ಕರ್ನಾಟಕ

karnataka

ETV Bharat / sports

ಬಾಲ್ ಟ್ಯಾಂಪರಿಂಗ್ ಘಟನೆ ನಂತರ ಹರಿಣಗಳ ನಾಡಿಗೆ ಆಸೀಸ್ ಪ್ರವಾಸ: ಸರಣಿ ಬಗ್ಗೆ ಗ್ರೇಮ್ ಸ್ಮಿತ್ ವಿಶ್ವಾಸ - ಗ್ರೇಮ್ ಸ್ಮಿತ್

ಕ್ರಿಕೆಟ್ ದಕ್ಷಿಣ ಆಫ್ರಿಕಾ ಪ್ರಸ್ತುತ ಅನುಭವಿಸುತ್ತಿರುವ ರಾಜಕೀಯ ಪ್ರಕ್ಷುಬ್ಧತೆ ಮತ್ತು ಕೋವಿಡ್-19 ಸಾಂಕ್ರಾಮಿಕ ರೋಗದ ಹೊರತಾಗಿಯೂ ಮುಂದಿನ ವರ್ಷ ಆಸ್ಟ್ರೇಲಿಯಾದ ಪ್ರವಾಸದ ಬಗ್ಗೆ ಸ್ಮಿತ್ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

Graeme Smith
ಗ್ರೇಮ್ ಸ್ಮಿತ್

By

Published : Nov 23, 2020, 2:58 PM IST

ಸಿಡ್ನಿ: 2018ರ ಬಾಲ್ ಟ್ಯಾಂಪರಿಂಗ್ ಘಟನೆ ನಂತರ ಆಸ್ಟ್ರೇಲಿಯಾ ಟೆಸ್ಟ್ ಸರಣಿಗಾಗಿ ಮುಂದಿನ ವರ್ಷ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳುವ ವೇಳೆಗೆ ಮೈದಾನಕ್ಕೆ ಪ್ರೇಕ್ಷಕರು ಆಗಮಿಸುವ ಸಾಧ್ಯತೆ ಇದೆ ಎಂದು ದಕ್ಷಿಣ ಆಫ್ರಿಕಾದ ಕ್ರಿಕೆಟ್ ನಿರ್ದೇಶಕ ಗ್ರೇಮ್ ಸ್ಮಿತ್ ಹೇಳಿದ್ದಾರೆ.

ಕ್ರಿಕೆಟ್ ದಕ್ಷಿಣ ಆಫ್ರಿಕಾ ಪ್ರಸ್ತುತ ಅನುಭವಿಸುತ್ತಿರುವ ರಾಜಕೀಯ ಪ್ರಕ್ಷುಬ್ಧತೆ ಮತ್ತು ಕೋವಿಡ್-19 ಸಾಂಕ್ರಾಮಿಕ ರೋಗದ ಹೊರತಾಗಿಯೂ ಮುಂದಿನ ವರ್ಷ ಆಸ್ಟ್ರೇಲಿಯಾದ ಪ್ರವಾಸದ ಬಗ್ಗೆ ಸ್ಮಿತ್ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ನಾವು ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನು ಎದುರು ನೋಡುತ್ತಿದ್ದೇವೆ. ಕೋವಿಡ್-19 ಹೊರಾಟದ ನಡುವೆ ಎಲ್ಲವೂ ಸರಿಯಾದರೆ ಕ್ರೀಡಾಂಗಣಗಕ್ಕೆ ಪ್ರೇಕ್ಷಕರು ಹಿಂದಿರುಗುವ ಸಾಧ್ಯತೆ ಇದೆ ಎಂದು ಸ್ಮಿತ್ ಹೇಳಿದ್ದಾರೆ.

ಮುಂದಿನ ವರ್ಷ ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾದ ಟೆಸ್ಟ್ ಪ್ರವಾಸದ ಪೂರ್ಣ ವೇಳಾಪಟ್ಟಿಯನ್ನು ಸಿಎಸ್‌ಎ ಇನ್ನೂ ಅಂತಿಮಗೊಳಿಸದಿದ್ದರೂ 2018ರಲ್ಲಿನ ಸ್ಯಾಂಡ್‌ ಪೇಪರ್ ಗೇಟ್ ಹಗರಣ ನಡೆದ ನಂತರ ಖಂಡಿತಿವಾಗಿಯೂ ಪಂದ್ಯವನ್ನು ಆಯೋಜಿಸುತ್ತೇವೆ ಎಂದು ಸ್ಮಿತ್ ಹೇಳಿದ್ದಾರೆ.

ಸರಣಿಯ ಸಮಯದಲ್ಲಿ ಪ್ರೆಕ್ಷಕರು ಕಿಚಾಯಿಸುವ ಆತಂಕಗಳನ್ನು ನಿವಾರಿಸಿದ ಸ್ಮಿತ್, ನೀವು ಅದನ್ನು ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ನಿಯಂತ್ರಿಸಬಹುದು. ಅಭಿಮಾನಿಗಳ ಕೂಗು ಅಥವಾ ನಿಂದನೆ ಇಲ್ಲದಿರುವ ಸ್ಥಳ ಜಗತ್ತಿನಲ್ಲಿ ಇಲ್ಲ ಎಂದಿದ್ದಾರೆ.

ABOUT THE AUTHOR

...view details