ಕರ್ನಾಟಕ

karnataka

ETV Bharat / sports

ಕೊಹ್ಲಿ ಪಡೆ ಸೋಲುತ್ತಿದ್ದಂತೆ ಪಾಕ್​ ಸಂಭ್ರಮ; ಇಮ್ರಾನ್ ಸರ್ಕಾರದ ಸಚಿವನ ಟ್ವೀಟ್‌ - ಕರಾಚಿ

ವಿಶ್ವಕಪ್​ನ ಸೆಮಿಫೈನಲ್​ ಪಂದ್ಯದಲ್ಲಿ ಭಾರತ ಸೋಲು ಕಂಡಿದ್ದು, ಇದೇ ವಿಷಯವನ್ನಿಟ್ಟುಕೊಂಡು ಪಾಕ್​ ಸಚಿವನೋರ್ವ ಸಂಭ್ರಮ ವ್ಯಕ್ತಪಡಿಸಿ ಟ್ವೀಟ್​ ಮಾಡಿದ್ದಾರೆ.

ಕೊಹ್ಲಿ ಪಡೆ

By

Published : Jul 10, 2019, 9:04 PM IST

ಕರಾಚಿ:ಮ್ಯಾಂಚೆಸ್ಟರ್​​ನಲ್ಲಿ ನಡೆದ ವಿಶ್ವಕಪ್​ನ ಮೊದಲ ಸೆಮಿಫೈನಲ್​ ಪಂದ್ಯದಲ್ಲಿ ಟೀಂ ಇಂಡಿಯಾ, ನ್ಯೂಜಿಲ್ಯಾಂಡ್​ ವಿರುದ್ಧ 18ರನ್​ಗಳ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದಿದೆ.

ಟೀಂ ಇಂಡಿಯಾ ಸೋಲು ಕಾಣುತ್ತಿದ್ದಂತೆ ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ ಸಚಿವ ಸಂಪುಟದ ಮಂತ್ರಿಯೊಬ್ಬ ಉದ್ಧಟತನ ಪ್ರದರ್ಶಿಸಿದ್ದು ಟ್ವೀಟ್‌​ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್​ ಹುಸೇನ್​​ 'ಪಾಕಿಸ್ತಾನ್​ ಕೀ ನಯಾ ಮೊಹಬತ್​ ನ್ಯೂಜಿಲ್ಯಾಂಡ್​​' ಎಂದು ಟ್ವಿಟರ್​​ನಲ್ಲಿ ಬರೆದುಕೊಂಡಿದ್ದಾರೆ.

ಈ ಮಧ್ಯೆ ಪಾಕಿಸ್ತಾನದ ಅನೇಕರು ಟೀಂ ಇಂಡಿಯಾ ವಿರುದ್ಧ ವಿವಿಧ ರೀತಿಯ ಟ್ರೋಲ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ. ವಿಶ್ವಕಪ್​ನ ಲೀಗ್​​ನಲ್ಲಿ ಭಾರತ ತಂಡ ಇಂಗ್ಲೆಂಡ್​ ವಿರುದ್ಧ ಸೋಲು ಕಂಡಿದ್ದರಿಂದ ಪಾಕ್​ ಟೂರ್ನಿಯಿಂದ ಹೊರಬಿದ್ದಿತ್ತು. ಇದೇ ಆಕ್ರೋಶವನ್ನು ಇದೀಗ ಅಲ್ಲಿನ ಕ್ರೀಡಾಭಿಮಾನಿಗಳು ಟ್ರೋಲ್​ ಮಾಡಿ ತೀರಿಸಿಕೊಳ್ಳುತ್ತಿದ್ದಾರೆ.

ಫವಾದ್​ ಹುಸೇನ್

ಸೆಮಿಫೈನಲ್​ನಲ್ಲಿ ನ್ಯೂಜಿಲ್ಯಾಂಡ್​ ತಂಡ ನೀಡಿದ್ದ 240ರನ್​ಗಳ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ 221ರನ್​ಗಳಿಗೆ ಆಲೌಟ್​ ಆಗುವ ಮೂಲಕ ಸೋಲು ಕಾಣುವಂತಾಯಿತು.

ABOUT THE AUTHOR

...view details