ಕರ್ನಾಟಕ

karnataka

ETV Bharat / sports

ಯಾವುದೇ ಕ್ರಮಾಂಕದಲ್ಲಿ ಆಡಲು ನಾನು ಸಿದ್ಧ.. ಇಶಾನ್ ಕಿಶನ್ - Ishan Kishan on Rohit sharma

13ನೇ ಆವೃತ್ತಿಯ ಐಪಿಎಲ್‌ನಲ್ಲಿ ಇಶಾನ್​ ಸ್ಫೋಟಕ ಬ್ಯಾಟಿಂಗ್​ ನಡೆಸಿ ಮುಂಬೈ ಇಂಡಿಯನ್ಸ್ ಚಾಂಪಿಯನ್ಸ್ ಆಗಲು ಪ್ರಮುಖ ಪಾತ್ರವಹಿಸಿದ್ದರು. 14 ಪಂದ್ಯಗಳಿಂದ 516 ರನ್ ಸಿಡಿಸಿ ತಂಡದ ಗರಿಷ್ಠ ಸ್ಕೋರರ್​ ಆಗಿದ್ದರು. ಅಲ್ಲದೆ ವಿಜಯ ಹಜಾರೆ ಟ್ರೋಫಿಯ ಮೊದಲ ಪಂದ್ಯದಲ್ಲಿ 94 ಎಸೆತಗಳಲ್ಲಿ 173 ರನ್​ ಸಿಡಿಸಿದ್ದರು..

ಇಂಗ್ಲೆಂಡ್ vs ಭಾರತ ಟಿ20
ಇಶಾನ್ ಕಿಶನ್

By

Published : Mar 13, 2021, 7:33 PM IST

ಮುಂಬೈ :ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿರುವ ಜಾರ್ಖಂಡ್ ತಂಡದ ನಾಯಕ ಹಾಗೂ ಮುಂಬೈ ಇಂಡಿಯನ್ಸ್​ ತಂಡದ ಸ್ಪೋಟಕ ಬ್ಯಾಟ್ಸ್‌ಮನ್​ ಇಶಾನ್ ಕಿಶನ್, ತಾನು ಭಾರತ ತಂಡದ ಯಾವುದೇ ಕ್ರಮಾಂಕದಲ್ಲಾದರೂ ಆಡಲು ಸಿದ್ಧ ಎಂದು ತಿಳಿಸಿದ್ದಾರೆ. ಅದರಲ್ಲೂ ತಂಡ ಸಂಕಷ್ಟದಲ್ಲಿದ್ದಾಗ ಬ್ಯಾಟಿಂಗ್ ಮಾಡಲು ಹೆಚ್ಚು ವಿಶ್ವಾಸವಿದೆ ಎಂದಿದ್ದಾರೆ.

13ನೇ ಆವೃತ್ತಿಯ ಐಪಿಎಲ್ ಇಶಾನ್​ ಸ್ಫೋಟಕ ಬ್ಯಾಟಿಂಗ್​ ನಡೆಸಿ ಮುಂಬೈ ಇಂಡಿಯನ್ಸ್ ಚಾಂಪಿಯನ್ಸ್ ಆಗಲು ಪ್ರಮುಖ ಪಾತ್ರವಹಿಸಿದ್ದರು. 14 ಪಂದ್ಯಗಳಿಂದ 516 ರನ್ ಸಿಡಿಸಿ ತಂಡದ ಗರಿಷ್ಠ ಸ್ಕೋರರ್​ ಆಗಿದ್ದರು. ಅಲ್ಲದೆ ವಿಜಯ ಹಜಾರೆ ಟ್ರೋಫಿಯ ಮೊದಲ ಪಂದ್ಯದಲ್ಲಿ 94 ಎಸೆತಗಳಲ್ಲಿ 173 ರನ್​ ಸಿಡಿಸಿದ್ದರು.

ಈ ಪ್ರದರ್ಶನದ ಹಿನ್ನೆಲೆ ಅವರು ಭಾರತ ಟಿ20 ತಂಡಕ್ಕೆ ಆಯ್ಕೆಯಾಗಿದ್ದು, ತಾನು ತಂಡಕ್ಕಾಗಿ ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಸಿದ್ಧನಿದ್ದೇನೆ ಎಂದು ತಿಳಿಸಿದ್ದಾರೆ.

