ಕರ್ನಾಟಕ

karnataka

ETV Bharat / sports

'ಹೆಮ್ಮೆಯ ತಂದೆಯಂತೆ ಭಾಸವಾಗುತ್ತಿದೆ': ಧೋನಿ ಸಾಧನೆ ನೆನೆದು ಸಂತಸ ವ್ಯಕ್ತಪಡಿಸಿದ ಕಿರಣ್​ ಮೋರೆ - Dhoni turns 39

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಯಶಸ್ಸಿನ ಎತ್ತರ ತಲುಪುವ ಪ್ರತಿಭೆ ಧೋನಿಗೆ ಅಂದಿನಿಂದಲೂ ಇತ್ತು. ಅನುಭವಿ ವಿಕೆಟ್​​ ಕೀಪರ್ ಟೀಂ​ ಇಂಡಿಯಾ ಪರ ಆಡವ ಅವಕಾಶ ಸಿಕ್ಕಾಗಲೆಲ್ಲಾ ಬಾಚಿಕೊಳ್ಳುತ್ತಿದ್ದರು ಎಂದು ಮೋರೆ ಅಭಿಪ್ರಾಯಪಟ್ಟಿದ್ದಾರೆ.​

Kiran More
ಕಿರಣ್​ ಮೋರೆ

By

Published : Jul 7, 2020, 6:33 PM IST

ಮುಂಬೈ: ದೇಶದಕ್ಕೆ ಎಂ.ಎಸ್.ಧೋನಿ ಮಾಡಿರುವ ಅದ್ಭುತ ಸಾಧನೆಯನ್ನು ನೋಡುತ್ತಿದ್ದರೆ ಹೆಮ್ಮೆಯ ತಂದೆಯಂತೆ ಭಾಸವಾಗುತ್ತಿದೆ ಎಂದು ಮಾಜಿ ವಿಕೆಟ್​ ಕೀಪರ್​ ಹಾಗೂ ಮಾಜಿ ಆಯ್ಕೆ ಸಮಿತಿ ಅಧ್ಯಕ್ಷ ಕಿರಣ್​ ಮೋರೆ ಹೇಳಿದ್ದಾರೆ. 2004ರ ಬಾಂಗ್ಲಾದೇಶದ ವಿರುದ್ಧದ ಸರಣಿಗೆ ಧೋನಿಯನ್ನು ಆಯ್ಕೆ ಮಾಡಿದವರಲ್ಲಿ ಇವರು ಕೂಡ ಒಬ್ಬರಾಗಿದ್ದರು.

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಯಶಸ್ಸಿನ ಎತ್ತರ ತಲುಪುವ ಪ್ರತಿಭೆ ಧೋನಿಗೆ ಅಂದಿನಿಂದಲೂ ಇತ್ತು. ಅನುಭವಿ ವಿಕೆಟ್​​ ಕೀಪರ್ ಟೀಂ​ ಇಂಡಿಯಾ ಪರ ಆಡವ ಅವಕಾಶ ಸಿಕ್ಕಾಗಲೆಲ್ಲಾ ಬಾಚಿಕೊಳ್ಳುತ್ತಿದ್ದರು ಎಂದು ಮೋರೆ ಅಭಿಪ್ರಾಯಪಟ್ಟಿದ್ದಾರೆ.​

ಮಹೇಂದ್ರ ಸಿಂಗ್ ಧೋನಿ

2004ರಲ್ಲಿ ಬಾಂಗ್ಲಾದೇಶದ ವಿರುದ್ಧ ಪದಾರ್ಪಣೆ ಮಾಡಿದಾಗಿನಿಂದಲೂ ಧೋನಿ ಭಾರತೀಯ ಕ್ರಿಕೆಟ್​ನ ಅವಿಸ್ಮರಣೀಯ ಸೇವಕರಾಗಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ವೇದಿಕೆಯಲ್ಲಿ ಪ್ರವೇಶಿಸಿದಾಗಿನಿಂದಲೂ ಭಾರತೀಯ ಕ್ರಿಕೆಟ್​ನ ಅದ್ಭುತ ವಿಕೆಟ್​ ಕೀಪಿಂಗ್​ ಹಾಗೂ ಕೌಶಲ್ಯಪೂರ್ಣ ಬ್ಯಾಟಿಂಗ್​ ಮೂಲಕ ಭಾರತ ತಂಡಕ್ಕೆ ತಮ್ಮಿಂದ ಸಾಧ್ಯವಾಗುವ ಎಲ್ಲಾ ರೀತಿಯಲ್ಲೂ ಕೊಡುಗೆ ನೀಡುತ್ತಾ ಬಂದಿದ್ದಾರೆ.

