ದುಬೈ: ಕ್ರಿಕೆಟ್ ಇತಿಹಾಸದಲ್ಲೇ 2020ರ ಮಹಿಳಾ ಟಿ-20 ವಿಶ್ವಕಪ್ ಅತಿ ಹೆಚ್ಚು ವೀಕ್ಷಣೆಗೊಳಗಾಗಿ ದಾಖಲೆ ಬರೆದಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
2020ರ ಮಹಿಳಾ ಟಿ-20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆದಿದ್ದು, 1.1 ಬಿಲಿಯನ್ ವಿಡಿಯೋ ವೀಕ್ಷಣೆಗೊಳಗಾಗಿದೆ. ಈ ಹಿಂದಿನ ಆವೃತ್ತಿಗಳಿಗೆ ಹೋಲಿಕೆ ಮಾಡಿದಾಗ ಸುಮಾರು 20 ಪಟ್ಟು ಹೆಚ್ಚಿದೆ. 2017ರ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ನಡೆದಿದ್ದ 2017ರ ಏಕದಿನ ಮಹಿಳಾ ವಿಶ್ವಕಪ್ ವಿಡಿಯೋ ವೀಕ್ಷಣೆಗಿಂತಲೂ 10 ಪಟ್ಟು ಹೆಚ್ಚಾಗಿದೆ ಎಂದು ಐಸಿಸಿ ತಿಳಿಸಿದೆ. ಈ ಎರಡು ಸರಣಿಯಲ್ಲಿ ಟೀಂ ಇಂಡಿಯಾ ಫೈನಲ್ ಪ್ರವೇಶ ಪಡೆದುಕೊಂಡು ರನ್ನರ್ ಆಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.
ಟಿ-20 ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ಟೀಂ ಇಂಡಿಯಾ ಫೈನಲ್ಗೆ ಲಗ್ಗೆ ಹಾಕಿದ್ದರಿಂದಲೇ ಅತಿ ಹೆಚ್ಚು ವೀಕ್ಷಣೆಗೊಳಪಟ್ಟಿದೆ ಎಂದು ತಿಳಿದು ಬಂದಿದೆ. 2020ರ ಟಿ-20 ವಿಶ್ವಕಪ್ನಲ್ಲಿ ಐಸಿಸಿ ಆಯೋಜನೆ ಮಾಡಿರುವ ಎರಡನೇ ಯಶಸ್ವಿ ಟೂರ್ನಮೆಂಟ್ ಇದಾಗಿದ್ದು, ಇದಕ್ಕೂ ಮೊದಲು 2019ರ ಏಕದಿನ ವಿಶ್ವಕಪ್ ನಡೆದಿತ್ತು.
ಭಾರತದಲ್ಲೇ 86.15 ಮಿಲಿಯನ್ ವೀಕ್ಷಣೆಯಾಗಿದ್ದು, 2018ರ ಟೂರ್ನಮೆಂಟ್ಗಿಂತಲೂ ಶೇ. 152ರಷ್ಟು ಜಾಸ್ತಿಯಾಗಿದೆ. ಈ ಟೂರ್ನಿಗಳ ಕಾಮೆಂಟರಿ ಇಂಗ್ಲಿಷ್, ಹಿಂದಿ, ತಮಿಳು, ತೆಲಗು ಹಾಗೂ ಕನ್ನಡದಲ್ಲಿ ಪ್ರಸಾರಗೊಂಡಿದ್ದವು. ಆಸ್ಟ್ರೇಲಿಯಾದಲ್ಲಿ ಇದರ ವೀಕ್ಷಣೆ 13.45 ಮಿಲಿಯನ್ ಆಗಿದ್ದು, 2018ರ ವೀಕ್ಷಣೆಗಿಂತಲೂ 473 ಪ್ರತಿಶತ ಜಾಸ್ತಿಯಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಶೇ. 40ರಷ್ಟು ಹೆಚ್ಚಾಗಿದೆ.