ಪುಣೆ :ಇಂಗ್ಲೆಂಡ್ ವಿರುದ್ಧ ಮೂರನೇ ಪಂದ್ಯದಲ್ಲಿ 7 ರನ್ಗಳ ರೋಚಕ ಗೆಲುವು ಸಾಧಿಸಿದ ಭಾರತ ತಂಡ 3 ಪಂದ್ಯಗಳ ಸರಣಿಯನ್ನ 2-1ರಲ್ಲಿ ವಶಪಡಿಸಿಕೊಂಡಿದೆ. ಈ ಮೂಲಕ ಆಂಗ್ಲರ ವಿರುದ್ಧ ಟೆಸ್ಟ್, ಟಿ20 ಮತ್ತು ಏಕದಿನ ಹೀಗೆ ಮೂರು ಸರಣಿಗಳನ್ನೂ ಕೊಹ್ಲಿ ಬಳಗ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಭಾರತ ನೀಡಿದ 330 ರನ್ಗಳ ಟಾರ್ಗೆಟ್ ಬೆನ್ನತ್ತಿದ ಇಂಗ್ಲೆಂಡ್ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 322 ರನ್ಗಳಿಸಲಷ್ಟೇ ಶಕ್ತವಾಗಿ 7 ರನ್ಗಳಿಂದ ಸೋಲುಂಡಿತು. ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಆರಂಭದಲ್ಲೇ ಜೇಸನ್ ರಾಯ್(14) ಮತ್ತು ಜಾನಿ ಬೈರ್ಸ್ಟೋವ್(1) ವಿಕೆಟ್ ಕಳೆದುಕೊಂಡಿತು. ಈ ಇಬ್ಬರು ಆರಂಭಿಕರು ಭುವನೇಶ್ವರ್ ಕುಮಾರ್ಗೆ ವಿಕೆಟ್ ಒಪ್ಪಿಸಿದರು.
ನಂತರ 3ನೇ ವಿಕೆಟ್ಗೆ ಒಂದಾದ ಬೆನ್ ಸ್ಟೋಕ್ಸ್ ಮತ್ತು ಡೇವಿಡ್ ಮಲನ್ 3ನೇ ವಿಕೆಟ್ ಜೊತೆಯಾಟದಲ್ಲಿ 40 ರನ್ ಸೇರಿಸಿ ಚೇತರಿಕೆ ನೀಡಿದರು. ಈ ಹಂತದಲ್ಲಿ ಕಣಕ್ಕಿಳಿದ ನಟರಾಜನ್ 35 ರನ್ಗಳಿಸಿದ್ದ ಸ್ಟೋಕ್ಸ್ ವಿಕೆಟ್ ಪಡೆದು ಬ್ರೇಕ್ ನೀಡಿದರು. ನಂತರ ಬಂದ ನಾಯಕ ಜೋಸ್ ಬಟ್ಲರ್ 15 ರನ್ಗಳಿಸಿ ಠಾಕೂರ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದರು.
95ಕ್ಕೆ 4 ವಿಕೆಟ್ ಕಳೆದುಕೊಂಡಿದ್ದ ವೇಳೆ ಜೊತೆಯಾದ ಲಿವಿಂಗ್ಸ್ಟೋನ್ ಮತ್ತು ಮಲನ್ 5ನೇ ವಿಕೆಟ್ಗೆ 60 ರನ್ ಸೇರಿಸಿ ಚೇತರಿಕೆ ನೀಡಿದರು. ಮಲನ್ 50 ಎಸೆತಗಳಲ್ಲಿ 6 ಬೌಂಡರಿ ಸಹಿತ 50 ರನ್ ಸಿಡಿಸಿದರೆ, ಲಿವಿಂಗ್ಸ್ಟೋನ್ 37 ರನ್ಗಳಿಸಿದರು.
ಈ ಇಬ್ಬರು ಠಾಕೂರ್ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಮೋಯಿನ್ ಅಲಿ 25 ಎಸೆತಗಳಲ್ಲಿ ತಲಾ 2 ಸಿಕ್ಸರ್ ಮತ್ತು ಬೌಂಡರಿ ಸಹಿತ 29 ರನ್ಗಳಿಸಿ ಭುವಿಗೆ 3ನೇ ಬಲಿಯಾದರು. ಒಂದು ಕಡೆ ವಿಕೆಟ್ ಬೀಳುತ್ತಿದ್ದರು ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶನ ತೋರಿದ ಸ್ಯಾಮ್ ಕರ್ರನ್ 9ನೇ ವಿಕೆಟ್ ಜೊತೆಯಾಟದಲ್ಲಿ ಮಾರ್ಕ್ವುಡ್(14) ಜೊತೆ ಸೇರಿ 60 ರನ್ ಸೇರಿಸಿ ಭಾರತದ ಪಾಳೆಯದಲ್ಲಿ ಸೋಲಿನ ಚಾಯೆ ಮೂಡುವಂತೆ ಮಾಡಿದ್ದರು.
50ನೇ ಓವರ್ನಲ್ಲಿ ಇಂಗ್ಲೆಂಡ್ ಗೆಲುವಿಗೆ 14 ರನ್ಗಳ ಅವಶ್ಯಕತೆಯಿತ್ತು. ಮೊದಲ ಎಸೆತದಲ್ಲಿ 2 ರನ್ ಕದಿಯುವ ಪ್ರಯತ್ನದಲ್ಲಿ ಮಾರ್ಕ್ವುಡ್ ರನ್ಔಟ್ ಆದರು. 2ನೇ ಎಸೆತದಲ್ಲಿ ಸಿಂಗಲ್ಸ್ ಬಂದರೆ, 3 ಮತ್ತು 4ನೇ ಎಸೆತವನ್ನು ನಟರಾಜನ್ ಡಾಟ್ ಮಾಡುವ ಮೂಲಕ ಭಾರತದ ಗೆಲುವನ್ನು ಖಚಿತಪಡಿಸಿದರು. ಕೊನೆಯ ಎರಡು ಎಸೆತಗಳಲ್ಲಿ 4 ರನ್ ಬಿಟ್ಟುಕೊಡುವ ಮೂಲಕ ಭಾರತಕ್ಕೆ 7 ರನ್ಗಳ ರೋಚಕ ಜಯ ತಂದುಕೊಟ್ಟರು.