ಕರ್ನಾಟಕ

karnataka

ETV Bharat / sports

ಬುಮ್ರಾ, ಇಶಾಂತ್ ದಾಳಿಗೆ ವಿಂಡೀಸ್​ ಉಡೀಸ್​... ಭಾರತಕ್ಕೆ 318 ರನ್​ಗಳ ಜಯ - ಭಾರತಕ್ಕೆ 318 ರನ್​ಗಳ ಜಯ

ವೆಸ್ಟ್​ ಇಂಡೀಸ್​ ವಿರುದ್ಧ ನಡೆಯುತ್ತಿರುವ ಟೆಸ್ಟ್​ ಚಾಂಪಿಯನ್​​ಶಿಪ್​ನ ಮೊದಲ ಟೆಸ್ಟ್​​ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ.

ಭಾರತಕ್ಕೆ 318 ರನ್​ಗಳ ಜಯ

By

Published : Aug 26, 2019, 2:28 AM IST

ಆ್ಯಂಟಿಗುವಾ: ಭಾರತ ಮತ್ತು ವೆಸ್ಟ್​ ಇಂಡೀಸ್​ ನಡುವಿನ ಮೊದಲ ಟೆಸ್ಟ್​ ಪಂದ್ಯದಲ್ಲಿ ಕೆರಿಬಿಯನ್​ ತಂಡದ ವಿರುದ್ಧ ಕೊಹ್ಲಿ ಪಡೆ 318 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ಟೀಂ ಇಂಡಿಯಾ ನೀಡಿದ್ದ 419ರನ್​ಗಳ ಗುರಿ ಬೆನ್ನತ್ತಿದ ವಿಂಡೀಸ್​ ಆಟಗಾರರು, ಟೀಂ ಇಂಡಿಯಾ ವೇಗಿಗಳ ದಾಳಿಗೆ ತರಗೆಲೆಗಳಂತೆ ಉದುರಿಹೋದರು. ಕೆಮರ್ ರೋಚ್ 38, ಮಿಗುಯೆಲ್ ಕಮ್ಮಿನ್ಸ್ 19, ರೋಸ್ಟನ್ ಚೇಸ್ 12 ರನ್​ ಗಳಿಸಿದ್ದು ಬಿಟ್ಟರೆ ಯಾವೊಬ್ಬ ಆಟಗಾರರು ಎರಡಂಕಿ ದಾಟಲಿಲ್ಲ. 100 ರನ್ ​ಗಳಿಸುವಷ್ಟರಲ್ಲೇ ವೆಸ್ಟ್​ ಇಂಡೀಸ್​ ಸರ್ವಪತನ ಕಂಡು ಸೋಲೊಪ್ಪಿಕೊಂಡಿತು.

ಕರಾರುವಕ್ಕು ಬೌಲಿಂಗ್ ನಡೆಸಿದ ಬುಮ್ರಾ 8 ಓವರ್​ ಬೌಲಿಂಗ್ ಮಾಡಿ ಕೇವಲ 7 ರನ್ ಬಿಟ್ಟು ಕೊಟ್ಟು ಪ್ರಮುಖ 5 ವಿಕೆಟ್ ಪಡೆದು ಭಾರತದ ಗೆಲುವಿಗೆ ಕಾರಣರಾದರು. ಅಲ್ಲದೆ ಇಶಾಂತ್ ಶರ್ಮಾ 3, ಶಮಿ 2 ವಿಕೆಟ್ ಕಬಳಿಸಿದರು.

ಭಾರತ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 297ರನ್ ಗಳಿಸಿದ್ರೆ, ವಿಂಡೀಸ್​ 222 ರನ್​ ಗಳಿಸಿತ್ತು. ಎರಡನೇ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ 343 ಗಳಿಸಿತ್ತು.​

ABOUT THE AUTHOR

...view details