ಪೋರ್ಟ್ ಆಫ್ ಸ್ಪೇನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೇವಲ 19 ರನ್ಗಳಿಸಿದರೆ ವಿಂಡೀಸ್ ವಿರುದ್ಧ ಅತಿ ಹೆಚ್ಚು ರನ್ಗಳಿಸಿದ ಬ್ಯಾಟ್ಸ್ಮನ್ ಎಂಬ ದಾಖಲೆಗೆ ಪಾತ್ರರಾಗಲಿದ್ದಾರೆ.
ವೆಸ್ಟ್ ವಿಂಡೀಸ್ ವಿರುದ್ಧ ಇಂದು 2ನೇ ಏಕದಿನ ಪಂದ್ಯ ನಡೆಯಲಿದೆ. ಇದೇ ಮ್ಯಾಚ್‌ನಲ್ಲಿ ರನ್ಮಷಿನ್ ಕೊಹ್ಲಿ ಕೇವಲ 19 ರನ್ಗಳಿಸಿದ್ರೆ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ಗಳಿಸಿರುವ ಪಾಕಿಸ್ತಾನದ ಜಾವೇದ್ ಮಿಯಾಂದಾದ್ ದಾಖಲೆ ಅಳಿಸಿ ಹಾಕಲಿದ್ದಾರೆ.
ಪಾಕಿಸ್ತಾನ ತಂಡದ ಮಾಜಿ ಆಟಗಾರ ಜಾವೇದ್ ಮಿಯಾಂದಾದ್, ವೆಸ್ಟ್ ಇಂಡೀಸ್ ವಿರುದ್ಧ 64 ಇನ್ನಿಂಗ್ಸ್‌ಗಳಲ್ಲಿ 1930 ರನ್ ಗಳಿಸಿದ್ದಾರೆ. ಈ ದಾಖಲೆಯನ್ನು ಬೆನ್ನತ್ತಿರುವ ಕಿಂಗ್ ಕೊಹ್ಲಿ ಕೇವಲ 33 ಇನ್ನಿಂಗ್ಸ್‌ಗಳಲ್ಲಿ 1912 ರನ್ ಗಳಿಸಿ 2ನೇ ಗರಿಷ್ಠ ಸ್ಕೋರರ್ ಸ್ಥಾನದಲ್ಲಿದ್ದಾರೆ. 19 ರನ್ ಸೇರ್ಪಡೆಯಾದರೆ ವಿಶ್ವ ಕ್ರಿಕೆಟ್ನಲ್ಲಿ ಹೊಸ ದಾಖಲೆ ಸೃಷ್ಟಿಯಾಗಲಿದೆ.
ರನ್ಮಷಿನ್ ಕೊಹ್ಲಿ 19 ರನ್ಗಳಿಸಿದರೆ 26 ವರ್ಷ ಹಿಂದಿನ ದಾಖಲೆ ಉಡೀಸ್.. - indian cricket news
ವಿರಾಟ್ ಕೊಹ್ಲಿ ವೆಸ್ಟ್ ವಿಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಕೇವಲ 19 ರನ್ಗಳಿಸಿದರೆ ಕೆರಿಬಿಯನ್ಸ್ ವಿರುದ್ಧ ಗರಿಷ್ಠ ರನ್ ಸಿಡಿಸಿದ ಬ್ಯಾಟ್ಸ್ಮನ್ ಎನಿಸಿಕೊಳ್ಳಲಿದ್ದಾರೆ.
India vs West Indies
ಇನ್ನು 88 ರನ್ಗಳಸಿದರೆ ವಿಂಡೀಸ್ ವಿರುದ್ಧ 2000 ರನ್ ಕಲೆ ಹಾಕಿದ ಶ್ರೇಯಕ್ಕೂ ಪಾತ್ರರಾಗಲಿದ್ದಾರೆ.