ಕರ್ನಾಟಕ

karnataka

ETV Bharat / sports

ಕ್ರಿಕೆಟ್​ ಜಗತ್ತಿನಲ್ಲಿ ಸಚಿನ್​ಗೆ ಸರಿಸಮನಾಗುವ ಬ್ಯಾಟ್ಸ್​ಮನ್​ರನ್ನು ನಾನು ಕಂಡಿಲ್ಲ: ಸುನಿಲ್​ ಗವಾಸ್ಕರ್​

ಗವಾಸ್ಕರ್​, ಪ್ರಸ್ತುತ ಕೊಹ್ಲಿ ನೇತೃತ್ವದ ತಂಡ ಭಾರತದ ಕ್ರಿಕೆಟ್​ ಇತಿಹಾಸದಲ್ಲೇ ಕಂಡಂತಹ ಅತ್ಯುತ್ತಮ ಟೆಸ್ಟ್​ ತಂಡ ಎಂದು ಉಲ್ಲೇಖಿಸಿದ್ದಾರೆ. ಇಂತಹ ಬೌಲಿಂಗ್​ ಪಡೆಯನ್ನು ಹಿಂದೆಂದೂ ಭಾರತ ತಂಡ ಹೊಂದಿರಲಿಲ್ಲ. ಇದು ಆಸ್ಟ್ರೇಲಿಯಾ ತಂಡಕ್ಕೆ ಸರಿಸಮನಾದ ಬೌಲಿಂಗ್​ ಪಡೆ ಎಂದಿದ್ದಾರೆ.

ಸಚಿನ್​ -ಗವಾಸ್ಕರ್​
ಸಚಿನ್​ -ಗವಾಸ್ಕರ್​

By

Published : Aug 25, 2020, 8:16 PM IST

ಮುಂಬೈ: ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಹಾಗೂ ಟೆಸ್ಟ್​ ಕ್ರಿಕೆಟ್​ನಲ್ಲಿ ಮೊದಲ ಬಾರಿಗೆ 10 ಸಾವಿರ ಗಡಿದಾಟಿದ ದಾಖಲೆ ಹೊಂದಿರುವ ಸುನಿಲ್​ ಗವಾಸ್ಕರ್​ ಕ್ರಿಕೆಟ್​ ಜಗತ್ತಿನಲ್ಲಿ ಸಚಿನ್​ ತೆಂಡೂಲ್ಕರ್​ ಅವರಂತೆ ಪರಿಪೂರ್ಣವಾದ ಬ್ಯಾಟ್ಸ್​ಮನ್​ರನ್ನು ನಾನು ಕಂಡಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತ ತಂಡದ ಮಾಜಿ ನಾಯಕನ ಪ್ರಕಾರ ಕ್ರಿಕೆಟ್​ ಜಗತ್ತಿನ್ಲಲಿ ಸಚಿನ್​ಗೆ ಸರಿಸಮನಾಗಿ ಪರಿಪೂರ್ಣತೆಯಿಂದ ಕೂಡಿದ ಮತ್ತೊಬ್ಬ ಬ್ಯಾಟ್ಸ್​ಮನ್​ರನ್ನು ತಾವೂ ನೋಡಿಲ್ಲ ಎಂದಿದ್ದಾರೆ. ಸಚಿನ್​ ತೆಂಡೂಲ್ಕರ್​ 2013ರಲ್ಲಿ 24 ವರ್ಷಗಳ ಕ್ರಿಕೆಟ್​ ಬದುಕಿಗೆ ನಿವೃತ್ತಿ ಘೋಷಿಸಿದ್ದರು. ದೇಶದ ಒಳಗೆ ಮತ್ತು ಹೊರಗೆ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಅವರು ಒಟ್ಟಾರೆ ವೃತ್ತಿ ಜೀವನದಲ್ಲಿ 34,437 ರನ್​ಗಳಿಸಿದ್ದಾರೆ. ಇದರಲ್ಲಿ 100 ಶತಕಗಳು ಸೇರಿವೆ.

ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸುನಿಲ್ ಗವಾಸ್ಕರ್​ ಸಚಿನ್​ ತೆಂಡೂಲ್ಕರ್​ ಅವರ ಬಗ್ಗೆ ಹಾಗೂ ಅವರ ಬ್ಯಾಟಿಂಗ್​ ಕೌಶಲ್ಯಗಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಲೆ ತಲೆಮಾರುಗಳ ಜನರಿಗೆ ಸ್ಪೂರ್ತಿ ನೀಡಿದ ಕ್ರಿಕೆಟಿಗರ ಹೆಸರಿಸುವಾಗ ಸಚಿನ್​, ಕಪಿಲ್​ ದೇವ್​ ನಂತರದ ಸ್ಥಾನದಲ್ಲಿ ಬರುತ್ತಾರೆ ಎಂದಿದ್ದಾರೆ.

