ಕರ್ನಾಟಕ

karnataka

ETV Bharat / sports

ಭಾರತ ತಂಡದ ಕಳಪೆ ಪ್ರದರ್ಶನಕ್ಕೆ ಕೊಹ್ಲಿ ಎಡವಟ್ಟು ಕಾರಣವಾಯ್ತೇ? - ರಶೀದ್​ ಖಾನ್​

ಅಫ್ಘಾನ್​ ನಂತಹ ಸ್ಪಿನ್​ ಬೌಲಿಂಗ್ ತಂಡದೆದುರು, ಅದೂ ಸೌತಾಮ್ಟನ್‌​ನಂತಹ ಬೌಲಿಂಗ್​ ಸ್ನೇಹಿ ಪಿಚ್​ನಲ್ಲಿ ತಂಡದ ಆಯ್ಕೆ ಮಾಡುವಲ್ಲಿ ಕೊಹ್ಲಿ ವಿಫಲರಾಗಿದ್ದಾರೆ. ಎಲ್ಲಾ ಬಲಗೈ ಬ್ಯಾಟ್ಸ್​ಮನ್​ಗಳನ್ನೇ ಆಯ್ಕೆ ಮಾಡಿರುವುದು ತಂಡಕ್ಕೆ ಹೊಡೆತ ನೀಡಿದೆ. ಇಡೀ ತಂಡದಲ್ಲಿ ಕುಲ್ದೀಪ್​ ಮಾತ್ರ ಎಡಗೈ ಬ್ಯಾಟ್ಸ್​ಮನ್​ ಆಗಿದ್ದಾರೆ.

ಕೊಹ್ಲಿ

By

Published : Jun 22, 2019, 8:16 PM IST

ಸೌತಾಮ್ಟನ್‌ ​: ವಿಶ್ವಕಪ್​ನಲ್ಲಿ ಕ್ರಿಕೆಟ್​ ಶಿಶು ಅಫ್ಘಾನಿಸ್ತಾನದ ವಿರುದ್ಧ 50 ಓವರ್​ಗಳಲ್ಲಿ ಕೇವಲ 8 ವಿಕೆಟ್​ ಕಳೆದುಕೊಂಡು 224 ರನ್​ಗಳ ಸಾಧಾರಣ ಮೊತ್ತ ದಾಖಲಿಸಿದೆ.

ಅಫ್ಘಾನ್‌ನಂತಹ ಸ್ಪಿನ್​ ಬೌಲಿಂಗ್ ತಂಡದೆದರು, ಅದೂ ಸೌತಾಮ್ಟನ್‌​ನಂತಹ ಬೌಲಿಂಗ್​ ಸ್ನೇಹಿ ಪಿಚ್​ನಲ್ಲಿ ತಂಡದ ಆಯ್ಕೆ ಮಾಡುವಲ್ಲಿ ಕೊಹ್ಲಿ ವಿಫಲರಾಗಿದ್ದಾರೆ. ಎಲ್ಲಾ ಬಲಗೈ ಬೌಲರ್‌ಗಳನ್ನೇ ಆಯ್ಕೆ ಮಾಡಿರುವುದು ತಂಡಕ್ಕೆ ಹೊಡೆತ ನೀಡಿದೆ. ಇಡೀ ತಂಡದಲ್ಲಿ ಕುಲ್ದೀಪ್​ ಮಾತ್ರ ಎಡಗೈ ಬೌಲರ್‌​ ಆಗಿದ್ದಾರೆ.

ಇದೇ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ ಅನುಭವವಿದ್ದರೂ ಕೊಹ್ಲಿ ಎಡಗೈ ಬ್ಯಾಟ್ಸ್​​ಮನ್​ನೊಬ್ಬನನ್ನು ಆಯ್ಕೆ ಮಾಡಬಹುದಿತ್ತು. ಶಿಖರ್​ ಧವನ್​ ಬದಲಿಗೆ ಆಯ್ಕೆಯಾಗಿರುವ ರಿಷಭ್​ ಪಂತ್​ಗೆ ಅವಕಾಶ ನೀಡಿದ್ದರೆ ಅಫ್ಘಾನಿಸ್ತಾನ ತಂಡಕ್ಕೆ ಬೌಲಿಂಗ್​ ಮಾಡುವುದಕ್ಕೆ ಕೊಂಚ ಕಷ್ಟವಾಗಬಹುದಿತ್ತು. ಮೊದಲ ಓವರ್​ನಿಂದಲೇ ಒಂದೇ ರೀತಿಯ ಫೀಲ್ಡಿಂಗ್​ ಸೆಟ್​ ಮಾಡಿಕೊಂಡ ಅಫ್ಘಾನಿಸ್ತಾನ ತಂಡ 50 ನೇ ಓವರ್​ ಎಸೆಯುವ ತನಕ ಫೀಲ್ಡಿಂಗ್​ನಲ್ಲಿ ಹೆಚ್ಚೇನು ಬದಲಾವಣೆ ಮಾಡಲಿಲ್ಲ.

ರಶೀದ್​, ಮುಜೀಬ್​, ನಬಿ ಹಾಗೂ ರಹ್ಮತ್​ ಶಾ ಬಲಗೈ ಬ್ಯಾಟ್ಸ್​ಮನ್​ಗಳಿಗೆ ಉತ್ತಮ ಲೈನ್​ ಅಂಡ್​ ಲೆಂತ್​ ಕಾಪಾಡಿಕೊಂಡರಲ್ಲದೇ, ಧೋನಿಯಂಥ ಬಲಿಷ್ಠ ಬ್ಯಾಟ್ಸ್​ಮನ್​ ಹೊಡೆದ ಹೊಡೆತಗಳೆಲ್ಲಾ 30 ಅಡಿ ವ್ಯಾಪ್ತಿಯಲ್ಲಿ ನಿಂತಿದ್ದ ಫೀಲ್ಡರ್​ ಬಿಟ್ಟು ದಾಟದಂತೆ ನೋಡಿಕೊಂಡರು. ಭಾರತ ತಂಡದ ನ್ಯೂನತೆಯನ್ನೇ ಅಸ್ತ್ರವಾಗಿ ಉಪಯೋಗಿಸಿಕೊಂಡ ಅಫ್ಘಾನ್​ ತಂಡ 50 ಓವರ್​ಗಳಲ್ಲಿ 34 ಓವರ್​ಗಳನ್ನು ಸ್ಪಿನ್​ ಕೋಟಾದಲ್ಲೇ ಮುಗಿಸಿತು. ಸ್ಪಿನ್​ ಬೌಲಿಂಗ್​ನಲ್ಲಿ ಬಿಟ್ಟುಕೊಟ್ಟಿದ್ದು, ಕೇವಲ 119 ರನ್​ ಮಾತ್ರ. ವೇಗದ ಬೌಲಿಂಗ್​ನಲ್ಲಿ 16 ಓವರ್​ಗಳಲ್ಲಿ 105 ರನ್ ಬಿಟ್ಟುಕೊಟ್ಟರು.

ABOUT THE AUTHOR

...view details