ಕರ್ನಾಟಕ

karnataka

ETV Bharat / sports

ಬ್ಯಾಟಿಂಗ್ ​ವೇಳೆ ಕೆ.ಎಲ್.ರಾಹುಲ್ ಬಳಿ ಕ್ಷಮೆ ಕೇಳಿದ್ದೇನೆ ಎಂದ ಮ್ಯಾಕ್ಸ್​ವೆಲ್

ಭಾರತದ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ 19 ಎಸೆತಗಳಿಗೆ 45 ರನ್​ ಗಳಿಸಿದ್ದ ಮ್ಯಾಕ್ಸ್​ವೆಲ್ ಕೆ.ಎಲ್.ರಾಹುಲ್ ಬಳಿ ಕ್ಷಮೆ ಕೇಳಿದ್ದೆ ಎಂದು ಹೇಳಿಕೊಂಡಿದ್ದಾರೆ.

I apologised to KL Rahul
ಬ್ಯಾಟಿಂಗ್​ವೇಳೆ ಕೆ.ಎಲ್.ರಾಹುಲ್ ಬಳಿ ಕ್ಷಮೆ ಕೇಳಿದ್ದೆ ಎಂದ ಮ್ಯಾಕ್ಸ್​ವೆಲ್

By

Published : Nov 28, 2020, 4:40 PM IST

ಸಿಡ್ನಿ: ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಆಸ್ಟ್ರೇಲಿಯಾ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಬ್ಯಾಟಿಂಗ್​ ವೇಳೆ ತಮ್ಮ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆ.ಎಲ್.ರಾಹುಲ್ ಅವರ ಬಳಿ ಕ್ಷಮೆಯಾಚಿಸಿದ್ದೇನೆ ಎಂದು ಟ್ವೀಟ್​ ಮಾಡಿದ್ದಾರೆ.

ಐಪಿಎಲ್​ನಲ್ಲಿ ವೈಫಲ್ಯ ಅನುಭವಿಸಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆಟಗಾರರಾದ ಜಿಮ್ಮಿ ನೀಶಮ್ ಮತ್ತು ಮ್ಯಾಕ್ಸ್​​ವೆಲ್​ ನಿನ್ನೆ ತಮ್ಮ ತವರು ತಂಡಗಳ ಪರ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಅವರಿಬ್ಬರ ಆಟದ ಫಲವಾಗಿ ತಮ್ಮ ತವರು ತಂಡ ಜಯ ಸಾಧಿಸಿದೆ.

ಈ ನಡುವೆ ಟ್ವಿಟರ್​ನಲ್ಲಿ ಫೋಟೋ ಒಂದರ ಮೂಲಕ ಪಂಜಾಬ್ ತಂಡದ ನಾಯಕ ಕೆ.ಎಲ್.ರಾಹುಲ್​ರನ್ನು ಟ್ರೋಲ್​ ಮಾಡಲಾಗುತ್ತಿತ್ತು. ಆ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ಜಿಮ್ಮಿ ನೀಶಮ್ ಟ್ವೀಟ್​ಗೆ ಮ್ಯಾಕ್ಸ್​ವೆಲ್​, ನಾನು ಬ್ಯಾಟಿಂಗ್ ವೇಳೆ ರಾಹುಲ್​ ಬಳಿ ಕ್ಷಮೆ ಕೇಳಿದ್ದೇನೆ ಎಂದು ತಮಾಷೆಯಾಗಿ ಉತ್ತರಿಸಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ನೀಶಮ್ ಮತ್ತು ಮ್ಯಾಕ್ಸ್​ವೆಲ್ ಇಬ್ಬರೂ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಕಳಪೆ ಪಳಪೆ ಪ್ರದರ್ಶನ ತೋರಿದ್ದರು. ಐದು ಪಂದ್ಯಗಳಲ್ಲಿ 19 ರನ್‌ ಗಳಿಸಿದ್ದ ನೀಶಮ್ ಎರಡು ವಿಕೆಟ್‌ ಪಡೆದಿದ್ದರು. ಮ್ಯಾಕ್ಸ್‌ವೆಲ್ 13 ಪಂದ್ಯಗಳಿಂದ ಕೇವಲ 108 ರನ್ ಗಳಿಸಿದ್ದಾರೆ.

ABOUT THE AUTHOR

...view details