"ಅವರಲ್ಲಿ ಅಂದಿನಿಂದಲೂ ಪ್ರತಿಭೆಯಿತ್ತು. ಅವರಲ್ಲಿ ಏನೋ ವಿಶೇಷತೆಯಿತ್ತು. ಅವರ ಪ್ರದರ್ಶನ ತೋರಲು ಅವಕಾಶ ನೀಡಲಾಯಿತು. ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡರು" ಎಂದು ಧೋನಿಗೆ 39ನೇ ಹುಟ್ಟುಹಬ್ಬದು ಶುಭಾಶಯ ಕೋರಿದ್ದಾರೆ.

ಮಹೇಂದ್ರ ಸಿಂಗ್ ಧೋನಿ

ನಂತರ ಅವರು ಭಾರತ ತಂಡದ ನಾಯಕನಾದರು. 2007ರಲ್ಲಿ ಟಿ-20 ವಿಶ್ವಕಪ್​ ಗೆದ್ದು ಕೊಟ್ಟರು. ನಂತರ ಅವರ ಗ್ರಾಫ್​ ಏರಿಕೆಯಾಗತೊಡಗಿತು. ಅವರು ಟೆಸ್ಟ್​ ತಂಡವನ್ನು ತುಂಬಾ ಚೆನ್ನಾಗಿ ಮುನ್ನಡೆಸಿದರು. ನಂತರ 2011ರ ವಿಶ್ವಕಪ್​ ಗೆಲ್ಲಿಸಿಕೊಟ್ಟರು ಎಂದು ಮೋರೆ ಹೇಳಿದ್ದಾರೆ.

ಮಹೇಂದ್ರ ಸಿಂಗ್ ಧೋನಿ

ಧೋನಿ ಸಾಧನೆ ಮತ್ತು ಭಾರತ ಕ್ರಿಕೆಟ್​ಗೆ ನೀಡಿದ ಕೊಡುಗೆಯನ್ನು ನೋಡಿದರೆ ಹೆಮ್ಮೆಯ ತಂದೆಯಂತೆ ಭಾವಿಸುತ್ತೀರಾ ಎಂದು ಕೇಳಿದಾಗ, ಮೋರೆ, ಹೌದು ಎಂದಿದ್ದಾರೆ. ಮನೆಯಲ್ಲಿ ಕುಳಿತು ನೋಡುವುದಕ್ಕೆ ತುಂಬಾ ಖುಷಿಯಾಗುತ್ತದೆ. ಅವರು ಭಾರತ ತಂಡಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ಆಲೋಚಿಸಿದರೆ ಅದ್ಭುತವಾಗಿದೆ. ಒಬ್ಬ ಆಯ್ಕೆಗಾರನಾಗಿ ಇಂತಹ ಕ್ರಿಕೆಟಿಗರನ್ನು ಎದುರು ನೋಡಲಾಗುತ್ತದೆ. ಅದೇ ನಮ್ಮ ಕೆಲಸ. ಇದರ ಕ್ರೆಡಿಟ್​ ನನ್ನೊಬ್ಬನಿಗೆ ಮಾತ್ರವಲ್ಲ, ಅಲ್ಲಿದ್ದವರಿಗೆಲ್ಲಾ ಸಲ್ಲುತ್ತದೆ. ನೀವು ಆಯ್ಕೆ ಮಾಡಿದ ಕ್ರಿಕೆಟಿಗ ತಂಡಕ್ಕೆ ಉತ್ತಮ ಕೊಡುಗೆ ನೀಡಿದಾಗ ಮತ್ತು ತಂಡ ಗೆಲ್ಲಲು ಸಹಾಯ ಮಾಡಿದಾಗ ನಿಮಗೆ ಸಂತೋಷ ಹಾಗೂ ಹೆಮ್ಮೆ ಎನಿಸುತ್ತದೆ ಎಂದಿದ್ದಾರೆ.

ABOUT THE AUTHOR

...view details