ಕರ್ನಾಟಕ

karnataka

ETV Bharat / sports

ಬಡ ಕ್ರಿಕೆಟಿಗರಿಗೆ ನೆರವು ನೀಡುವ ಐಸಿಎ ಕಾರ್ಯಕ್ಕೆ ಬೆಂಬಲ ನೀಡಿದ ಕಪಿಲ್​, ಗವಾಸ್ಕರ್​ ಗಂಭೀರ್​

ಕೊರೊನಾ ಬಿಕ್ಕಟ್ಟಿನಿಂದ ಸಂಕಷ್ಟಕ್ಕೆ ಸಿಲುಕಿರುವ ಕ್ರಿಕೆಟಿಗರಿಗೆ ನೆರವು ನೀಡುವುದಕ್ಕಾಗಿ ಈ ಅಭಿಯಾನ ಶುರುಮಾಡಿದ್ದು, ಈಗಾಗಲೆ 39 ಲಕ್ಷ ಹಣ ಸಂಗ್ರಹ ಮಾಡಲಾಗಿದೆ. ಇದಕ್ಕೆ ಕ್ರಿಕೆಟಿಗರಾದ ಮಾಹಿ, ಗವಾಸ್ಕರ್​, ಕಪಿಲ್​ದೇವ್​, ಗಂಭೀರ್ ಹಾಗೂ ಕನ್ನಡಿಗ ಗಿ ವಿಶ್ವನಾಥ್​ ಬೆಂಬಲಿಸಿದ್ದಾರೆ ಎಂದು ಐಸಿಎ ಅಧ್ಯಕ್ಷ ಅಶೋಕ್​ ಮೆಲ್ಹೋತ್ರ ತಿಳಿಸಿದ್ದಾರೆ.

ಕಪಿಲ್​ ದೇವ್​
ಕಪಿಲ್​ ದೇವ್​

By

Published : May 3, 2020, 7:50 AM IST

ಮುಂಬೈ: ಸಂಕಷ್ಟದಲ್ಲಿರುವ 30 ಕ್ರಿಕೆಟಿಗರಿಗೆ ನೆರವು ನೀಡಲು ಭಾರತದ ಕ್ರಿಕೆಟಿಗರ ಸಂಘ ನಿರ್ಧರಿಸಿದ್ದು, ಇದಕ್ಕೆ ಮಾಜಿ ಕ್ರಿಕೆಟಿಗರಾದ ಸುನಿಲ್​ ಗವಾಸ್ಕರ್​ ಹಾಗೂ ಕಪಿಲ್​ದೇವ್​​ ತಮ್ಮ ಬೆಂಬಲ ಸೂಚಿಸಿದ್ದಾರೆ.

ಕೊರೊನಾ ಬಿಕ್ಕಟ್ಟಿನಿಂದ ಸಂಕಷ್ಟಕ್ಕೆ ಸಿಲುಕಿರುವ ಕ್ರಿಕೆಟಿಗರಿಗೆ ನೆರವು ನೀಡುವುದಕ್ಕಾಗಿ ಈ ಅಭಿಯಾನ ಶುರುಮಾಡಿದ್ದು, ಈಗಾಗಲೆ 39 ಲಕ್ಷ ಹಣ ಸಂಗ್ರಹ ಮಾಡಲಾಗಿದೆ. ಇದಕ್ಕೆ ಕ್ರಿಕೆಟಿಗರಾದ ಮಾಹಿ, ಗವಾಸ್ಕರ್​, ಕಪಿಲ್​ದೇವ್​, ಗಂಭೀರ್ ಹಾಗೂ ಕನ್ನಡಿಗ ಗಿ ವಿಶ್ವನಾಥ್​ ಬೆಂಬಲಿಸಿದ್ದಾರೆ ಎಂದು ಐಸಿಎ ಅಧ್ಯಕ್ಷ ಅಶೋಕ್​ ಮೆಲ್ಹೋತ್ರ ತಿಳಿಸಿದ್ದಾರೆ.

ಬಿಸಿಸಿಐನಿಂದ ಪೆನ್ಷನ್​ ಪಡೆಯದ, ಯಾವುದೇ ಉದ್ಯೋಗವಿಲ್ಲದೆ ಆ ರಾಜ್ಯದ ಕ್ರಿಕೆಟ್​ ಅಸೋಸಿಯೇಷನ್​ನಿಂದ ಯಾವುದೇ ರೀತಿಯ ವೇತನ ಪಡೆಯದ ದೇಶದ ವಿವಿಧ ಕೆಲವು ಹಾಲಿ ಮಾಜಿ ಕ್ರಿಕೆಟಿಗರಿಗೆ ನೆರವು ನೀಡುವುದಾಗಿ ಅಶೋಕ್​ ತಿಳಿಸಿದ್ದಾರೆ.

ಐಸಿಎ ಕಾರ್ಯಕ್ಕೆ ಗುಜರಾತ್‌ನ ಕಾರ್ಪೊರೇಟ್‌ ಸಂಸ್ಥೆಯೊಂದು ಕೈಜೋಡಿಸಿದೆ. ಅಲ್ಲದೆ ಮಾಜಿ ಕ್ರಿಕೆಟಗರಾದ ಗಂಭೀರ್, ಗವಾಸ್ಕರ್​, ಕಪಿಲ್​ ದೇವ್​ ಹಾಗೂ ಅಜರುದ್ದೀನ್​ ಹಣಕಾಸಿನ ನೆರವು ನೀಡಿದೆ. ಸಂಘದಿಂದ 10 ಲಕ್ಷ ಹಣ ನೀಡಲಾಗಿದೆ. ಮೇ 15ರ ವರೆಗೆ ನಾವು ದೇಣಿಗೆಯನ್ನು ಸ್ವೀಕರಿಸಲಿದ್ದೇವೆ. ನಂತರ ಪ್ರತಿ ವಲಯದಿಂದ ಐದರಿಂದ ಆರು ಕ್ರಿಕೆಟಿಗರ ಪಟ್ಟಿ ಮಾಡಿ ಹಣವನ್ನು ವಿತರಿಸಲಾಗುವುದು ಎಂದು ಮಲ್ಹೋತ್ರಾ ತಿಳಿಸಿದ್ದಾರೆ.

ABOUT THE AUTHOR

...view details