"ಭಾರತ ತಂಡಕ್ಕೆ ಸೇರ್ಪಡೆಗೊಳ್ಳುವುದು ಯಾವಾಗಲೂ ಕಷ್ಟದ ಕೆಲಸ. ಆದರೆ, ಅದು ಯಾವಾಗಲೂ ಹೀಗೆ ಇರುತ್ತದೆ. ನನ್ನ ವೃತ್ತಿಜೀವನದಲ್ಲಿ ಇದುವರೆಗೆ ಮಧ್ಯಮ ಮತ್ತು ಅಗ್ರ ಕ್ರಮಾಂಕದಲ್ಲಿ ಸಾಕಷ್ಟು ಬಾರಿ ಆಡಿದ್ದೇನೆ. ಹಾಗಾಗಿ, ಯಾವುದೇ ಕ್ರಮಾಂಕದಲ್ಲಿ ಆಡಲು ನಾನು ಸಿದ್ಧನಿದ್ದೇನೆ" ಎಂದು ಮುಂಬೈನಲ್ಲಿ ವಿಸ್ಡನ್​ಗೆ ನೀಡಿದ ಸಂದರ್ಶದಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ:2ನೇ ಟಿ-20: ಆಂಗ್ಲರ​ ವಿರುದ್ಧ ತಿರುಗಿ ಬೀಳುವ ವಿಶ್ವಾಸದಲ್ಲಿ ಕೊಹ್ಲಿಪಡೆ, ಪಾಂಡ್ಯ-ಪಂತ್ ಮೇಲಿದ ಭಾರಿ ನಿರೀಕ್ಷೆ

ನಾನು ಒತ್ತಡದಲ್ಲಿ ಬ್ಯಾಟಿಂಗ್ ಮಾಡುವುದಕ್ಕೆ ಹೆಚ್ಚು ವಿಶ್ವಾಸವಿದೆ. ನಾನು ವಿವಿಧ ದೇಶೀಯ ಟೂರ್ನಿಗಳು, ಇಂಡಿಯಾ ಎ ಪರ ಆಡಿರುವುದರಿಂದ ಪರಿಸ್ಥಿರಿಗೆ ತಕ್ಕಂತೆ ಆಡಲು ನನಗೆ ನೆರವಾಗಿದೆ ಎಂದು ಅವರು ಹೇಳಿದ್ದಾರೆ.

ಐಪಿಎಲ್ ವೇಳೆ ತಮಗೆ ಮಾರ್ಗದರ್ಶನ ನೀಡಿದ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಡೈರೆಕ್ಟರ್ ಆಫ್​ ಜನರಲ್ ಜಹೀರ್​ ಖಾನ್​ 22 ವರ್ಷದ ಆಟಗಾರ ತಮ್ಮ ಟೀಂ ಇಂಡಿಯಾದಲ್ಲಿ ಅವಕಾಶ ಪಡೆದಿದ್ದರ ಸಂಪೂರ್ಣ ಕ್ರಿಡಿಟ್ ನೀಡಿದ್ದಾರೆ.

ರೋಹಿತ್ ಶರ್ಮಾ ಮತ್ತು ಇನ್ನಿತರ ಸ್ಟಾರ್ ಆಟಗಾರರನ್ನು ಡ್ರೆಸ್ಸಿಂಗ್ ರೂಮಿನಲ್ಲಿ ಹೊಂದಿರುವುದು ಅದ್ಭುತವೆನಿಸಿದೆ. ಅಲ್ಲಿ ನೀವು ಸಾಕಷ್ಟು ಕಲಿಯಲು ಮತ್ತು ಅನುಗುಣವಾಗಿ ನಿಮ್ಮ ಆಟವನ್ನು ರೂಡಿಸಿಕೊಳ್ಳಬಹುದು.

ಮುಂಬೈ ಇಂಡಿಯನ್ಸ್​ ನನ್ನ ಕ್ರಿಕೆಟ್​ನ ತಳಪಾಯವಾಗಿದೆ. ರೋಹಿತ್ ಶರ್ಮಾ ಮತ್ತು ಜಹೀರ್ ಖಾನ್​ ಅವರಿಂದ ಸಾಕಷ್ಟು ಮಾರ್ಗದರ್ಶನ ಪಡೆದಿರುವುದು ನನಗೆ ಸಾಕಷ್ಟು ನೆರವಾಗಿದೆ ಎಂದು ಅವರು ತಿಳಿಸಿದ್ದಾರೆ.

ABOUT THE AUTHOR

...view details