ಮ್ಯಾಂಚೆಸ್ಟರ್:ಐಸಿಸಿ 2019 ಏಕದಿನ ವಿಶ್ವಕಪ್‌ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ನಡೆಸುತ್ತಿರುವ ನ್ಯೂಜಿಲ್ಯಾಂಡ್ 46.1 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 211 ರನ್ಗಳಿಕೆ ಮಾಡಿದೆ. ಈ ವೇಳೆ ಮಳೆ ಸುರಿದ ಕಾರಣ ಪಂದ್ಯಕ್ಕೆ ಅಡ್ಡಿಯಾಗಿದೆ.
ಮಳೆಯಾಟ! ಭಾರತಕ್ಕೆ 46 ಓವರ್ಗಳಲ್ಲಿ 237ರನ್ ಟಾರ್ಗೆಟ್ ಸಂಭವ - ಮ್ಯಾಂಚೆಸ್ಟರ್
ಭಾರತ-ನ್ಯೂಜಿಲ್ಯಾಂಡ್ ನಡುವಿನ ಸೆಮಿಫೈನಲ್ ಪಂದ್ಯಕ್ಕೆ ವರುಣ ಅಡ್ಡಿಪಡಿಸಿದ್ದು, ಒಂದು ವೇಳೆ ಕಿವೀಸ್ ತಂಡ ಇನ್ನಿಂಗ್ಸ್ ಪೂರ್ಣಗೊಳಿಸದಿದ್ದರೆ ಭಾರತಕ್ಕೆ 46 ಓವರ್ಗಳಲ್ಲಿ 237ರನ್ ಟಾರ್ಗೆಟ್ ಸಿಗಬಹುದು.
ಮಳೆಯ ಕಾಟ
ಇದೀಗ ಮಳೆಯ ಅಬ್ಬರ ಜೋರಾಗಿರುವ ಕಾರಣ ಮುಂದಿನ 4 ಓವರ್ಗಳು ಬ್ಯಾಟಿಂಗ್ ಮಾಡಲು ನ್ಯೂಜಿಲ್ಯಾಂಡ್ ತಂಡಕ್ಕೆ ಅವಕಾಶ ಸಿಗದೇ ಹೋದರೆ, ಟೀಂ ಇಂಡಿಯಾ 46 ಓವರ್ಗಳಲ್ಲಿ 237 ರನ್ಗಳಿಕೆ ಮಾಡಬೇಕಾಗುತ್ತದೆ. ಒಂದು ವೇಳೆ 20 ಓವರ್ ನಿಗದಿಯಾದರೆ ಭಾರತ 148 ರನ್ಗಳಿಕೆ ಮಾಡಬೇಕಾಗುತ್ತದೆ.
ಒಂದು ವೇಳೆ ಇಂದಿನ ಪಂದ್ಯ ಸಂಪೂರ್ಣವಾಗಿ ಮಳೆಗೆ ಆಹುತಿಯಾದ್ರೆ ನಾಳೆ ಮೀಸಲು ದಿನವಾಗಿರುವ ಕಾರಣ ಪಂದ್ಯ ನಡೆಯಲಿದೆ. ನಾಳೆಯ ದಿನವೂ ಪಂದ್ಯ ಮಳೆಗಾಹುತಿಯಾದರೆ ಟೀಂ ಇಂಡಿಯಾ ಫೈನಲ್ ಪ್ರವೇಶ ಪಡೆಯಲಿದೆ.
Last Updated : Jul 9, 2019, 7:34 PM IST