ಮುಂಬೈ: ಈ ವರ್ಷದ ಆರಂಭದಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡುವಂತೆ ಇಬ್ಬರು ವ್ಯಕ್ತಿಗಳು ತಮ್ಮನ್ನು ಸಂಪರ್ಕಿಸಿದ್ದರೆಂದು ಭಾರತ ಮಹಿಳಾ ಆಟಗಾರ್ತಿಯೊಬ್ಬರು ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ ದೂರು ನೀಡಿದ್ದಾರೆ.
ಒಡಿಸ್ಸಾ ಮೂಲಕ ರಾಕೇಶ್ ಬಫ್ನ, ಹಾಗೂ ಜೇತೇಂದ್ರ ಕೊತಾರಿ ಎಂಬುವವರು ಭಾರತ ತಂಡದ ಮಹಿಳಾ ಆಟಗಾರ್ತಿಗೆ ಮ್ಯಾಚ್ ಫಿಕ್ಸಿಂಗ್ ಮಾಡುವಂತೆ ಒತ್ತಾಯಿಸಿದ್ದರು ಎಂದು ಆರೋಪಿಸಿ ಬೆಂಗಳೂರಿನಲ್ಲಿ ದೂರು ದಾಖಲಿಸಾಗಿದೆ. ಈ ವ್ಯಕ್ತಿಗಳ ಮೇಲೆ ಐಪಿಸಿ ಸೆಕ್ಷನ್ 420, ಮೋಸ, ಅಪ್ರಮಾಣಿಕ ಆಸ್ತಿಯ ವಿತರಣೆಗೆ ಯತ್ನದ ಪ್ರಕರಣ ದಾಖಲಿಸಲಾಗಿದೆ.
"ಇಂದು ಬೆಂಗಳೂರಿನಲ್ಲಿ ಮ್ಯಾಚ್ ಫಿಕ್ಸಿಂಗ್ ಒತ್ತಾಯ ಮಾಡಿದ ಆರೋಪದ ಮೇಲೆ ನಾವು ಇಬ್ಬರು ವ್ಯಕ್ತಿಗಳ ಮೇಲೆ ಎಫ್ಐಆರ್ ದಾಖಲಿಸಿದ್ದೇ" ಎಂದು ಬಿಸಿಸಿಐ ಭ್ರಷ್ಟಚಾರ ನಿಗ್ರಹ ಘಟಕದ ಮುಖ್ಯಸ್ಥ ಅಜಿತ್ ಸಿಂಗ್ ಶೇಖಾವತ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಜಿತೇಂದರ್ ಕೊತಾರಿ ಮಹಿಳಾ ಆಟಗಾರ್ತಿಯ ಮ್ಯಾನೇಜರ್ರೊಂದಿಗೆ ಕಳೆದ ಒಂದು ವರ್ಷದಿಂದ ಸಂಪರ್ಕದಲ್ಲಿದ್ದು, ಕೋರಿಯರ್ ಮೂಲಕ ಆಟಗಾರ್ತಿಗೆ ಫಿಕ್ಸಿಂಗ್ ಒಪ್ಪಂದಕ್ಕೆ ಬೇಡಿಕೆ ಇಟ್ಟಿದ್ದಾರೆ. ಮತ್ತೆ ಫೆಬ್ರವರಿಯಲ್ಲಿ ಕೊತಾರಿ, ಬಫ್ನ ಎಂಬುವವರನ್ನು ಬಿಟ್ಟು ಎನ್ಸಿಎನಲ್ಲಿ ತರಬೇತಿ ಮಾಡುತ್ತಿದ್ದ ವೇಳೆ ಅದೇ ಆಟಗಾರ್ತಿಗೆ ಮ್ಯಾಚ್ ಫಿಕ್ಸ್ ಮಾಡಲು ಮತ್ತೆ ಸಂಪರ್ಕ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ವರದಿ ಪ್ರಕಾರ ಆ ಇಬ್ಬರು ಫಿಕ್ಸರ್ಗಳು ಮಹಿಳಾ ಕ್ರಿಕೆಟರ್ಗೆ ಫೆಬ್ರವರಿಯಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಒಂದು ಪಂದ್ಯಕ್ಕೆ ಒಂದು ಲಕ್ಷ ರೂಪಾಯಿ ಆಫರ್ ನೀಡಿದ್ದರೆಂದು ಆರೋಪಿಸಲಾಗಿದೆ. ಜೊತೆಗೆ ತಂಡದ ನಾಯಕಿಯನ್ನು ಕೂಡ ಶಾಮೀಲು ಮಾಡುವಂತೆ ಕೋರಿದ್ದಾರು ಎಂದು ತಿಳಿದು ಬಂದಿದೆ.