ಕರ್ನಾಟಕ

karnataka

By

Published : Dec 21, 2019, 7:14 PM IST

ETV Bharat / sports

ಟೆಸ್ಟ್​ ಕ್ರಿಕೆಟ್​ನಲ್ಲಿ ಪ್ರಸ್ತುತ ಭಾರತದ ಬೌಲಿಂಗ್ ಬೆಸ್ಟ್​ ಎಂದ ದಕ್ಷಿಣ ಆಫ್ರಿಕಾ ಲೆಜೆಂಡ್​

ಡಿಸೆಂಬರ್​ 19 ರಂದು ನಡೆದ ಐಪಿಎಲ್​ ಹರಾಜಿನಲ್ಲಿ 2 ಕೋಟಿಗೆ ಆರ್​ಸಿಬಿ ತಂಡದ ಬೌಲಿಂಗ್ ಸೇರಿರುವ ಡೇಲ್​ಸ್ಟೈನ್​ ತಮ್ಮ ಟ್ವಿಟರ್​ನಲ್ಲಿ ಅಭಿಮಾನಿಗಳೊಂದಿದೆ ಸಂವಾದ ನಡೆಸಿದ್ದು ಭಾರತೀಯ ಟೆಸ್ಟ್​ ಬೌಲರ್​ಗಳನ್ನು ಅತ್ಯುತ್ತಮ ಎಂದು ಉತ್ತರ ನೀಡಿದ್ದಾರೆ.

Indian pace attack best in test: steyn
Indian pace attack best in test: steyn

ನವದೆಹಲಿ:ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಮೂರು ಟೆಸ್ಟ್​ ಸರಣಿ ಗೆದ್ದು ಅಗ್ರ ತಂಡವಾಗಿ ಮುನ್ನುಗ್ಗುತ್ತಿರುವ ಭಾರತ ತಂಡಕ್ಕೆ ಕಾರಣರಾಗಿರುವ ವೇಗದ ಬೌಲಿಂಗ್​ಅನ್ನು ವಿಭಾಗವನ್ನು ವಿಶ್ವದಲ್ಲೇ ಅತ್ಯುತ್ತಮ ಎಂದು ದಕ್ಷಿಣ ಆಫ್ರಿಕಾದ ಹಿರಿಯ ವೇಗಿ ಡೇಲ್​ ಸ್ಟೈನ್​ ತಿಳಿಸಿದ್ದಾರೆ.

ಡಿಸೆಂಬರ್​ 19 ರಂದು ನಡೆದ ಐಪಿಎಲ್​ ಹರಾಜಿನಲ್ಲಿ 2 ಕೋಟಿಗೆ ಆರ್​ಸಿಬಿ ತಂಡದ ಬೌಲಿಂಗ್ ಸೇರಿರುವ ಡೇಲ್​ಸ್ಟೈನ್​ ತಮ್ಮ ಟ್ವಿಟರ್​ನಲ್ಲಿ ಅಭಿಮಾನಿಗಳೊಂದಿದೆ ಸಂವಾದ ನಡೆಸಿದ್ದು ಭಾರತೀಯ ಟೆಸ್ಟ್​ ಬೌಲರ್​ಗಳನ್ನು ಅತ್ಯುತ್ತಮ ಎಂದು ಉತ್ತರ ನೀಡಿದ್ದಾರೆ.

ಡೇಲ್​ ಸ್ಟೈನ್​

ಕಳೆದ ಎರಡು ವರ್ಷಗಳಿಂದ ಜಸ್ಪ್ರೀತ್​ ಬುಮ್ರಾ, ಇಶಾಂತ್​ ಶರ್ಮಾ, ಮೊಹಮ್ಮದ್​ ಶಮಿ, ಭುವನೇಶ್ವರ್​ ಕುಮಾರ್​ ಮತ್ತು ಉಮೇಶ್​ ಯಾದವ್​ ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದಾರೆ. ಇವರ ನೆರವಿನಿಂದ ಟೆಸ್ಟ್​ ಕ್ರಿಕೆಟ್​ನಲ್ಲಿ ಭಾರತ ತಂಡ ಮೊದಲ ಸ್ಥಾನದಲ್ಲಿ ಬದ್ರವಾಗಿ ನೆಲೆಯೂರಿದೆ ಎಂದು ಸ್ಟೈನ್​ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತಿರಿಸದ್ದಾರೆ.

ಇನ್ನು ನಿಮ್ಮ ನೆಚ್ಚಿನ ಬ್ಯಾಟ್ಸ್​ಮನ್​ ಯಾರು ಎಂಬ ಪ್ರಶ್ನೆಗೆ ಉತ್ತರಿಸಿರುವ ಡೇಲ್​ಸ್ಟೈನ್​ ಡಿಕಾಕ್​, ಎಬಿಡಿ ಹಾಗೂ ವಿರಾಟ್​ ಕೊಹ್ಲಿ ಹೆಸರನ್ನು ಸೂಚಿಸಿದ್ದಾರೆ.

ಡೇಲ್​ ಸ್ಟೈನ್​ ಡಿ 19 ರಂದು ನಡೆದ ಹರಾಜಿನಲ್ಲಿ ಎರಡು ಬಾರಿ ಅನ್​ಸೋಲ್ಡ್​ ಆಗಿದ್ದರು. ಆದರೆ ಮೂರನೇ ಬಾರಿ ಅವರನ್ನು ಮೂಲಬೆಲೆ 2 ಕೋಟಿಗೆ ಆರ್​ಸಿಬಿ ಖರೀದಿಸುವಲ್ಲಿ ಯಶಸ್ವಿಯಾಗಿತ್ತು.

ABOUT THE AUTHOR

...view details