ಕರ್ನಾಟಕ

karnataka

ETV Bharat / sports

ಐಪಿಎಲ್​ನಲ್ಲಿ ವಿವೋ ಪ್ರಾಯೋಜಕತ್ವ ರದ್ದು... ಬಿಸಿಸಿಐನಿಂದ ಸ್ಪಷ್ಟನೆ - ಐಪಿಎಲ್​ ಶೀರ್ಷಿಕೆ ಪ್ರಾಯೋಜಕತ್ವ

ಭಾನುವಾರ ನಡೆದಿದ್ದ ಐಪಿಎಲ್​ ಆಡಳಿತ ಮಂಡಳಿ ಸಭೆಯಲ್ಲಿ ಚೀನಾ ಕಂಪನಿ ಪ್ರಾಯೋಜಕತ್ವವನ್ನು ಉಳಿಸಿಕೊಂಡು ಹೋಗುವುದಕ್ಕೆ ಬಿಸಿಸಿಐ ನಿರ್ಧರಿಸಿತ್ತು. ಆದರೆ ಸಾಮಾಜಿಕ ಜಾಲಾತಾಣದಲ್ಲಿ ಇದಕ್ಕೆ ವ್ಯಾಪಕ ವಿರೋಧ ಕೇಳಿ ಬಂದ ಕಾರಣ ಬಿಸಿಸಿಐ ಪ್ರಾಯೋಜಕತ್ವ ರದ್ದುಗೊಳಿಸಿ ಆದೇಶ ಹೊರಡಿಸಿದೆ.

ವಿವೋ ಪ್ರಾಯೋಜಕತ್ವ
ವಿವೋ ಪ್ರಾಯೋಜಕತ್ವ

By

Published : Aug 6, 2020, 6:39 PM IST

Updated : Aug 6, 2020, 10:50 PM IST

ನವದೆಹಲಿ: 13ನೇ ಆವೃತ್ತಿ ಐಪಿಎಲ್​ ಟೂರ್ನಿಗೆ ಕೇವಲ 44 ದಿನಗಳಿರುವಾಗ ಬಿಸಿಸಿಐ ಟೂರ್ನಮೆಂಟ್​​​ ಶೀರ್ಷಿಕೆ ಹಕ್ಕಿನ ಪ್ರಾಯೋಜಕತ್ವ ಹೊಂದಿದ್ದ ವಿವೋ ಮೊಬೈಲ್​ ಕಂಪನಿಯೊಂದಿಗಿನ ಒಪ್ಪಂದವನ್ನು ರದ್ದುಗೊಳಿಸಿರುವುದಾಗಿ ಅಧಿಕೃತ ಪ್ರಕಟಣೆ ಹೊರಡಿಸಿದೆ.

ಭಾನುವಾರ ನಡೆದಿದ್ದ ಐಪಿಎಲ್​ ಆಡಳಿತ ಮಂಡಳಿಯ ಸಭೆಯಲ್ಲಿ ಚೀನಾ ಕಂಪನಿ ಪ್ರಾಯೋಜಕತ್ವವನ್ನು ಉಳಿಸಿಕೊಂಡು ಹೋಗುವುದಕ್ಕೆ ನಿರ್ಧರಿಸಿತ್ತು. ಆದರೆ ಈ ನಿರ್ಧಾರಕ್ಕೆ ಇನ್ನಿಲ್ಲದ ವಿರೋಧ ವ್ಯಕ್ತವಾದ ಕಾರಣ ಈ ನಿರ್ಧಾರ ಕೈಗೊಂಡಿದೆ.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ವಿವೋ ಮೊಬೈಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಡುವಿನ 2020ರ ಐಪಿಎಲ್​ ಒಪ್ಪಂದವನ್ನು ರದ್ದುಗೊಳಿಸಿಲಾಗಿದೆ ಎಂದು ಪ್ರಕಟಣೆ ಮೂಲಕ ತಿಳಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ಐಪಿಎಲ್​ ವಿರುದ್ದ ಕೂಗು ಕೇಳಿ ಬಂದ ಬೆನ್ನಲ್ಲೇ ಬಿಸಿಸಿಐ ಈ ನಿರ್ಧಾರ ತೆಗೆದುಕೊಂಡಿದೆ. ಅಭಿಮಾನಿಗಳ ಭಾವನೆ ಕ್ರಿಕೆಟ್​ ಮಂಡಳಿಗೆ ಮೊದಲ ಆದ್ಯತೆಯಾಗಿರುವುದರಿಂದ ಚೀನಾ ಕಂಪನಿಯ ಜೊತೆಗಿನ ಒಪ್ಪಂದವನ್ನು ರದ್ದುಗೊಳಿಸಿರುವುದು ರಾಷ್ಟ್ರೀಯ ಹಿತಾಸಕ್ತಿ ಎಂದು ಬಿಸಿಸಿಐ ಅಭಿಪ್ರಾಯಪಟ್ಟಿದೆ.

ಇನ್ನು ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವ ಪಡೆದಿದ್ದ ಚೀನಾ ಮೂಲದ ವಿವೋ ಮೊಬೈಲ್ ಕಂಪನಿ ಬಿಸಿಸಿಐನೊಂದಿಗೆ 5 ವರ್ಷಗಳಿಗೆ 2,199 ಕೋಟಿ ರೂಗಳ ಒಪ್ಪಂದ ಮಾಡಿಕೊಂಡಿತ್ತು. ಈಗಾಗಲೇ ಎರಡು ವರ್ಷಗಳ ಒಪ್ಪಂದ ಮುಗಿದಿದೆ. ಬಿಸಿಸಿಐ ಮತ್ತು ವಿವೋ ನಡುವೆ ಇನ್ನು 1,320 ಕೋಟಿ ರೂಗಳ ಒಪ್ಪಂದವಿದೆ. 2021ರಿಂದ 2023ರ ಆವೃತ್ತಿಗೆ ವಿವೋ ಐಪಿಎಲ್​ಗೆ ಮರಳುವ ಸಾಧ್ಯತೆ ಇದೆ ಎನ್ನಲಾಗಿದೆ.

Last Updated : Aug 6, 2020, 10:50 PM IST

ABOUT THE AUTHOR

...view details