಾಡಿದ್ದು, ಬುಮ್ರಾ ಹಾಗೂ ಬೌಲ್ಟ್ ವಿಶ್ರಾಂತಿ ಪಡೆದಿದ್ದಾರೆ. ಇವರ ಸ್ಥಾನಕ್ಕೆ ದವಳ್ ಕುಲಕರ್ಣಿ ಹಾಗೂ ಪ್ಯಾಟಿನ್ಸನ್ ಅವಕಾಶ ಪಡೆದುಕೊಂಡಿದ್ದಾರೆ. ಹೈದರಾಬಾದ್ ತಂಡ ಅಭಿಷೇಕ್ ಶರ್ಮಾ ಬದಲಿಗೆ ಪ್ರಿಯಂ ಗರ್ಗ್ಗೆ ಅವಕಾಶ ನೀಡಿದೆ.