ವಿಶಾಖಪಟ್ಟಣಂ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ತಮ್ಮ ಸಾಮರ್ಥ್ಯ ಏನು? ಎಂಬುದನ್ನು ಕ್ರಿಕೆಟ್ ಲೋಕಕ್ಕೆ ತೋರಿಸಿದ್ದು, ಕ್ರೀಸಿನಲ್ಲಿದ್ದು ಉತ್ತಮ ಸಾಥ್ ನೀಡಿರುವ ಮಯಾಂಕ್ ಕೂಡ ತಮ್ಮ ಬ್ಯಾಟಿಂಗ್ ವೈಖರಿ ಮೂಲಕ ಕ್ಯಾಪ್ಟನ್ ಮನಗೆದ್ದಿದ್ದಾರೆ. ಈ ಜೋಡಿ ಅಪರೂಪದ ದಾಖಲೆ ಸೃಷ್ಟಿಸಿದೆ.
ರೋಹಿತ್-ಮಯಾಂಕ್ ಜೊತೆಯಾಟ; ಮುರಿದ 47 ವರ್ಷಗಳ ಹಿಂದಿನ ದಾಖಲೆ! - ದಕ್ಷಿಣ ಆಫ್ರಿಕಾ
ಟೆಸ್ಟ್ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿರುವ ರೋಹಿತ್ ಶರ್ಮಾ ಹಾಗೂ ಮಯಾಂಕ್ ಅಗರವಾಲ್ ಜೋಡಿ 47 ವರ್ಷಗಳ ಟೆಸ್ಟ್ ಕ್ರಿಕೆಟ್ನ ದಾಖಲೆ ಬ್ರೇಕ್ ಮಾಡಿದೆ.
ರೋಹಿತ್-ಮಯಾಂಕ್ ಜೋಡಿ
ಭಾರತದಲ್ಲಿ ಆರಂಭಿಕರಾಗಿ ಆಡಿದ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ರೋಹಿತ್-ಮಯಾಂಕ್ ಜೋಡಿ ಉತ್ತಮ ಜೊತೆಯಾಟ ನೀಡಿದ್ದು, 59 ಓವರ್ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೇ 202 ರನ್ ಗಳಿಸಿದೆ. ರೋಹಿತ್ ಅಜೇಯ 115 ರನ್ ಹಾಗೂ ಮಯಾಂಕ್ ಅಜೇಯ 84 ರನ್ ಗಳಿಸಿದ್ದು ನಾಳೆ ಪಂದ್ಯ ಮುಂದುವರಿಯಲಿದೆ.