ಅಡಿಲೇಡ್:ಆಸ್ಟ್ರೇಲಿಯಾ ವಿರುದ್ಧದ ಮೊದಲ ಅಹರ್ನಿಶಿ ಪಂದ್ಯಕ್ಕೆ ಟೀಂ ಇಂಡಿಯಾ ಆಡುವ ಹನ್ನೊಂದು ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕನ್ನಡಿಗ ಕೆ.ಎಲ್.ರಾಹುಲ್ ಅವರನ್ನು 11ರ ಬಳಗದಿಂದ ಕೈ ಬಿಡಲಾಗಿದೆ.
ಆರಂಭಿಕ ಜೋಡಿಯಾಗಿ ಮಯಾಂಕ್ ಅಗರ್ವಾಲ್ ಜೊತೆ ಪೃಥ್ವಿ ಶಾಗೆ ಮಣೆ ಹಾಕಿದ್ದು, ಶುಬ್ಮನ್ ಗಿಲ್ ಬೆಂಚ್ ಕಾಯಲಿದ್ದಾರೆ.
ಪೃಥ್ವಿ ಶಾ ಫಾರ್ಮ್ನಲ್ಲಿ ಇಲ್ಲದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ನಾಯಕ ವಿರಾಟ್ ಕೊಹ್ಲಿ, ಶುಬ್ಮನ್ ಗಿಲ್ ಮತ್ತು ಕೆ.ಎಲ್.ರಾಹುಲ್ ಇಬ್ಬರೂ ನಮ್ಮ ಯೋಜನೆಯ ಭಾಗವಾಗಿಲ್ಲ ಎಂದು ತಿಳಿಸಿದ್ದಾರೆ.
ಪಿಂಕ್ ಬಾಲ್ ಅಭ್ಯಾಸ ಪಂದ್ಯದಲ್ಲಿ ಶತಕ ಸಿಡಿಸಿದ ರಿಷಭ್ ಪಂತ್ ಬದಲಾಗಿ ಅನುಭವಿ ವೃದ್ಧಿಮಾನ್ ಸಹಾ ಆಯ್ಕೆಯಾಗಿದ್ದಾರೆ. ನಿಧಾನಗತಿಯ ಬೌಲರ್‌ಗಳ ವಿರುದ್ಧ ಪಂತ್ ಗಳಿಸಿದ ಶತಕಕ್ಕಿಂತ ಹೆಚ್ಚು ವಿಶ್ವಾಸಾರ್ಹತೆಯನ್ನು ಗಳಿಸಿರುವ ಸಹಾ 50 ರನ್ ಗಳಿಸಿದ್ದರು.
11 ಆಟಗಾರರ ಭಾರತ ತಂಡ:ವಿರಾಟ್ ಕೊಹ್ಲಿ (ನಾಯಕ), ಮಯಾಂಕ್ ಅಗರ್ವಾಲ್, ಪೃಥ್ವಿ ಶಾ, ಚೇತೇಶ್ವರ ಪೂಜಾರ, ಅಜಿಂಕ್ಯಾ ರಹಾನೆ (ಉಪನಾಯಕ), ಹನುಮ ವಿಹಾರಿ, ವೃದ್ಧಿಮಾನ್ ಸಹಾ (ಕೀಪರ್), ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್.