ಕೋಲ್ಕತ್ತಾ:ಟೀಂ ಇಂಡಿಯಾದ ಹಿರಿಯ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಎಂಎಸ್ ಧೋನಿ ನಿವೃತ್ತಿಗೆ ಸಂಬಂಧಿಸಿದಂತೆ ಈ ಹಿಂದಿನಿಂದಲೂ ಮೇಲಿಂದ ಮೇಲೆ ಪ್ರಶ್ನೆಗಳು ಕೇಳಿ ಬರುತ್ತಿವೆ. ಆದರೆ, ಭಾರತೀಯ ಕ್ರಿಕೆಟ್ ಮಂಡಳಿ, ಆಯ್ಕೆ ಸಮಿತಿ ಆ ವಿಚಾರವಾಗಿ ಮಾತನಾಡಿಲ್ಲ. ಇದೇ ವಿಷಯವನ್ನಿಟ್ಟುಕೊಂಡು ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.
ನಿವೃತ್ತಿ ಪಡೆದುಕೊಳ್ಳುವ ವಿಷಯ ಅವರ ವೈಯಕ್ತಿಕವಾಗಿರುತ್ತದೆ. ನೀವೂ ಎಲ್ಲಿಯವರೆಗೆ ಕ್ರಿಕೆಟ್ ಆಡಬೇಕು ಎಂದು ನಿರ್ಧರಿಸುವಿರೋ ಅಲ್ಲಿಯವರೆಗೆ ಸಮಯವಿದೆ. ಆದರೆ, ತಂಡದ ಮುಂದಿನ ಭವಿಷ್ಯದ ಬಗ್ಗೆ ಸಹ ಈ ವೇಳೆ ವಿಚಾರ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಧೋನಿ ವಿಚಾರದಲ್ಲಿ ಆಯ್ಕೆ ಸಮಿತಿ ತೆಗೆದುಕೊಂಡಿರುವ ನಿರ್ಧಾರ ಏನು? ಅವರಾಗಿ ನಿವೃತ್ತಿ ಘೋಷಣೆ ಮಾಡುವೆ ಎಂದು ಬರುವವರೆಗೂ ನೀವು ಸುಮ್ಮನೆ ಕುಳಿತುಕೊಳ್ಳುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ.