ನವದೆಹಲಿ:ವೆಸ್ಟ್ ಇಂಡೀಸ್ ವಿರುದ್ಧದ ಕ್ರಿಕೆಟ್ ಸರಣಿ ಮುಕ್ತಾಯಗೊಳ್ಳುತ್ತಿದ್ದಂತೆ ರವಿಶಾಸ್ತ್ರಿ ಕೋಚ್ ಅವಧಿ ಮುಕ್ತಾಯಗೊಳ್ಳಲಿದ್ದು, ಭಾರತೀಯ ಕ್ರಿಕೆಟ್ ತಂಡದ ಹೊಸ ಕೋಚ್ ಹುದ್ದೆಗೆ ಈಗಾಗಲೇ ಬಿಸಿಸಿಐ ಅರ್ಜಿ ಆಹ್ವಾನ ಮಾಡಿದೆ.
ಇಂದು ರಾತ್ರಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಪ್ರಯಾಣ ಬೆಳೆಸಲಿದ್ದು, ಅದಕ್ಕೂ ಮುಂಚಿತವಾಗಿ ಕ್ಯಾಪ್ಟನ್ ಕೊಹ್ಲಿ ಹಾಗೂ ಕೋಚ್ ರವಿಶಾಸ್ತ್ರಿ ಸುದ್ದೀಗೋಷ್ಠಿ ನಡೆಸಿದರು. ಇದೇ ವೇಳೆ ಪತ್ರಕರ್ತರೊಬ್ಬರು ಕೇಳಿರುವ ಪ್ರಶ್ನೆಗೆ ಉತ್ತರ ನೀಡಿದ ಕೊಹ್ಲಿ, ಮುಂದಿನ ಅವಧಿಗೆ ರವಿಶಾಸ್ತ್ರಿ ಕೋಚ್ ಆಗಿ ಆಯ್ಕೆಗೊಂಡರೆ ನಿಜಕ್ಕೂ ನಾವು ಸಂತೋಷಗೊಳ್ಳುತ್ತೇವೆ. ಒಂದು ವೇಳೆ ಬಿಸಿಸಿಐ ನನ್ನ ಸಲಹೆ ಕೇಳಿದರೆ ಖಂಡಿತವಾಗಿ ಈ ವಿಚಾರ ತಿಳಿಸುವೆ ಎಂದರು.
ಕ್ಯಾಪ್ಟನ್ ಕೊಹ್ಲಿ ಸುದ್ದಿಗೋಷ್ಠಿ ಕೋಚ್ ರವಿಶಾಸ್ತ್ರಿ ಅವರ ಅಡಿಯಲ್ಲಿ ನಾವು ಅದ್ಭುತ ಪ್ರದರ್ಶನ ನೀಡಿದ್ದು, ಒಂದು ವೇಳೆ ಸಿಎಸಿ ನನ್ನ ಸಲಹೆ ಕೇಳಿದರೆ ಖಂಡಿತವಾಗಿ ಮಾತನಾಡುವೆ. ರವಿ ಭಾಯ್ ಅವರೊಂದಿಗೆ ತಂಡ ಉತ್ತಮ ಹೊಂದಾಣಿಕೆ ಇದ್ದು,ಅವರೇ ತಂಡದ ಕೋಚ್ ಆಗಿ ಮುಂದುವರಿದರೆ ಉತ್ತಮ ಎಂದರು.
ನಮ್ಮ ತಂಡ ವಿಶ್ವಕಪ್ ಫೈನಲ್ಗೆ ಹೋಗಿಲ್ಲ ಎಂಬುದಕ್ಕೆ ಎಲ್ಲರಿಗೂ ನಿರಾಶೆ ಇದೆ. ಆದರೆ ಇದೀಗ ನಾವು ಮುಂದುವರಿಯಬೇಕಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಸರಣಿಯಲ್ಲಿ ಆಯ್ಕೆ ಸಮಿತಿ ಕೆಲವೊಂದು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದ್ದು, ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂದರು. ಟೆಸ್ಟ್ ತಂಡಕ್ಕೆ ರೋಹಿತ್ ಶರ್ಮಾ ಸೇರ್ಪಡೆ ಹಾಗೂ ರಹಾನೆ ಮರಳಿರುವುದು ನಿಜಕ್ಕೂ ಉತ್ತಮ ಬೆಳವಣಿಗೆ ಎಂದು ತಿಳಿಸಿದರು.