ವೆಲ್ಲಿಂಗ್ಟನ್: ದ್ವಿತೀಯ ಇನ್ನಿಂಗ್ಸ್ನಲ್ಲಿ ಕಿವೀಸ್ ದಾಳಿಗೆ ಟೀಂ ಇಂಡಿಯಾ ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳು ಪೆವಿಲಿಯನ್ ಸೇರಿದ್ದಾರೆ. ಭಾರತ ತಂಡ ಮೊದಲ ಟೆಸ್ಟ್ನ ಮೂರನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 144 ರನ್ ಗಳಿಸಿದ್ದು, 39 ರನ್ಗಳ ಹಿನ್ನಡೆ ಅನುಭವಿಸಿದೆ.
ಮೊದಲ ಇನ್ನಿಂಗ್ಸ್ನಲ್ಲಿ ನ್ಯೂಜಿಲ್ಯಾಂಡ್ ತಂಡ 348 ರನ್ಗಳಿಗೆ ಆಲ್‌ಔಟ್ ಆದನ ನಂತರ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾಕ್ಕೆ ಟ್ರೆಂಟ್ ಬೋಲ್ಟ್ ಆಘಾತ ನೀಡಿದ್ರು. ಮೊದಲ ಇನ್ನಿಂಗ್ಸ್ನಲ್ಲಿ ವೈಫಲ್ಯ ಅನುಭವಿಸಿದ ಪೃಥ್ವಿ ಶಾ ದ್ವಿತೀಯ ಇನ್ನಿಂಗ್ಸ್ನಲ್ಲಿ 14 ರನ್ಗಳಿಸಿ ಪೆವಿಲಿಯನ್ ಸೇರಿಕೊಂಡ್ರು.
ನಂತರ ಬಂದ ಪುಜಾರ ಎಚ್ಚರಿಕೆಯ ಆಟವಾಡಿದ್ರು. 81 ಎಸೆತಗಳನ್ನ ಎದುರಿಸಿದ ಪುಜಾರ ಕೆಲಹೊತ್ತು ಟಿವೀಸ್ ಬೌಲರ್ಗಳನ್ನ ಕಾಡಿದ್ರು. ಆದ್ರೆ ಕೇವಲ 11 ರನ್ ಗಳಿಸಿ ಬೋಲ್ಟ್ ಎಸೆತದಲ್ಲಿ ಬೌಲ್ಡ್ ಆಗುವ ಮೂಲಕ ನಿರಾಸೆ ಅನುಭವಿಸಿದ್ರು. ಆರಂಭದಿಂದಲೂ ಎಚ್ಚರಿಕೆಯ ಆಟವಾಡಿದ ಕನ್ನಡಿಗ ಮಯಾಂಕ್ ಅಗರ್ವಾಲ್ ಅರ್ಧಶತಕ ಸಿಡಿಸಿ ಸೌಥಿಗೆ ವಿಕೆಟ್ ಒಪ್ಪಿಸಿದ್ರು.