ಕರ್ನಾಟಕ

karnataka

ETV Bharat / sports

ಇಂದಿನ ಪಂದ್ಯದಲ್ಲಿ ಡೆಲ್ಲಿ-ಹೈದರಾಬಾದ್​ ಫೈಟ್​: ವಾರ್ನರ್​ ಪಡೆಗೆ ಗೆಲುವು ಅನಿವಾರ್ಯ - ಡೆಲ್ಲಿ ಕ್ಯಾಪಿಟಲ್ಸ್​​

ಅಂಕ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿರುವ ಹೈದರಾಬಾದ್​ ತಂಡ ಇಂದು ಡೆಲ್ಲಿ ವಿರುದ್ಧ ಸೆಣಸಾಟ ನಡೆಸಲಿದ್ದು, ಗೆಲುವು ಅನಿವಾರ್ಯವಾಗಿದೆ.

Hyderabad vs delhi
Hyderabad vs delhi

By

Published : Oct 27, 2020, 5:22 AM IST

ದುಬೈ:ಇಂಡಿಯನ್​ ಪ್ರೀಮಿಯರ್​ ಲೀಗ್​ನ ಇಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಹಾಗೂ ಸನ್​ರೈಸರ್ಸ್​ ಹೈದರಾಬಾದ್​​ ತಂಡ ಮುಖಾಮುಖಿಯಾಗಲಿವೆ. ಪ್ಲೇಆಫ್​ ರೇಸ್​ನಲ್ಲಿ ಉಳಿದುಕೊಳ್ಳಬೇಕಾದರೆ ಡೆವಿಡ್​ ವಾರ್ನರ್​ ಪಡೆಗೆ ಈ ಗೆಲುವು ಅತಿ ಮಹತ್ವದಾಗಿದೆ.

ಶ್ರೇಯಸ್​ ಅಯ್ಯರ್​ ನೇತೃತ್ವದ ಪಡೆ ಆಡಿರುವ 11 ಪಂದ್ಯಗಳ ಪೈಕಿ 7ರಲ್ಲಿ ಗೆಲುವು ಸಾಧಿಸಿ, ಸದ್ಯ 2ನೇ ಸ್ಥಾನದಲ್ಲಿದೆ. ಆದರೆ ಈ ಹಿಂದಿನ ಎರಡು ಪಂದ್ಯಗಳಲ್ಲಿ ಡೆಲ್ಲಿ ತಂಡ ಸೋಲು ಕಂಡಿರುವುದು ತಂಡಕ್ಕೆ ಸ್ವಲ್ಪ ಮಟ್ಟ ಹಿನ್ನಡೆಯಾಗಿದೆ. ಆದರೆ ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಿ ಮತ್ತೊಮ್ಮೆ ಅಗ್ರಸ್ಥಾನಕ್ಕೇರುವ ಇರಾದೆಯಲ್ಲಿದೆ.

ಬ್ಯಾಟಿಂಗ್ ಹಾಗೂ ಬೌಲಿಂಗ್​ ವಿಭಾಗದಲ್ಲಿ ಡೆಲ್ಲಿ ಪಡೆ ಉತ್ತಮವಾಗಿದ್ದು, ಶಿಖರ್​ ಧವನ್​ ಕೂಡ ಉತ್ತಮ ಫಾರ್ಮ್​ನಲ್ಲಿದ್ದಾರೆ. ಆದರೆ ತಂಡದ ಪರ ಪೃಥ್ವಿ ಶಾ, ರಿಷಭ್​ ಪಂತ್​, ಹೆಟ್ಮಾಯರ್​ ಹಾಗೂ ರಹಾನೆ ಉತ್ತಮ ಪ್ರದರ್ಶನ ನೀಡುತ್ತಿಲ್ಲ.

ಡೆಲ್ಲಿ ತಂಡ ಕೂಡ ಸಮತೋಲನದಿಂದ ಕೂಡಿದ್ದು, ಹಿಂದಿನ ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ಸುಲಭವಾಗಿ ಗೆಲುವು ಸಾಧಿಸುವ ಹಂತದಲ್ಲಿದ್ದ ತಂಡ ದಿಢೀರ್​ ಆಗಿ ಕುಸಿತಗೊಂಡು ಸೋಲು ಕಾಣುವಂತಾಯಿತು. ಆದರೆ ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಿದಾಗ ಮಾತ್ರ ಫ್ಲೇ-ಆಪ್​ ಹಂತಕ್ಕೇರುವ ಕನಸು ಜೀವಂತವಾಗಿರಲಿದ್ದು, ಎರಡು ತಂಡಗಳ ನಡುವೆ ಬಿರುಸಿನ ಪಂದ್ಯ ಏರ್ಪಡುವ ಸಾಧ್ಯತೆ ಇದೆ.

ಸನ್​ರೈಸರ್ಸ್​ ತಂಡ: ಡೇವಿಡ್​ ವಾರ್ನರ್​(ಕ್ಯಾಪ್ಟನ್​), ಬ್ಯಾರಿಸ್ಟೋ(ವಿ.ಕೀ), ಮನೀಷ್​ ಪಾಂಡೆ, ವಿಜಯ್​ ಶಂಕರ್​, ಜಾಸನ್​ ಹೋಲ್ಡರ್​, ಪ್ರಿಯಾಂ ಗರ್ಗ್​, ಅಭಿಷೇಶ್ ಶರ್ಮಾ, ರಾಶೀದ್ ಖಾನ್​, ಖಲೀಲ್​ ಅಹ್ಮದ್​, ಸಂದೀಪ್​​ ಶರ್ಮಾ, ಟಿ. ನಟರಾಜನ್​,ಕೇನ್​ ವಿಲಿಯಮ್ಸನ್​,ಎಸ್​.ಗೋಸ್ವಾಮಿ, ಸಿದ್ಧಾರ್ಥ್​ ಕೌಲ್​, ಮೊಹಮ್ಮದ್​ ನಬಿ

ಡೆಲ್ಲಿ ಕ್ಯಾಪಿಟಲ್ಸ್​​:ಶಿಖರ್​ ಧವನ್, ಅಜಿಂಕ್ಯಾ ರಹಾನೆ,ಶ್ರೇಯಸ್ ಅಯ್ಯರ್​(ಕ್ಯಾಪ್ಟನ್​), ರಿಷಭ್​ ಪಂತ್​(ವಿ,ಕೀ),ಶಿಮ್ರಾನ್​ ಹೆಟ್ಮಾಯರ್​, ಸ್ಟೋನಿಸ್​, ಅಕ್ಸರ್​ ಪಟೇಲ್​,ಆರ್​.ಅಶ್ವುನ್​​, ರಬಾಡಾ, ಅನ್ರಿಕ್ ನಾರ್ಟ್ಜೆ, ತುಷಾರ್​ ದೇಶಪಾಂಡೆ,ಪೃಥ್ವಿ ಶಾ,ಹರ್ಷಲ್​ ಪಟೇಲ್​,ಅಲೆಕ್ಸ್​ ಕ್ಯಾರಿ,ಪ್ರವೀಣ್​ ದುಬೆ

ABOUT THE AUTHOR

...view details