ಕರ್ನಾಟಕ

karnataka

ETV Bharat / sports

ಮಿಂಚಿದ ಹ್ಯಾರೀಸ್​,ಬಾಬರ್​... ದಕ್ಷಿಣ ಆಫ್ರಿಕಾ ತಂಡಕ್ಕೆ 309 ರನ್​ಗಳ ಟಾರ್ಗೆಟ್​ ನೀಡಿದ ಪಾಕಿಸ್ತಾನ - ಪಾಕಿಸ್ತಾನ

ಬಾಬರ್​ ಅಜಂ ಹಾಗೂ ಹ್ಯಾರೀಸ್​ ಸೊಹೈಲ್​ ಅವರ ಭರ್ಜರಿ ಅರ್ಧಶತಕದ ನೆರವಿನಿಂದ ಪಾಕಿಸ್ತಾನ ತಂಡ ದಕ್ಷಿಣ ಅಫ್ರಿಕಾ ತಂಡಕ್ಕೆ 309 ರನ್​ಗಳ ಟಾರ್ಗೆಟ್​ ನೀಡಿದೆ.

ಬಾಬರ್​

By

Published : Jun 23, 2019, 6:58 PM IST

Updated : Jun 23, 2019, 7:33 PM IST

ಲಾರ್ಡ್ಸ್​: ಬಾಬರ್​ ಅಜಂ ಹಾಗೂ ಹ್ಯಾರೀಸ್​ ಸೊಹೈಲ್​ ಅವರ ಭರ್ಜರಿ ಅರ್ಧಶತಕದ ನೆರವಿನಿಂದ ಪಾಕಿಸ್ತಾನ ತಂಡ ದಕ್ಷಿಣ ಅಫ್ರಿಕಾ ತಂಡಕ್ಕೆ 309 ರನ್​ಗಳ ಟಾರ್ಗೆಟ್​ ನೀಡಿದೆ.

ಟಾಸ್​ ಗೆದ್ದು ಬ್ಯಾಟಿಂಗ್​ ನಡೆಸಿದ ಪಾಕಿಸ್ತಾನ ತಂಡಕ್ಕೆ ಆರಂಭಿಕರಾದ ಇಮಾಮ್​ ಉಲ್ ಹಕ್​ (44) ಹಾಗೂ ಫಖರ್ ಜಮಾನ್​ (​44) 81 ರನ್​ಗಳ ಜೊತೆಯಾಟ ನೀಡಿ ಉತ್ತಮ ಆರಂಭ ನೀಡಿದರು. ಈ ಇಬ್ಬರು ಆರಂಭಿಕರನ್ನು ಇಮ್ರಾನ್​ ತಾಹೀರ್​ ಪೆವಿಲಿಯನ್​ಗಟ್ಟಿದರು.

ನಂತರ ಬಂದ ಬಾಬರ್​ ಅಜಂ(69) ಹಾಗೂ ಹಫೀಜ್​(20) 3ನೇ ವಿಕೆಟ್​ ಜೊತೆಯಾಟದಲ್ಲಿ 45 ರನ್​ಗಳ ಜೊತೆಯಾಟ ನೀಡಿದರು 20 ರನ್​ಗಳಿಸಿದ್ದ ಹಫೀಜ್​ ಮ್ಯಾಕ್ರಮ್​ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ದರು.143ಕ್ಕೆ 3 ವಿಕೆಟ್​ ಕಳೆದುಕೊಂಡಿದ್ದ ಪಾಕಿಸ್ತಾನಕ್ಕೆ ಬಾಬರ್​ ಹಾಗೂ ಹ್ಯಾರೀಸ್​ ಸೋಹೈಲ್​ 82 ರನ್​ಗಳ ಜೊತೆಯಾಟ ನೀಡಿ ಕುಸಿತದಿಂದ ಪಾರು ಮಾಡಿದರು.

80 ಎಸೆತಗಳಲ್ಲಿ 69 ರನ್​ಗಳಿಸಿದ್ದ ಬಾಬರ್​ ಪೆಹ್ಲುಕ್ವಾಯೋ ಓವರ್​ನಲ್ಲಿ ಎನ್​ಗಿಡಿಗೆ ಕ್ಯಾಚ್​ ನೀಡಿ ಔಟಾದರು. 6ನೇ ಬ್ಯಾಟ್ಸ್​ಮನ್​ ಆಗಿ ಕ್ರೀಸ್​ಗಿಳಿದ ಇಮಾದ್​ ವಾಸೀಂ(23) 6 ನೇ ವಿಕೆಟ್​ ಜೊತೆಯಾಟದಲ್ಲಿ 61 ರನ್​ ಸೇರಿಸಿ 47 ನೇ ಓವರ್​ನಲ್ಲಿ ಔಟಾದರು. ವಿಶ್ವಕಪ್​ನಲ್ಲಿ ತಮ್ಮ 2ನೇ ಪಂದ್ಯವಾಡಿದ ಸೋಹೈಲ್​ 59 ಎಸೆತಗಳಲ್ಲಿ 9 ಬೌಂಡರಿ ಹಾಗೂ3 ಭರ್ಜರಿ ಸಿಕ್ಸರ್​ಗಳ ನೆರವಿನಿಂದ 89 ರನ್​ಗಳಿಸಿ ಕೊನೆಯ ಓವರ್​ನಲ್ಲಿ ಔಟಾದರು.

ದಕ್ಷಿಣ ಆಫ್ರಿಕಾ ಪರ ಲುಂಗಿ ಎನ್​ಗಿಡಿ 3, ತಾಹೀರ್​ 2, ಮ್ಯಾರ್ಕ್ರಮ್​ 1 ಹಾಗೂ ಪೆಹ್ಲುಕ್ವಾಯೋ 1 ವಿಕೆಟ್​ ಪಡೆದರು. ರಬಾಡ 10 ಓವರ್​ಗಳಲ್ಲಿ 65, ಮೋರೀಸ್​ 9 ಓವರ್​ಗಳಲ್ಲಿ 61 ನೀಡಿ ದುಬಾರಿ ಯಾದರು.

Last Updated : Jun 23, 2019, 7:33 PM IST

ABOUT THE AUTHOR

...view details