ಚೆನ್ನೈ: ರಿಷಭ್ ಪಂತ್ ನಮಗೆ ಬಹುದೊಡ್ಡ ಸವಾಲಾಗಿದ್ದ ಕಾರಣ ಎರಡನೇ ಇನ್ನಿಂಗ್ಸ್ನಲ್ಲಿ 400ಕ್ಕೂ ಹೆಚ್ಚು ರನ್ ಮುನ್ನಡೆ ಸಾಧಿಸಿದರೂ ಡಿಕ್ಲೇರ್ ಘೋಷಿಸಲಿಲ್ಲ ಎಂದು ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಒಪ್ಪಿಕೊಂಡಿದ್ದಾರೆ.
ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತವನ್ನು 227 ರನ್ಗಳಿಂದ ಮಣಿಸಿದೆ. ಜೇಮ್ಸ್ ಆ್ಯಂಡರ್ಸನ್ ಮತ್ತು ಜ್ಯಾಕ್ ಲೀಚ್ ಅವರ ಅದ್ಭುತ ಬೌಲಿಂಗ್ ದಾಳಿಯ ನೆರವಿನಿಂದ ಭಾರತವನ್ನು 192 ರನ್ಗಳಿಗೆ ಆಲೌಟ್ ಮಾಡಿ ದಿಗ್ವಿಜಯ ಸಾಧಿಸಿದೆ.
" ನಾವು ಮೊದಲೇ ಡಿಕ್ಲೇರ್ ಘೋಷಿಸಬಹುದಿತ್ತು. ಖಚಿತವಾಗಿ ನಾವು ಅದಕ್ಕೆ ಸಾಕಷ್ಟು ರನ್ ಹೊಂದಿದ್ದೆವು. ಆದರೆ, ನಾನು ಈ ಪಂದ್ಯದಲ್ಲಿ ಸ್ಪಷ್ಟ ಫಲಿತಾಂಶವನ್ನು ಪಡೆಯಬೇಕೆಂದು ಬಯಸಿದ್ದೆ. ಜೊತೆಗೆ ನಮ್ಮ ಬೌಲರ್ಗಳಿಗೆ ಮತ್ತಷ್ಟು ಸಮಯವನ್ನು ಒದಗಿಸಿಕೊಡಲು ಬಯಸಿದ್ದೆ. ಹಾಗಾಗಿ 400ರನ್ ದಾಟುತ್ತಲೇ ಸ್ಕೋರ್ ಗತಿಯನ್ನು ಹೆಚ್ಚಿಸಲು ವೇಗವಾಗಿ ಬ್ಯಾಟಿಂಗ್ ಮಾಡಲು ನಿರ್ದರಿಸಿದ್ದೆವು" ಎಂದು ವರ್ಚುಯಲ್ ಸುದ್ದಿಗೋಷ್ಠಿಯಲ್ಲಿ ರೂಟ್ ತಿಳಿಸಿದ್ದಾರೆ.