ಮುಂಬೈ:ಐಸಿಸಿ ಬಿಡುಗಡೆ ಮಾಡಿದ ನೂತನ ಬೌಲಿಂಗ್ ರ್ಯಾಂಕಿಂಗ್ನಲ್ಲಿ ಭಾರತದ ಮೂವರು ಮಹಿಳಾ ಮಣಿಯರು ಟಾಪ್ 10ನಲ್ಲಿ ತಮ್ಮ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಶನಿವಾರ ಬಿಡುಗಡೆಯಾದ ಶ್ರೇಯಾಂಕ ಪಟ್ಟಿಯಲ್ಲಿ ಇಂಗ್ಲೆಂಡ್ನ ಸ್ಪಿನ್ ಬೌಲರ್ ಸೋಫಿ ಎಕ್ಲೆಸ್ಟೋನ್ 3 ಸ್ಥಾನ ಮೇಲೇರಿ 4ನೇ ಸ್ಥಾನ ಪಡೆದುಕೊಂಡಿದ್ದಾರೆ. ಪಾಕಿಸ್ತಾನದ ವಿರುದ್ಧದ ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದರಿಂದ ಜಿಗಿತ ಕಂಡಿದ್ದಾರೆ.
ಇನ್ನುಳಿದಂತೆ ಆಸ್ಟ್ರೇಲಿಯಾದ ಮೆಗನ್ ಶುಟ್ ಮೊದಲ ಸ್ಥಾನದಲ್ಲಿ ಮುಂದುವರಿದ್ದರೆ, ಭಾರತದ ರಾಧ ಯಾದವ್ ಹಾಗೂ ದಕ್ಷಿಣಆಫ್ರಿಕಾ ಶಬ್ನಿಮ್ ಇಸ್ಮಾಯಿಲ್ ನಂತರದ ಸ್ಥಾನದಲ್ಲಿದ್ದಾರೆ. ಭಾರತದ ದೀಪ್ತಿ ಶರ್ಮಾ 5, ಪೂನಮ್ ಯಾದವ್ 6ನೇ ಸ್ಥಾನದಲ್ಲಿದ್ದಾರೆ.
ಮೊದಲ 10ರಲ್ಲಿ ಭಾರತೀಯರು ಮೂವರು ಸ್ಥಾನ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಆಸ್ಟ್ರೇಲಿಯಾದ ಇಬ್ಬರು, ಕಿವೀಸ್ನ ಇಬ್ಬರು ಹಾಗೂ ವಿಂಡೀಸ್, ಇಂಗ್ಲೆಂಡ್ ದಕ್ಷಿಣ ಅಫ್ರಿಕಾ ತಂಡದಿಂದ ತಲಾ ಒಬ್ಬ ಆಟಗಾರ್ತಿ ಟಾಪ್ 10ನಲ್ಲಿ ಕಾಣಿಸಿಕೊಂಡಿದ್ದಾರೆ. ಬ್ಯಾಟಿಂಗ್ ರ್ಯಾಂಕಿಂಗ್ನಲ್ಲೂ ಮೂವರು ಭಾರತೀಯರು ಟಾಪ್ 10ನಲ್ಲಿದ್ದು ಜಮೀಮಾ ರೊಡ್ರಿಗಸ್ 4, ಸ್ಮೃತಿ ಮಂಧಾನ 7 ಹಾಗೂ ಹರ್ಮನ್ ಪ್ರೀತ್ ಕೌರ್ 10ನೇ ಸ್ಥಾನದಲ್ಲಿದ್ದಾರೆ.