ಮ್ಯಾಂಚೆಸ್ಟರ್: ವಿಂಡೀಸ್ ವಿರುದ್ಧ ಮೊಹ್ಮಮದ್ ಶಮಿ ಹಾಗೂ ಬುಮ್ರಾರ ಅದ್ಭುತ ಬೌಲಿಂಗ್ ದಾಳಿ ನೆರವಿನಿಂದ ಭಾರತ ತಂಡ 125 ರನ್ಗಳ ಬೃಹತ್ ಜಯಸಾಧಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾಗೆ ನಾಯಕ ವಿರಾಟ್ ಕೊಹ್ಲಿ 72, ಧೋನಿ 56, ರಾಹುಲ್ 48 ಹಾಗೂ ಹಾರ್ದಿಕ್ ಪಾಂಡ್ಯ 46 ರನ್ಗಳಿಸಿ 269 ರನ್ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.
ಭಾರತ ನೀಡಿದ 269 ರನ್ಗಳ ಗುರಿ ಬೆನ್ನೆತ್ತಿದ ವಿಂಡೀಸ್ ಭಾರತ ಸಂಘಟಿ ಬೌಲಿಂಗ್ ದಾಳಿಗೆ ನಲುಗಿ ಕೇವಲ 34.2 ಓವರ್ಗಳಲ್ಲಿ 143 ರನ್ಗಳಿಗೆ ಸರ್ವಪತನಕಂಡಿತು. ಇಂದೇ ಮೊದಲ ಪಂದ್ಯವಾಡಿದ ಸುನಿಲ್ ಆ್ಯಂಬ್ರಿಸ್ 31 ರನ್ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ನಿಕೋಲಸ್ ಪೂರನ್ 28 ರನ್ಗಳಿಸಿದರು.