ಆ್ಯಂಟಿಗೊ(ವೆಸ್ಟ್ ಇಂಡೀಸ್): ವೆಸ್ಟ್ ಇಂಡೀಸ್-ಶ್ರೀಲಂಕಾ ನಡುವೆ ನಡೆದ ಏಕದಿನ ಪಂದ್ಯದ ವೇಳೆ ಲಂಕಾ ಆರಂಭಿಕ ಆಟಗಾರ ದನುಷ್ಕ ಗುಣತಿಲಕ್ ವಿಚಿತ್ರವಾಗಿ ವಿಕೆಟ್ ಒಪ್ಪಿಸಿರುವ ಘಟನೆ ನಡೆದಿದೆ. ಈ ರೀತಿಯಾಗಿ ಔಟಾಗಿರುವ ವಿಶ್ವದ 8ನೇ ಪ್ಲೇಯರ್ ಆಗಿದ್ದಾರೆ.
ವೆಸ್ಟ್ ಇಂಡೀಸ್ನ ಆ್ಯಂಟಿಗುವಾದಲ್ಲಿನ ಸರ್ ವಿವಿಯನ್ ರಿಚರ್ಡ್ಸ್ ಮೈದಾನದಲ್ಲಿ ಉಭಯ ತಂಡಗಳ ನಡುವೆ ಪಂದ್ಯ ನಡೆಯುತ್ತಿದ್ದ ವೇಳೆ ಶ್ರೀಲಂಕಾದ ಆರಂಭಿಕ ಆಟಗಾರ ದನುಷ್ಕ ಗುಣತಿಲಕ್ ಚೆಂಡನ್ನು ಉದ್ದೇಶಪೂರ್ವಕವಾಗಿ ಕಾಲಿನಿಂದ ದೂರ ತಳ್ಳಿದ್ದು, ಹೀಗಾಗಿ ಅಬ್ಸ್ಟ್ರಕ್ಟಿಂಗ್ ದಿ ಫೀಲ್ಡ್ ನಿಯಮದ ಪ್ರಕಾರ ವಿಕೆಟ್ ಒಪ್ಪಿಸಿದ್ದಾರೆ.
ಇದನ್ನೂ ಓದಿ: ಧವನ್ಗಿಲ್ಲ ಅವಕಾಶ: ರೋಹಿತ್ ಜೊತೆ ಟಿ-20 ಓಪನರ್ ಆಗಿ ಕನ್ನಡಿಗ ರಾಹುಲ್!
52 ರನ್ಗಳಿಕೆ ಮಾಡಿ ಬ್ಯಾಟ್ ಮಾಡ್ತಿದ್ದ ಗುಣತಿಲಕ್, ಪೋಲಾರ್ಡ್ ಓವರ್ನಲ್ಲಿ ರಕ್ಷಣಾತ್ಮಕವಾಗಿ ಆಡಿ ರನ್ ಕದಿಯಲು ಮುಂದೆ ಹೋಗಿದ್ದಾರೆ. ಈ ವೇಳೆ ನಾನ್ಸ್ಟ್ರೈಕರ್ನಲ್ಲಿದ್ದ ನಿಸ್ಸಾಂಕ್ ಓಡಿ ಬಂದಿದ್ದಾರೆ. ಆದರೆ ಪೋಲಾರ್ಡ್ ಚೆಂಡಿನತ್ತ ಬರುತ್ತಿರುವುದನ್ನ ಗಮನಿಸಿರುವ ಗುಣತಿಲಕ್ ನಿಸ್ಸಾಂಕ್ ಅವರನ್ನು ಹಿಂದಕ್ಕೆ ಕಳುಹಿಸಿ ಚೆಂಡನ್ನು ಕಾಲಿನಿಂದ ತುಳಿದಿದ್ದಾರೆ. ಹೀಗಾಗಿ ಅದು ಪೋಲಾರ್ಡ್ ಕೈಗೆ ಸಿಕ್ಕಿಲ್ಲ. ಗುಣತಿಲಕ್ ಉದ್ದೇಶಪೂರ್ವಕವಾಗಿ ಈ ರೀತಿಯಾಗಿ ಮಾಡಿದ್ದಾರೆಂದು ವೆಸ್ಟ್ ಇಂಡೀಸ್ ಪ್ಲೇಯರ್ಸ್ ಅಂಪೈರ್ ಬಳಿ ಮನವಿ ಸಲ್ಲಿಕೆ ಮಾಡಿದ್ದರಿಂದ ಸಮಾಲೋಚನೆ ನಡೆಸಿದ ಅಂಪೈರ್ ಔಟ್ ತೀರ್ಪು ನೀಡಿದ್ದಾರೆ.
ಕ್ರಿಕೆಟ್ ಇತಿಹಾಸದಲ್ಲಿ ಈ ರೀತಿಯಾಗಿ ವಿಕೆಟ್ ಒಪ್ಪಿಸಿರುವುದು ಕೇವಲ 8 ಪ್ಲೇಯರ್ಸ್. ಪಾಕಿಸ್ತಾನದ ರಮೀಜ್ ರಾಜಾ, ಇಂಜಮಾಮ್ ಉಲ್ ಹಕ್, ಮೊಹಮ್ಮದ್ ಹಫೀಜ್, ಅನ್ವರ್ ಅಲಿ, ಇಂಗ್ಲೆಂಡ್ ಬೆನ್ಸ್ಟೋಕ್ಸ್ ಹಾಗೂ ಭಾರತದ ಮೊಹಿಂದರ್ ಅಮರನಾಥ್ ಕೂಡ ಈ ರೀತಿ ವಿಕೆಟ್ ಒಪ್ಪಿಸಿದ್ದಾರೆ.