ಕರ್ನಾಟಕ

karnataka

ETV Bharat / sports

ಆಂಗ್ಲರ ವಿರುದ್ಧದ ಮೊದಲೆರಡು ಟೆಸ್ಟ್​ಗೆ ತಂಡ ಪ್ರಕಟ.. ಇಶಾಂತ್​, ಕೊಹ್ಲಿ ಕಮ್​ಬ್ಯಾಕ್, ಸೈನಿ-ನಟರಾಜನ್ ಔಟ್​..

ಚೇತನ್​ ಶರ್ಮಾ ನೇತೃತ್ವದ ಆಯ್ಕೆ ಸಮಿತಿ ಇಂಗ್ಲೆಂಡ್​ ಸರಣಿಗೆ ವರ್ಚುವಲ್ ಸಭೆ ನಡೆಸಿ ಈ 18 ಸದಸ್ಯರ ತಂಡವನ್ನು ಆಯ್ಕೆ ಮಾಡಿದೆ. ಈ ಸಭೆಗೆ ಖಾಯಂ ನಾಯಕ ವಿರಾಟ್​ ಕೊಹ್ಲಿ ಹಾಗೂ ಆಯ್ಕೆ ಸಮಿತಿಯ ಇತರೆ ಸದಸ್ಯರು ಹಾಜರಾಗಿದ್ದರು..

India vs England
ಭಾರತ vs ಇಂಗ್ಲೆಂಡ್ ಟೆಸ್ಟ್​

By

Published : Jan 19, 2021, 7:19 PM IST

ಹೈದರಾಬಾದ್ ​:ತವರಿನಲ್ಲಿ ಫೆಬ್ರವರಿಯಲ್ಲಿ ನಡೆಯಲಿರುವ ಇಂಗ್ಲೆಂಡ್​ ವಿರುದ್ಧದ ಮೊದಲೆರಡು ಟೆಸ್ಟ್​ ಸರಣಿಗೆ 18 ಸದಸ್ಯರ ತಂಡವನ್ನು ಬಿಸಿಸಿಐ ಆಯ್ಕೆ ಮಾಡಿದೆ ಎಂದು ಪ್ರಸಿದ್ಧ ಕ್ರೀಡಾ ವೆಬ್​ಸೈಟ್ ಆದ ಇಎಸ್​ಪಿಎನ್​ ವರದಿ ಮಾಡಿದೆ.

ಈ ಸರಣಿಗೆ ಇತ್ತೀಚೆಗೆ ತಂದೆಯನ್ನು ಕಳೆದುಕೊಂಡಿರುವ ಹಾರ್ದಿಕ್​ ಪಾಂಡ್ಯ ಟೆಸ್ಟ್​ ತಂಡಕ್ಕೆ ಕಮ್​ಬ್ಯಾಕ್​ ಮಾಡಿದ್ದಾರೆ. ಜೊತೆಗೆ ಎಡಗೈ ಸ್ಪಿನ್ನರ್​ ಅಕ್ಸರ್​ ಪಟೇಲ್​ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಆದರೆ, ಆಸ್ಟ್ರೇಲಿಯಾ ಟೆಸ್ಟ್​ ಸರಣಿಯಲ್ಲಿ ಪದಾರ್ಪಣೆ ಮಾಡಿದ್ದ ಟಿ.ನಟರಾಜನ್, ನವದೀಪ್ ಸೈನಿ ಹಾಗೂ ಆರಂಭಿಕರಾಗಿ ವೈಫಲ್ಯ ಅನುಭವಿಸಿದ ಪೃಥ್ವಿ ಶಾ ಅವರನ್ನು ತಂಡದಿಂದ ಡ್ರಾಪ್​ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಟೀಮ್ ಇಂಡಿಯಾ

ಚೇತನ್​ ಶರ್ಮಾ ನೇತೃತ್ವದ ಆಯ್ಕೆ ಸಮಿತಿ ಇಂಗ್ಲೆಂಡ್​ ಸರಣಿಗೆ ವರ್ಚುವಲ್ ಸಭೆ ನಡೆಸಿ ಈ 18 ಸದಸ್ಯರ ತಂಡವನ್ನು ಆಯ್ಕೆ ಮಾಡಿದ್ದಾರೆ. ಈ ಸಭೆಗೆ ಖಾಯಂ ನಾಯಕ ವಿರಾಟ್​ ಕೊಹ್ಲಿ ಹಾಗೂ ಆಯ್ಕೆ ಸಮಿತಿಯ ಇತರೆ ಸದಸ್ಯರು ಹಾಜರಾಗಿದ್ದರು.

18 ಸದಸ್ಯರ ಭಾರತ ತಂಡ

ಆರಂಭಿಕರು :ರೋಹಿತ್ ಶರ್ಮಾ, ಶುಭಮನ್ ಗಿಲ್​, ಮಯಾಂಕ್ ಅಗರ್​ವಾಲ್​

ಮಧ್ಯಮ ಕ್ರಮಾಂಕ :ಚೇತೇಶ್ವರ್​ ಪೂಜಾರ, ವಿರಾಟ್ ಕೊಹ್ಲಿ(ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್, ವೃದ್ಧಿಮಾನ್ ಸಹಾ, ಹಾರ್ದಿಕ್ ಪಾಂಡ್ಯ, ಕೆ ಎಲ್ ರಾಹುಲ್​(ಫಿಟ್​ ಆದ್ರೆ ಮಾತ್ರ)

ಫಾಸ್ಟ್​ ಬೌಲರ್ಸ್​ :ಜಸ್ಪ್ರೀತ್ ಬುಮ್ರಾ, ಇಶಾಂತ್​ ಶರ್ಮಾ, ಮೊಹಮ್ಮದ್ ಸಿರಾಜ್, ಶಾರ್ದುಲ್ ಠಾಕೂರ್​

ಸ್ಪಿನ್​ ಬೌಲರ್ :ಆರ್​.ಅಶ್ವಿನ್, ಕುಲ್ದೀಪ್ ಯಾದವ್​, ವಾಷಿಂಗ್ಟನ್ ಸುಂದರ್​, ಅಕ್ಸರ್ ಪಟೇಲ್​

ಸ್ಟ್ಯಾಂಡ್​ ಬೈ ಆಟಗಾರರು :ಕೆ ಎಸ್ ಭರತ್​(ವಿ.ಕೀ), ಅಭಿಮನ್ಯು ಈಶ್ವರನ್​, ಶಹ್ಬಾಜ್ ನದೀಮ್​, ರಾಹುಲ್​ ಚಹಾರ್​

ನೆಟ್​ ಬೌಲರ್ಸ್​ : ಅಂಕಿತ್ ರಜಪೂತ್​, ಅವೇಶ್​ ಖಾನ್​, ಸಂದೀಪ್ ವಾರಿಯರ್, ಕೆ. ಗೌತಮ್​, ಸೌರಭ್ ಕುಮಾರ್​

ABOUT THE AUTHOR

...view details