ಸಚಿನ್ ತೆಂಡೂಲ್ಕರ್​

ನಾನು ಬೆಳೆಯುವಾಗ, ಕ್ರಿಕೆಟ್​ ಆಡುವಾಗ ಹಾಗೂ ಕ್ರಿಕೆಟ್​ ನೋಡಲು ಶುರು ಮಾಡಿದ್ದಾಗಿನಿಂದಲೂ ಅನೇಕ ಬ್ಯಾಟ್ಸ್​ಮನ್​ಗಳನ್ನು ಕಂಡಿದ್ದೇನೆ, ಆದರೆ ಸಚಿನ್​ರಂತೆ ಬ್ಯಾಟಿಂಗ್​ ಪರಿಪೂರ್ಣತೆಗೆ ಸನಿಹದ ಮತ್ತೊಬ್ಬ ಬ್ಯಾಟ್ಸ್​ಮನ್​ಅನ್ನು ನಾನು ಕಂಡಿಲ್ಲ. ಬ್ಯಾಕ್ಲಿಫ್​, ದಿ ಹೆಡ್​, ಬ್ಯಾಲೆನ್ಸ್​, ಲೆಗ್​ ಸೈಡ್ ಹಾಗೂ ಸ್ಕೂಪ್​ ಶಾಟ್​ ಹೊಡೆಯುವುದರಲ್ಲಿ ಅವರು ಒಂದು ಅದ್ಭುತ. ಯುವ ಕ್ರಿಕೆಟಿಗರು ಅನುಸರಿಸುವ ಅಗ್ರ ಮೂರು ಕ್ರಿಕೆಟಿಗರಲ್ಲಿ ಅವರು ಖಂಡಿತವಾಗಿಯೂ ಇರುತ್ತಾರೆ ಎಂದು ಗವಾಸ್ಕರ್​ ಹೇಳಿದ್ದಾರೆ.​

ಸಚಿನ್ ತೆಂಡೂಲ್ಕರ್​

ಕ್ರಿಕೆಟ್ ಜಗತ್ತಿನಲ್ಲಿ 10 ಸಾವಿರ ರನ್​ಗಳಿಸಿದ ಮೊದಲ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದ ಗವಾಸ್ಕರ್​ ಅತಿಹೆಚ್ಚು ಶತಕ ಸಿಡಿಸಿದ್ದ ವಿಶ್ವದಾಖಲೆಯನ್ನು ತಮ್ಮ ಹೆಸರಿನಲ್ಲಿಯೇ ಬರೆದುಕೊಂಡಿದ್ದರು. ದಶಕಕ್ಕೂ ಹೆಚ್ಚು ವರ್ಷಗಳ ಕಾಲ ಇದ್ದ ಈ ದಾಖಲೆಯನ್ನು ಸಚಿನ್​ ತೆಂಡೂಲ್ಕರ್​ ಬ್ರೇಕ್​ ಮಾಡಿದ್ದರು.

ಇದೇ ಸಂದರ್ಶನದಲ್ಲಿ ಪ್ರಸ್ತುತ ಇರುವ ಕೊಹ್ಲಿ ನೇತೃತ್ವದ ತಂಡ ಭಾರತದ ಕ್ರಿಕೆಟ್​ ಇತಿಹಾಸದಲ್ಲೇ ಕಂಡಂತಹ ಅತ್ಯುತ್ತಮ ಟೆಸ್ಟ್​ ತಂಡ ಎಂದು ಉಲ್ಲೇಖಿಸಿದ್ದಾರೆ. ಇಂತಹ ಬೌಲಿಂಗ್​ ಪಡೆಯನ್ನು ಹಿಂದೆಂದೂ ಭಾರತ ತಂಡ ಹೊಂದಿರಲಿಲ್ಲ. ಇದು ಆಸ್ಟ್ರೇಲಿಯಾ ತಂಡಕ್ಕೆ ಸರಿಸಮನಾದ ಬೌಲಿಂಗ್​ ಪಡೆ ಎಂದಿದ್ದಾರೆ.

ABOUT THE AUTHOR

...view details