ಮುಂಬೈ:ಭಾರತ ತಂಡದ ನಾಯಕ ಹಾಗೂ ಉಪ ನಾಯಕರಾದ ಕೊಹ್ಲಿ-ರೋಹಿತ್ ಜೋಡಿ ಐಸಿಸಿ ಏಕದಿನ ರ್ಯಾಂಕಿಂಗ್ನಲ್ಲಿ ತಮ್ಮ ಅಧಿಪತ್ಯ ಮುಂದುವರಿಸಿದ್ದು, ಮೊದಲೆರಡು ಸ್ಥಾನದಲ್ಲೇ ಮುಂದುವರೆದಿದ್ದಾರೆ.
ಇಂದು ಬಿಡುಗಡೆಯಾದ ನೂತನ ಐಸಿಸಿ ರ್ಯಾಂಕಿಂಗ್ನಲ್ಲಿ ಕೊಹ್ಲಿ 891 ರೇಟಿಂಗ್ನೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ರೋಹಿತ್ ಶರ್ಮಾ 885 ರೇಟಿಂಗ್ನೊಂದಿಗೆ 2ನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ವಿಶ್ವಕಪ್ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ ಪಾಕಿಸ್ತಾನದ ಬಾಬರ್ 5 ಸ್ಥಾನ ಮೇಲೆ ಬಂದಿದ್ದು, 3ನೇ ಸ್ಥಾನ ಪಡೆದಿದ್ದಾರೆ. ಡು ಪ್ಲೆಸಿಸ್ 2 ಸ್ಥಾನ ಏರಿಕೆ ಕಂಡು 4ನೇ ಸ್ಥಾನಕ್ಕೆ ಜಿಗಿದಿದ್ದಾರೆ. ರಾಸ್ ಟೇಲರ್ 2 ಸ್ಥಾನ ಕುಸಿದಿದ್ದು, 5ನೇ ಸ್ಥಾನದಲ್ಲಿದ್ದಾರೆ.