ಕೋಲ್ಕತ್ತಾ: ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಸೇರ್ಪಡೆಯಿಂದ ನಮ್ಮ ಸ್ಪಿನ್ ವಿಭಾಗದ ಮತ್ತಷ್ಟು ಬಲವರ್ಧನೆಗೊಂಡಿದೆ ಎಂದು ಕೋಲ್ಕತ್ತಾ ನೈಟ್ರೈಡರ್ಸ್ ತಂಡದ ನಾಯಕ ಇಯಾನ್ ಮಾರ್ಗನ್ ಹೇಳಿದ್ದಾರೆ.
ಸಿಎಸ್ಕೆ ಕೈಬಿಟ್ಟಿದ್ದ 40 ವರ್ಷದ ಭಜ್ಜಿಯನ್ನು ಕೋಲ್ಕತ್ತಾ ನೈಟ್ ರೈಟ್ರೈಡರ್ಸ್ ಮೂಲಬೆಲೆ 2 ಕೋಟಿ ರೂಗಳಿಗೆ ಖರೀದಿಸಿ ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಏಕೆಂದರೆ ಅವರು 2019ರ ಐಪಿಎಲ್ ಫೈನಲ್ ನಂತರ ಯಾವುದೇ ವೃತ್ತಿಪರ ಕ್ರಿಕೆಟ್ನಲ್ಲಿ ಕಾಣಿಸಿಕೊಂಡಿಲ್ಲ. ಅಲ್ಲದೆ ಈಗಾಗಲೇ ತಂಡದಲ್ಲಿ ಸುನೀಲ್ ನರೈನ್, ಶಕಿಬ್ ಅಲ್ ಹಸನ್, ಕುಲ್ದೀಪ್ ಯಾದವ್ ಮತ್ತು ವರುಣ್ ಚಕ್ರವರ್ತಿಯಂತಹ ಸ್ಪಿನ್ನರ್ಗಳ ಬಲವನ್ನು ಕೆಕೆಆರ್ ಹೊಂದಿದೆ.
ನಮ್ಮ ತಂಡಕ್ಕೆ ಹರ್ಭಜನ್ ಅವರನ್ನು ಸೇರಿಸಿಕೊಂಡಿರುವುದು ನಿಜವಾಗಿಯೂ ಉತ್ತಮ ರೀತಿಯಲ್ಲಿ ನಮ್ಮನ್ನು ಬಲಪಡಿಸಿದೆ. ಕಾಗದದ ಮೇಲೆ ನಮ್ಮ ಸ್ಪಿನ್ ವಿಭಾಗವನ್ನು ನೀವು ನೋಡಿದಾಗ, ಇದು ಟೂರ್ನಿಯಲ್ಲೇ ಅತ್ಯುತ್ತಮವಾದದ್ದಾಗಿದೆ. ಇದು ವಾಸ್ತವ ಕೂಡ ಎಂದು ಕೆಕೆಆರ್ ನಾಯಕ ವರ್ಚುವಲ್ ಮಾಧ್ಯಮ ಗೋಷ್ಠಿಯಲ್ಲಿ ತೊಳಿಸಿದ್ದಾರೆ.