ಸಿಡ್ನಿ:ಆಸ್ಟ್ರೇಲಿಯಾ ವಿರುದ್ಧ ಎಸ್‌ಸಿಜಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಚಹಾಲ್ 10 ಓವರ್‌ಗಳಲ್ಲಿ 89 ರನ್ ಬಿಟ್ಟುಕೊಟ್ಟು ಕಳಪೆ ದಾಖಲೆ ಬರೆದಿದ್ದಾರೆ.
ಭಾರತ-ಆಸೀಸ್ ಏಕದಿನ ಪಂದ್ಯ: ಕಳಪೆ ದಾಖಲೆ ಬರೆದ ಚಹಾಲ್ - ವಿರಾಟ್ ಕೊಹ್ಲಿ ಲೇಟೆಸ್ಟ್ ನ್ಯೂಸ್
ಆಸೀಸ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಯಜುವೇಂದ್ರ ಚಹಾಲ್ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ಭಾರತೀಯ ಸ್ಪಿನ್ನರ್ ಎಂಬ ಕಳಪ ದಾಖಲೆ ಬರೆದಿದ್ದಾರೆ.
ಈ ಹಿಂದೆ ಏಕದಿನ ಕ್ರಿಕೆಟ್ನಲ್ಲಿ 88 ರನ್ ಬಿಟ್ಟುಕೊಟ್ಟು ಅತಿ ಹೆಚ್ಚು ರನ್ ಬಿಟ್ಟುಕೊಟ್ಟಿದ್ದ ಭಾರತೀಯ ಸ್ಪಿನ್ನರ್ ಎಂಬ ಕಳಪ ದಾಖಲೆ ಬರೆದಿದ್ದ ಚಹಾಲ್, ಇಂದು ತಮ್ಮದೇ ದಾಖಲೆಯನ್ನು ಬ್ರೇಕ್ ಮಾಡಿ 89 ರನ್ ಬಿಟ್ಟುಕೊಟ್ಟಿದ್ದಾರೆ. ಈ ಮೂಲಕ ಏಕದಿನ ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ಭಾರತೀಯ ಸ್ಪಿನ್ನರ್ ಎಂಬ ಕಳಪೆ ದಾಖಲೆ ಬರೆದಿದ್ದಾರೆ.
2015ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 106 ರನ್ ಬಿಟ್ಟುಕೊಟ್ಟಿದ್ದ ಭುವನೇಶ್ವರ್ ಕುಮಾರ್ ಏಕದಿನ ಪಂದ್ಯಗಳಲ್ಲಿ ಒಟ್ಟಾರೆ ಹೆಚ್ಚಿನ ರನ್ ನೀಡಿದ ಭಾರತೀಯ ಬೌಲರ್ ಎಂಬ ಕಳಪೆ ದಾಖಲೆ ಹೊಂದಿದ್ದಾರೆ.