ಅಹ್ಮದಾಬಾದ್: ಶನಿವಾರ ಇಂಗ್ಲೆಂಡ್ ತಂಡವನ್ನು ಇನ್ನಿಂಗ್ಸ್ ಮತ್ತು 25 ರನ್ಗಳಿಂದ ಮಣಿಸಿದ ಭಾರತ ತಂಡ ತವರಿನಲ್ಲಿ ಸತತ 13 ಟೆಸ್ಟ್ ಸರಣಿ ಗೆಲ್ಲುವ ಮೂಲಕ ವಿಶ್ವದಾಖಲೆಯನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ.
2013ರಲ್ಲಿ ಆಸ್ಟ್ರೇಲಿಯ ತಂಡವನ್ನು 4-0 ಯಲ್ಲಿ ಮಣಿಸುವ ಮೂಲಕ ಭಾರತ ತಂಡ ತವರಿನಲ್ಲಿ ಸರಣಿ ಗೆಲುವಿನ ಅಭಿಯಾನ ಆರಂಭಿಸಿತ್ತು. ಇದೀಗ 8 ವರ್ಷಗಳ ಅವಧಿಯಲ್ಲಿ ಪಾಕಿಸ್ತಾನವನ್ನು ಹೊರತುಪಡಿಸಿ (ಪಾಕ್ ವಿರುದ್ಧ ಆಡಿಲ್ಲ) 8 ದೇಶಗಳ ವಿರುದ್ಧ ಭಾರತ ಸತತ 13 ಟೆಸ್ಟ್ ಸರಣಿಗಳನ್ನು ಗೆದ್ದ ದಾಖಲೆಗೆ ಪಾತ್ರವಾಗಿದೆ. ಈಗಾಗಲೆ ತವರಿನಲ್ಲಿ ಹೆಚ್ಚು ಟೆಸ್ಟ್ ಸರಣಿಯನ್ನು ಗೆದ್ದಿರುವ ವಿಶ್ವದಾಖಲೆಯನ್ನು ಹೊಂದಿರುವ ಭಾರತ ವರ್ಷದಿಂದ ವರ್ಷಕ್ಕೆ ತನ್ನ ದಾಖಲೆಯನ್ನು ವಿಸ್ತರಿಸಿಕೊಳ್ಳುತ್ತಾ ಸಾಗುತ್ತಿದೆ.