ಕರ್ನಾಟಕ

karnataka

ETV Bharat / sports

ಆಸ್ಟ್ರೇಲಿಯಾ ವಿರುದ್ಧ 2ನೇ ಟೆಸ್ಟ್​ಗೆ​ ಬಲಿಷ್ಠ ತಂಡ ಪ್ರಕಟಿಸಿದ ಗೌತಮ್ ಗಂಭೀರ್​ - ಬಾಕ್ಸಿಂಗ್​ ಡೇ ಟೆಸ್ಟ್​

ಮೆಲ್ಬೋರ್ನ್​ ಕ್ರಿಕೆಟ್​ ಮೈದಾನದಲ್ಲಿ ಡಿಸೆಂಬರ್​ 26ರಂದು ಬಾಕ್ಸಿಂಗ್ ಡೇ ಟೆಸ್ಟ್​ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಭಾರತ ತಂಡ 5 ಬೌಲರ್​ಗಳೊಂದಿಗೆ ಹಾಗೂ ನಾಯಕ ರಹಾನೆಯನ್ನು ನಾಲ್ಕನೇ ಕ್ರಮಾಂಕದಲ್ಲಿ ನೋಡಲು ಬಯಸಿರುವುದಾಗಿ ಗಂಭೀರ್​ ತಿಳಿಸಿದ್ದಾರೆ.

ಬಾಕ್ಸಿಂಗ್​ ಡೇ ಟೆಸ್ಟ್​​ಗೆ ಭಾರತ ತಂಡ ಪ್ರಕಟಿಸಿದ ಗೌತಮ್​ ಗಂಭೀರ್​
ಬಾಕ್ಸಿಂಗ್​ ಡೇ ಟೆಸ್ಟ್​​ಗೆ ಭಾರತ ತಂಡ ಪ್ರಕಟಿಸಿದ ಗೌತಮ್​ ಗಂಭೀರ್​

By

Published : Dec 22, 2020, 10:27 PM IST

ಮುಂಬೈ: ಭಾರತ ತಂಡದ ಮಾಜಿ ಆಟಗಾರ ಗೌತಮ ಗಂಭೀರ್​ ಡಿಸೆಂಬರ್​ 26ರಿಂದ ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್​ಗೆ ಟೀಮ್​ ಇಂಡಿಯಾದಲ್ಲಿ ಹಲವು ಬದಲಾವಣೆ ಅಗತ್ಯವೆಂದು ತಿಳಿಸಿದ್ದು, ರಾಹುಲ್ ಮತ್ತು ಶುಬ್ಮನ್​ ಗಿಲ್​ರನ್ನು ತಂಡದಲ್ಲಿ ನೋಡಲು ಬಯಸುವುದಾಗಿ ತಿಳಿಸಿದ್ದಾರೆ.

ಮೆಲ್ಬೋರ್ನ್​ ಕ್ರಿಕೆಟ್​ ಮೈದಾನದಲ್ಲಿ ಡಿಸೆಂಬರ್​ 26ರಂದು ಬಾಕ್ಸಿಂಗ್ ಡೇ ಟೆಸ್ಟ್​ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಭಾರತ ತಂಡ 5 ಬೌಲರ್​ಗಳೊಂದಿಗೆ ಹಾಗೂ ನಾಯಕ ರಹಾನೆಯನ್ನು ನಾಲ್ಕನೇ ಕ್ರಮಾಂಕದಲ್ಲಿ ನೋಡಲು ಬಯಸಿರುವುದಾಗಿ ಗಂಭೀರ್​ ತಿಳಿಸಿದ್ದಾರೆ.

ಶುಬ್ಮನ್​ ಗಿಲ್​/ ಪೃಥ್ವಿ ಶಾ

ನಾನು ಪೃಥ್ವಿ ಶಾರನ್ನು ಸರಣಿಯ ಆರಂಭದಲ್ಲಿ ಆಡಿಸಲು ಬಯಸಿದ್ದೆ. ಏಕೆಂದರೆ 4 ಪಂದ್ಯಗಳಲ್ಲಿ ಒಂದು ಶತಕ ಹಾಗೂ 2 ಅರ್ಧಶತಕ ಬಾರಿಸಿರುವ ಹಾಗೂ ಕಳೆದ ನ್ಯೂಜಿಲ್ಯಾಂಡ್​ ವಿರುದ್ಧ ಟೆಸ್ಟ್​ನಲ್ಲಿ ಅರ್ಧಶತಕ ಬಾರಿಸಿದ್ದ ಆಟಗಾರನನ್ನ ನೀವು ಆರಂಭದಲ್ಲಿ ಅವಕಾಶ ನೀಡಲೇಬೇಕಿರುತ್ತದೆ. ಅವರ ಫಾರ್ಮ್​ ಉತ್ತಮವಾಗಿಲ್ಲ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅವರ ಫಾರ್ಮ್​ ದೊಡ್ಡ ಸಮಸ್ಯೆಯಲ್ಲ, ಆದರೆ ಅವರಲ್ಲಿ ಕಡಿಮೆ ಆತ್ಮವಿಶ್ವಾಸವಿರುವುದರಿಂದ ಅವರ ಜಾಗದಲ್ಲಿ ಶುಬ್ಮನ್​ ಗಿಲ್​ರನ್ನು ಮಯಾಂಕ್​ ಜೊತೆ ಆರಂಭಿಕನಾಗಿ ಕಾಣಲು ನಾನು ಬಯಸುತ್ತೇನೆ ಎಂದು ಸ್ಟಾರ್​ ಸ್ಪೋರ್ಟ್ಸ್​ನ ಕ್ರಿಕೆಟ್​​ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

