ಮೆಲ್ಬೋರ್ನ್ :ಟೀಂ ಇಂಡಿಯಾ ಬೌಲರ್ಗಳ ಬಿಗಿ ದಾಳಿಗೆ ನಲುಗಿದ ಆಸೀಸ್ ಪಡೆ ಮೂರನೇ ದಿನದಾಟದ ಅಂತ್ಯಕ್ಕೆ ದ್ವಿತೀಯ ಇನ್ನಿಂಗ್ಸ್ನಲ್ಲಿ 6 ವಿಕೆಟ್ ಕಳೆದುಕೊಂಡು 133 ರನ್ ಗಳಿಸಿ 2 ರನ್ಮುನ್ನಡೆ ಸಾಧಿಸಿದೆ.
ಆರಂಭಿಕ ಆಟಗಾರರಾದ ಮ್ಯಾಥ್ಯೂ ವೇಡ್ ಮತ್ತು ಜೋ ಬರ್ನ್ಸ್ ಈ ಬಾರಿಯೂ ಉತ್ತಮ ಇನ್ನಿಂಗ್ಸ್ ಕಟ್ಟಲು ಸಾಧ್ಯವಾಗಲಿಲ್ಲ. ಉತ್ತಮವಾಗಿ ಸ್ಪೆಲ್ ಮಾಡಿದ ಉಮೇಶ್ ಯಾದವ್ 4ನೇ ಓವರ್ನಲ್ಲಿ ಬರ್ನ್ಸ್ ವಿಕೆಟ್ ಪಡೆದು ಕಾಂಗರೂಗಳಿಗೆ ಪೆಟ್ಟು ನೀಡಿದ್ರು.
ನಂತರ ಬಂದ ಮಾರ್ನಸ್ ಲಾಬುಶೇನ್ ಕೆಲಕಾಲ ಬೌಲರ್ಗಳನ್ನು ಕಾಡಿದ್ರು. ಆದರೆ, ಅಶ್ವಿನ್ ಎಸೆತದಲ್ಲಿ ರಹಾನೆಗೆ ಕ್ಯಾಚ್ ನೀಡಿ ನಿರ್ಗಮಿಸಿದ್ರು. ನಂತರ ಬಂದ ಸ್ಟೀವ್ ಸ್ಮಿತ್(8) ಕೂಡ ಬುಮ್ರಾ ಎಸೆತದಲ್ಲಿ ಬೌಲ್ಡ್ ಆದ್ರು. ಎಚ್ಚರಿಕೆಯ ಆಟವಾಡುತ್ತಿದ್ದ ವೇಡ್(40) ಜಡೇಜಾ ಬೌಂಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ರು.
ಟ್ರಾವಿಸ್ ಹೆಡ್ (17) ಸೀರಾಜ್ ಎಸೆತದಲ್ಲಿ ಮಯಾಂಕ್ಗೆ ವಿಕೆಟ್ ಒಪ್ಪಿಸಿದ್ರೆ, ಟಿಮ್ ಪೇನ್(1) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡ್ರು. ಆಸ್ಟ್ರೇಲಿಯಾ ತಂಡ 6 ವಿಕೆಟ್ ಕಳೆದುಕೊಂಡು 133 ರನ್ ಗಳಿಸಿ, 2 ರನ್ ಮುನ್ನಡೆ ಸಾಧಿಸಿದೆ.
ಕೆಮರೂನ್ ಗ್ರೀನ್ 17 ಮತ್ತು ಪ್ಯಾಟ್ ಕಮ್ಮಿನ್ಸ್ 15 ರನ್ ಗಳಿಸಿ ನಾಲ್ಕನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತದ ಪರ ಜಡೇಜಾ 2 ವಿಕೆಟ್, ಉಮೇಶ್ ಯಾದವ್, ಸಿರಾಜ್, ಬುಮ್ರಾ ಮತ್ತು ಅಶ್ವಿನ್ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.