ಕರ್ನಾಟಕ

karnataka

By

Published : Jul 19, 2019, 3:25 AM IST

ETV Bharat / sports

ವಿಂಡೀಸ್ ಪ್ರವಾಸಕ್ಕೆ ಟೀಮ್ ಇಂಡಿಯಾ ಆಯ್ಕೆ... ಭಾನುವಾರಕ್ಕೆ ಮುಂದೂಡಿಕೆ

ವಿಂಡೀಸ್ ಸರಣಿಗೆ ತಂಡ ಆಯ್ಕೆ ಮಾಡುವ ವೇಳೆ ನಾಯಕ ಕೊಹ್ಲಿ ಸಹ ಹಾಜರಿರಬೇಕಿದೆ. ಜೊತೆಗೆ ಆಟಗಾರರ ಫಿಟ್​ನೆಸ್ ವರದಿ ಶನಿವಾರ ಸಂಜೆ ವೇಳೆ ಲಭ್ಯವಾಗಲಿದ್ದು ಈ ಎಲ್ಲ ಕಾರಣದಿಂದ ಟೀಮ್ ಇಂಡಿಯಾ ಆಯ್ಕೆಯನ್ನು ಭಾನುವಾರಕ್ಕೆ ಮುಂದೂಡಲಾಗಿದೆ.

ಟೀಮ್ ಇಂಡಿಯಾ

ಮುಂಬೈ:ವಿಂಡೀಸ್ ಪ್ರವಾಸಕ್ಕೆ ಇಂದು ನಡೆಯಬೇಕಿದ್ದ ಟೀಮ್ ಇಂಡಿಯಾ ಆಯ್ಕೆಯನ್ನು ಕೆಲ ಕಾರಣಗಳಿಂದ ಭಾನುವಾರಕ್ಕೆ ಮುಂದೂಡಲಾಗಿದೆ.

ನಾಯಕ ವಿರಾಟ್ ಕೊಹ್ಲಿ ಲಭ್ಯತೆ ಹಾಗೂ ಹಿರಿಯ ಆಟಗಾರ ಎಂ.ಎಸ್.ಧೋನಿ ಭವಿಷ್ಯದ ಬಗ್ಗೆ ಉದ್ಭವಿಸಿರುವ ಅನಿಶ್ಚಿತತೆಯ ಹಿನ್ನೆಲೆಯಲ್ಲಿ ಶುಕ್ರವಾರ ನಡೆಯಬೇಕಿದ್ದ ತಂಡದ ಆಯ್ಕೆಯನ್ನು ಮುಂದೂಡಿಕೆ ಮಾಡಲಾಗಿದೆ.

ಟೀಮ್ ಇಂಡಿಯಾ

ವಿಂಡೀಸ್ ಸರಣಿಗೆ ತಂಡ ಆಯ್ಕೆ ಮಾಡುವ ವೇಳೆ ನಾಯಕ ಕೊಹ್ಲಿ ಸಹ ಹಾಜರಿರಬೇಕಿದೆ. ಜೊತೆಗೆ ಆಟಗಾರರ ಫಿಟ್​ನೆಸ್ ವರದಿ ಶನಿವಾರ ಸಂಜೆ ವೇಳೆ ಲಭ್ಯವಾಗಲಿದ್ದು ಈ ಎಲ್ಲ ಕಾರಣದಿಂದ ಟೀಮ್ ಇಂಡಿಯಾ ಆಯ್ಕೆಯನ್ನು ಭಾನುವಾರಕ್ಕೆ ಮುಂದೂಡಲಾಗಿದೆ.

ವಿಶ್ವಕಪ್​ ಮುಕ್ತಾಯದ ವೇಳೆ ಧೋನಿ ನಿವೃತ್ತಿ ಬಗ್ಗೆ ಸಾಕಷ್ಟು ಮಾತುಗಳು ಕೇಳಿಬಂದಿದ್ದರೂ ಟೀಮ್ ಇಂಡಿಯಾದ ಈ ಹಿರಿಯ ಆಟಗಾರ ವಿದಾಯದ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಹೀಗಾಗಿ ವಿಂಡೀಸ್​ ಪ್ರವಾಸಕ್ಕೆ ಧೋನಿ ಆಯ್ಕೆಯಾಗುತ್ತಾರಾ ಎನ್ನುವ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿದೆ.

ABOUT THE AUTHOR

...view details