ಲೀಡ್ಸ್:ಕಳೆದ ಮೂರು ವರ್ಷಗಳಿಂದ ಏಕದಿನ ಕ್ರಿಕೆಟ್ನಲ್ಲಿ ಶತಕದ ಬರ ಎದುರಿಸುತ್ತಿದ್ದ ಕನ್ನಡಿಗ ರಾಹುಲ್ ಅಂತೂ ಲಂಕಾ ವಿರುದ್ಧ ಭರ್ಜರಿ ಶತಕ ಬಾರಿಸಿ ಮಿಂಚಿದ್ದಾರೆ.
ವಿಶ್ವಕಪ್ ಲೀಗ್ನ ಕೊನೆಯ ಪಂದ್ಯದಲ್ಲಿ ಲಂಕಾ ವಿರುದ್ಧ ಅಬ್ಬರಿಸಿದ ರಾಹುಲ್, 118 ಎಸೆತಗಳಲ್ಲಿ 11 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 111 ರನ್ಗಳಿಸಿದರು.
ವಿಶ್ವಕಪ್ ತಂಡವನ್ನು ಸೇರಿಕೊಂಡ ರಾಹುಲ್ ಆರಂಭದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದರು. ಆದರೆ ಶಿಖರ್ ಧವನ್ ಗಾಯಗೊಂಡ ಮೇಲೆ ಅಗ್ರಸ್ಥಾನಕ್ಕೆ ಬಡ್ತಿ ಪಡೆದಿದ್ದರು. ಆದರೆ ಆರಂಬಿಕರಾಗಿ ಮೂರು ಅರ್ಧಶತಕ ಸಿಡಿಸಿದ್ದ ರಾಹುಲ್ ಶತಕ ಸಿಡಿಸುವಲ್ಲಿ ವಿಫಲರಾಗುತ್ತಿದ್ದರು. ಇದರಿಂದ ಉತ್ತಮ ಆರಂಭ ಪಡೆದರೂ ರಾಹುಲ್ ದೊಡ್ಡ ಮೊತ್ತವಾಗಿ ಪರಿವರ್ತಿಸುವುದಿಲ್ಲ ಎಂಬ ಆಪಾದನೆ ಕೇಳಿಬಂದಿತ್ತು. ಆದರೆ ಶ್ರೀಲಂಕಾ ವಿರುದ್ಧ ಶತಕ ಬಾರಿಸುವ ಮೂಲಕ ತಮ್ಮ ತಾಕತ್ತನ್ನು ತೋರಿಸಿದ್ದಾರೆ.
ಒಟ್ಟಾರೆ ವಿಶ್ವಕಪ್ನಲ್ಲಿ 8 ಪಂದ್ಯಗಳಲ್ಲಿ 3 ಅರ್ಧಶತಕ ಹಾಗೂ 1 ಶತಕ ಸಹಿತ 360 ರನ್ ಗಳಿಸಿದ್ದಾರೆ.
2016 ಜೂನ್ 11ರಂದು ಜಿಂಬಾಬ್ವೆ ವಿರುದ್ಧ ತಮ್ಮ ಮೊದಲ ಶತಕ ಸಿಡಿಸಿದ್ದರು. ಇದೀಗ 3 ಮೂರು ವರ್ಷಗಳ ನಂತರ ತಮ್ಮ 2ನೇ ಶತಕ ಸಿಡಿಸಿದ್ದಾರೆ. ಜಿಂಬಾಬ್ವೆ ವಿರುದ್ಧ 115 ಎಸೆತಗಳಲ್ಲಿ 7 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಔಟಾಗದೆ 100 ರನ್ ಗಳಿಸಿದ್ದರು.