ವಡೋದರಾ :ಟೀಂ ಇಂಡಿಯಾ ಮಹಿಳಾ ತಂಡದ ಮಾಜಿ ಕೋಚ್ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ. ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಬೆಟ್ಟಿಂಗ್ ನಡೆಸಿರುವ ಆರೋಪದಡಿ ತುಷಾರ್ ಬಾಲಚಂದ್ರ ಅರೋತ್ ಬಂಧನವಾಗಿದ್ದಾರೆ.
ಐಪಿಎಲ್ ಬೆಟ್ಟಿಂಗ್: ಟೀಂ ಇಂಡಿಯಾ ಮಾಜಿ ಕೋಚ್ ತುಷಾರ್ ಬಾಲಚಂದ್ರ ಅರೆಸ್ಟ್ - ಮಾಜಿ ಕೋಚ್ ಅರೆಸ್ಟ್
ಟೀಂ ಇಂಡಿಯಾ ಮಹಿಳಾ ತಂಡದ ಮಾಜಿ ಕೋಚ್ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ. 12ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಬೆಟ್ಟಿಂಗ್ ದಂಧೆ ನಡೆಸಿರುವ ಆರೋಪದ ಮೇಲೆ ತುಷಾರ್ ಬಾಲಚಂದ್ರ ಅರೋರಾ ಅರೆಸ್ಟಾಗಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ವಡೋದರಾ ಡಿಸಿಪಿ ಜೆಎಸ್ ಜಡೇಜಾ ಮಾಹಿತಿ ಹೊರಹಾಕಿದ್ದಾರೆ. ಕೆಫೆ ಮೇಲೆ ದಾಳಿ ನಡೆಸಿದ ವೇಳೆ ತುಷಾರ್ ಬಾಲಚಂದ್ರ ಸೇರಿ 18 ಜನರನ್ನ ವಶಕ್ಕೆ ಪಡೆಸಿಕೊಂಡಿರುವುದಾಗಿ ತಿಳಿಸಿದ್ದಾರೆ. ತುಷಾರ್ ಬರೋಡಾ ತಂಡದ ಪರ 1985ರಿಂದ 2004ರವರೆಗೆ ರಣಜಿ ಕ್ರಿಕೆಟ್ ಆಡಿದ್ದಾರೆ. ಜತೆಗೆ ಬರೋಡಾ ಪರ 100 ರಣಜಿ ಪಂದ್ಯ ಆಡಿರುವ ಮೊದಲ ಪ್ಲೇಯರ್ ಎಂಬ ಹಿರಿಮೆಯೂ ಅರೋರಾಗಿತ್ತು.
2013ರಲ್ಲಿ ಇವರು ಮಹಿಳಾ ಕ್ರಿಕೆಟ್ ತಂಡದ ಕೋಚ್ ಆಗಿ ಆಯ್ಕೆಯಾಗಿದ್ದರು. 2018ರಲ್ಲಿ ಇವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೇಲೆ ರಮೇಶ್ ಪವಾರ್ ಆ ಸ್ಥಾನಕ್ಕೆ ಆಯ್ಕೆಯಾಗಿದ್ದರು.