ಮುಂಬೈ:ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯಗೊಳ್ಳುತ್ತಿದ್ದಂತೆ ಟೀಂ ಇಂಡಿಯಾ ಏಕದಿನ ವಿಶ್ವಕಪ್ಗಾಗಿ ಲಂಡನ್ ವಿಮಾನವೇರಲಿದೆ. ಏಕದಿನ ವಿಶ್ವಕಪ್ ಮಹಾಯುದ್ಧದಲ್ಲಿ ಸೆಣಸಾಟ ನಡೆಸಲು ಟೀಂ ಇಂಡಿಯಾ ಇದೇ ತಿಂಗಳ ಪ್ರಕಟಗೊಳ್ಳಲಿದೆ.
ಇದಕ್ಕೆ ಸಂಬಂದಿಸಿದಂತೆ ಮಾಹಿತಿ ಲಭ್ಯವಾಗಿದ್ದು, ಏಪ್ರಿಲ್ 20 ಅಥವಾ ಅದಕ್ಕಿಂತಲೂ ಮುಂಚೆ ಎಂಎಸ್ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ 15 ಸದಸ್ಯರ ಟೀಂ ಇಂಡಿಯಾ ತಂಡ ಪ್ರಕಟಿಸಲಿದ್ದಾರೆ. ಮೇ ತಿಂಗಳಿಂದ ವಿಶ್ವಕಪ್ ಆರಂಭವಾಗಲಿದ್ದು, ಜೂನ್ 5ರಂದು ಟೀಂ ಇಂಡಿಯಾ ದಕ್ಷಿಣ ಆಫ್ರಿಕಾದೊಂದಿಗೆ ಸೆಣಸಾಟ ನಡೆಸುವ ಮೂಲಕ ತನ್ನ ಅಭಿಯಾನ ಆರಂಭ ಮಾಡಲಿದೆ.
ಟೀಂ ಇಂಡಿಯಾ ಪ್ರಕಟಿಸುವುದಕ್ಕೆ ಸಂಬಂಧಿದಂತೆ ಮಾತನಾಡಿರುವ ಎಂಎಸ್ಕೆ ಪ್ರಸಾದ್, ವಿಶ್ವಕಪ್ಗಾಗಿ ಉತ್ತಮ ತಂಡ ಪ್ರಕಟಿಸಲಿದ್ದೇವೆ. ಅದಕ್ಕಾಗಿ ಕಳೆದ ಒಂದೂವರೆ ವರ್ಷದಿಂದ ಕೆಲಸ ಮಾಡಿದ್ದು, ಎಲ್ಲ ಆಟಗಾರರ ಪ್ರದರ್ಶನ ನೋಡಿದ್ದೇವೆ. ಉತ್ತಮ ಜೋಡಿ ಆಯ್ಕೆ ಮಾಡಲಿದ್ದೇವೆ ಎಂದಿರುವ ಅವರು, ಇಂಗ್ಲೆಂಡ್ನಲ್ಲಿ ನಡೆಯುವ ವಿಶ್ವಕಪ್ ಖಂಡಿತವಾಗಿ ಈ ತಂಡ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಕೊಹ್ಲಿ,ವಿಶ್ವಕಪ್ಗಾಗಿ ಟೀಂ ಇಂಡಿಯಾ ಈಗಾಗಲೇ ಸಿದ್ಧಗೊಂಡಿದ್ದು, ಸಮತೋಲನ ತೋರುವ ಒಬ್ಬ ಆಟಗಾರನ ಹುಡುಕಾಟದಲ್ಲಿದ್ದೇವೆ ಎಂದಿದ್ದರು.