ಕೋಲ್ಕತ್ತಾ:ಕೆವಲ ಆಯ್ಕೆ ಸಮಿತಿ ನನ್ನ ಕಡೆಗಣಿಸಿದ ಮಾತ್ರಕ್ಕೆ ನಾನು ಕ್ರಿಕೆಟ್ನಿಂದ ನಿವೃತ್ತಿ ಆಗಲ್ಲ ಎಂದು ಟೀಂ ಇಂಡಿಯಾ ಅಟಗಾರ ಮನೋಜ್ ತಿವಾರಿ ಹೇಳಿದ್ದಾರೆ.
ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಪಶ್ಚಿಮ ಬಂಗಾಳ ತಂಡಕ್ಕೆ ಆಯ್ಕೆಯಾಗುವ ಇಂಗಿತ ಹೊಂದಿದ್ದ ತಿವಾರಿಯನ್ನ ಆಯ್ಕೆ ಸಮಿತಿ ಕಡೆಗಣಿಸಿದ್ದು, ಇದರಿಂದ ಕೋಪಗೊಂಡಿರುವ ತಿವಾರಿ ಆಯ್ಕೆ ಸಮಿತಿ ವಿರುದ್ಧ ಟ್ವಿಟರ್ನಲ್ಲಿ ಆಕ್ರೊಶ ವ್ಯಕ್ತಪಡಿಸಿದ್ದರು.
ಮನೋಜ್ ತಿವಾರಿ ಟ್ವೀಟ್ಗೆ ರೀಟ್ವೀಟ್ ಮಾಡಿರುವ ವ್ಯಕ್ತಿಯೊಬ್ಬರು, ಅಂಬಟಿ ರಾಯುಡು ಅವರಂತೆ ಮನೋಜ್ ತಿವಾರಿಯನ್ನ ನೋಡುವ ಕಾಲ ಬಹಳ ದೂರವಿಲ್ಲ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮನೋಜ್ ತಿವಾರಿ, ಆಯ್ಕೆ ಸಮಿತಿ ನನ್ನ ಕಡೆಗಣಿಸಿದ ಮಾತ್ರಕ್ಕೆ ನಾನು ಕ್ರಿಕೆಟ್ನಿಂದ ನಿವೃತ್ತಿ ಆಗಲ್ಲ. ದೇಶಕ್ಕಾಗಿ ನಾನು ಎಷ್ಟು ಪಂದ್ಯಗಳನ್ನು ಆಡಿದ್ದೇನೆ ಎಂಬುದರ ಮೂಲಕ ನನ್ನ ವೃತ್ತಿ ಜೀವನವನ್ನ ವ್ಯಾಖ್ಯಾನಿಸುವುದಿಲ್ಲ ಎಂದಿದ್ದಾರೆ.
ಆಯ್ಕೆ ಸಮಿತಿ ವಿರುದ್ಧ ಸರಣಿ ಟ್ವೀಟ್ ಮಾಡಿದ್ದ ತಿವಾರಿ, 2018-19ನೇ ದುಲೀಪ್ ಟ್ರೋಫಿ ಟೂರ್ನಿಗೆ ತಂಡವನ್ನ ಆಯ್ಕೆ ಮಾಡಿದಾಗಿನಿಂದ ನಾನು ಗಮನಿಸುತ್ತಿದ್ದೇನೆ. ಎಲ್ಲೂ ಕೂಡ ನನ್ನ ಹೆಸರು ಕಾಣುತ್ತಿಲ್ಲ. ಟೀಂ ಇಂಡಿಯಾ ಅಥವಾ ದುಲೀಪ್ ಟ್ರೋಫಿ ತಂಡಕ್ಕೆ ಆಯ್ಕೆ ಸಮಿತಿ ಯಾವ ಮಾನದಂಡದ ಮೇಲೆ ಆಟಗಾರರನ್ನ ಆಯ್ಕೆ ಮಾಡುತ್ತಿದೆ ಎಂದು ಕೇಳಲು ಬಯಸುತ್ತೇನೆ ಎಂದಿದ್ದರು.