Rishabh pant

ಇದನ್ನು ಓದಿ: ಧನಶ್ರೀ ವರ್ಮಾ ಜೊತೆ ಸಪ್ತಪದಿ ತುಳಿದ ಭಾರತೀಯ ಸ್ಪಿನ್ನರ್ ಯುಜ್ವೇಂದ್ರ ಚಹಾಲ್​

ಪೂಜಾರ ಅವರನ್ನು 3ನೇ ಕ್ರಮಾಂಕದಲ್ಲಿ ಹಾಗೂ ಕೊಹ್ಲಿ ಅನುಪಸ್ಥಿತಿಯಲ್ಲಿ ನಾಯಕನಾಗಿ ಬಡ್ತಿ ಪಡೆಯುವ ರಹಾನೆಗೆ 4ನೇ ಕ್ರಮಾಂಕದಲ್ಲಿ ಆಡಲು ನಾನು ಸಲಹೆ ನೀಡುತ್ತೇನೆ. ಇದರ ಜೊತೆಗೆ ರಿಷಭ್ ಪಂತ್​ ಮತ್ತು ರವೀಂದ್ರ ಜಡೇಜಾರನ್ನು ಸಹಾ ಮತ್ತು ಹನುಮ ವಿಹಾರಿ ಜಾಗಕ್ಕೆ ತರಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.

ರವೀಂದ್ರ ಜಡೇಜಾ

ರಹಾನೆ ನಾಯಕನಾಗಿರುವುದರಿಂದ ಮುಂದೆ ನಿಂತು ತಂಡವನ್ನು ಮುನ್ನಡೆಸಬೇಕಿದೆ. ಹಾಗಾಗಿ ರಹಾನೆ ನಾಲ್ಕನೇ ಕ್ರಮಾಂಕದಲ್ಲಿ ಆಡಬೇಕು. ಕೆಎಲ್​ ರಾಹುಲ್​ 5 ಹಾಗೂ ರಿಷಭ್ ಪಂತ್​ 6ನೇ ಕ್ರಮಾಂಕದಲ್ಲಿ ಆಡಿದರೆ. ಆಲ್​ರೌಂಡರ್​ ರವೀಂದ್ರ ಜಡೇಜಾ ಮತ್ತು ಆಶ್ವಿನ್​ ಕ್ರಮವಾಗಿ 7 ಮತ್ತು 8ರಲ್ಲಿ ಬ್ಯಾಟಿಂಗ್​ ಮಾಡಲಿದ್ದಾರೆ. ಒಟ್ಟಾರೆ 5 ಬೌಲರ್​ಗಳ ಜೊತೆಗೆ ಹೋಗಲು ನಾನು ಬಯಸುವುದರಿಂದ ಜಡೇಜಾ ಮತ್ತು ಆಶ್ವಿನ್​ ಜೊತೆಗೆ 3 ವೇಗಿಗಳನ್ನು ತಂಡದಲ್ಲಿ ಆಡಿಸಲು ಬಯಸಿದ್ದೇನೆ. ಬುಮ್ರಾ, ಉಮೇಶ್ ಜೊತೆಗೆ ಸಿರಾಜ್ ಅಥವಾ ಸೈನಿ ಇಬ್ಬರಲ್ಲಿ ಒಬ್ಬರನ್ನು ಆಡಿಸಬಹುದು ಎಂದು ಸಲಹೆ ನೀಡಿದ್ದಾರೆ.

ಭಾರತ ತಂಡ ಮೊದಲ ಟೆಸ್ಟ್​ನಲ್ಲಿ ಮುನ್ನಡೆ ಪಡೆದಿತ್ತಾದರೂ ಎರಡನೇ ಇನ್ನಿಂಗ್ಸ್​ನಲ್ಲಿ ಹೆಜಲ್​ವುಡ್ ಮತ್ತು ಕಮ್ಮಿನ್ಸ್​ ಬೌಲಿಂಗ್​ ದಾಳಿಗೆ ತತ್ತರಿಸಿ 36 ರನ್​ಗಳಿಗೆ ಆಲೌಟ್ ಆಗುವ ಮೂಲಕ 90 ರನ್​ಗಳ ಟಾರ್ಗೆಟ್​ ನೀಡಿತ್ತು. ಆಸ್ಟ್ರೇಲಿಯಾ ತಂಡ ಈ ಮೊತ್ತವನ್ನು 2 ವಿಕೆಟ್​ ಕಳೆದುಕೊಂಡು ತಲುಪಿ ಸರಣಿಯನ್ನು 1-0ಯಲ್ಲಿ ಮುನ್ನಡೆ ಸಾಧಿಸಿತ್ತು.

'ಪೃಥ್ವಿ ಶಾ ಮೇಲೆ ನಂಬಿಕೆಯಿಟ್ಟು ಭಾರತ ಆಡಳಿತ ಮಂಡಳಿ ಮತ್ತೊಂದು ಅವಕಾಶ ನೀಡಲಿ'

ABOUT THE AUTHOR

...view details