ಕರ್ನಾಟಕ

karnataka

By

Published : Sep 26, 2020, 11:37 PM IST

ETV Bharat / sports

ಎಕ್ಸ್​ಕ್ಲೂಸಿವ್​: ನಮಗಾಗಿ ಬಿಸಿಬಿ ಟಿ-20 ಲೀಗ್​ ಆಯೋಜಿಸುವ ಪ್ರಯತ್ನದಲ್ಲಿದೆ: ಜಹನಾರಾ ಆಲಂ

2007 ರಿಂದ ಬಾಂಗ್ಲಾದೇಶದಲ್ಲಿ ಮಹಿಳಾ ಕ್ರಿಕೆಟ್​ ಶುರುವಾಗಿದೆ. ಅಂದಿನಿಂದಲೂ ತಂಡವನ್ನು ಸಬಲೀಕರಣ ಮಾಡಲಾಗುತ್ತಿದೆ. ನಾವು ಆಟಗಾರರ ಬಗ್ಗೆ ಮಾತನಾಡುವುದಾದರೆ ಅವರು ಕ್ರಿಕೆಟೇತರ ವಿಚಾರಗಳಿಂದ ಹಲವು ಟೀಕೆಗೆ ಗುರಿಯಾಗುತ್ತಿದ್ದಾರೆ. ಹಲವಾರು ರಾಷ್ಟ್ರೀಯ ಕ್ರಿಕೆಟಿಗರು ಇದೇ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಜಹನಾರಾ ಹೇಳಿದ್ದಾರೆ.

ಜಹನಾರಾ ಆಲಂ
ಜಹನಾರಾ ಆಲಂ

ಹೈದರಾಬಾದ್: ಬಾಂಗ್ಲಾದೇಶ ಕ್ರಿಕೆಟ್​ ಮಂಡಳಿ ಭಾರತ, ಆಸ್ಟ್ರೇಲಿಯಾದಂತೆ ಮಹಿಳಾ ಕ್ರಿಕೆಟಿಗರಿಗೆ ಪ್ರೋತ್ಸಾಹ ನೀಡಲು ಹೊಸ ಟಿ-20 ಲೀಗ್ ಆಯೋಜನೆ ಮಾಡಲು ಮುಂದಾಗಿದೆ ಎಂದು ಬಾಂಗ್ಲಾದೇಶದ ಮಹಿಳಾ ಕ್ರಿಕೆಟರ್​ ಜಹನಾರಾ ಆಲಂ ಹೇಳಿದ್ದಾರೆ.

ಈಟಿವಿ ಭಾರತದ ಜೊತೆ ಎಕ್ಸ್​ಕ್ಲೂಸಿವ್ ಸಂದರ್ಶನದಲ್ಲಿ ಬಾಂಗ್ಲಾದೇಶದ ಕ್ರಿಕೆಟ್​ ಚಟುವಟಿಕೆಗಳ ಬಗ್ಗೆ ಮಾತನಾಡಿದ ಜಹನಾರಾ " ನಮ್ಮ ದೇಶವು ಭಾರತದಂತೆ ಕ್ರಿಕೆಟ್​ ಕ್ರೇಜಿ ರಾಷ್ಟ್ರವಾಗಿದೆ. ಪುರುಷರ ಕ್ರಿಕೆಟ್ ಮಾತ್ರವಲ್ಲದೇ ಮಹಿಳಾ ಕ್ರಿಕೆಟ್​ ಕೂಡ ವೇಗವಾಗಿ ಬೆಳೆಯಲು ಪ್ರಾರಂಭಿಸಿದೆ ಎಂದಿದ್ದಾರೆ.

ಜಹನಾರಾ ಆಲಂ ಸಂದರ್ಶನ

2007ರಿಂದ ಬಾಂಗ್ಲಾದೇಶದಲ್ಲಿ ಮಹಿಳಾ ಕ್ರಿಕೆಟ್​ ಶುರುವಾಗಿದೆ. ಅಂದಿನಿಂದಲೂ ತಂಡವನ್ನು ಸಬಲೀಕರಣ ಮಾಡಲಾಗುತ್ತಿದೆ. ನಾವು ಆಟಗಾರರ ಬಗ್ಗೆ ಮಾತನಾಡುವುದಾದರೆ ಅವರು ಕ್ರಿಕೆಟೇತರ ವಿಚಾರಗಳಿಂದ ಹಲವು ಟೀಕೆಗೆ ಗುರಿಯಾಗುತ್ತಿದ್ದಾರೆ. ಹಲವಾರು ರಾಷ್ಟ್ರೀಯ ಕ್ರಿಕೆಟಿಗರು ಇದೇ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಜಹನಾರಾ ಹೇಳಿದ್ದಾರೆ.

ಜಹನಾರಾ ಆಲಂ

ಇನ್ನು ಮಹಿಳಾ ಕ್ರಿಕೆಟ್​ ಬಗ್ಗೆ ಮಾತನಾಡುತ್ತಾ, ಮೊದಲು ರಾಷ್ಟ್ರೀಯ ತಂಡದ ಆಟಗಾರ್ತಿಯರು ಸಹಾ ಕೆಲವು ಸಮಸ್ಯೆಗಳನ್ನು ಎದುರಿಸಿದ್ದರು. ಆದರೆ, 2018ರ ಏಷ್ಯಾಕಪ್​ ಗೆದ್ದ ಮೇಲೆ ಪರಿಸ್ಥಿತಿಗಳು ಸುಧಾರಣೆ ಕಂಡಿವೆ. ಪೋಷಕರು ತಮ್ಮ ಮಕ್ಕಳನ್ನು ಕ್ರಿಕೆಟ್​ ಆಟವಾಡಲು ಪ್ರೋತ್ಸಾಹಿಸುತ್ತಿದ್ದಾರೆ. ಬಿಸಿಬಿ ಕೂಡ ಮಹಿಳಾ ಕ್ರಿಕೆಟ್​ ಅನ್ನು ಪ್ರೋತ್ಸಾಹಿಸುತ್ತಿದೆ. ಕ್ರಿಕೆಟ್​ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ನಮಗಾಗಿ ಪ್ರವಾಸಗಳನ್ನು ಆಯೋಜಿಸುತ್ತಿದೆ, ಶೀಘ್ರದಲ್ಲೇ ಮಹಿಳಾ ಬಿಗ್​ಬಾಶ್​, ಮಹಿಳಾ ಐಪಿಎಲ್​ ರೀತಿಯ ಟಿ-20 ಲೀಗ್​ವೊಂದನ್ನು ಆಯೋಜಿಸುವ ವಿಚಾರವಾಗಿ ಚರ್ಚೆಗಳು ಸಾಗಿವೆ ಎಂದು ಜಹನಾರಾ ಬಾಂಗ್ಲಾದೇಶದ ಕ್ರಿಕೆಟ್​ ಬೆಳವಣಿಗೆಯನ್ನು ಹಂಚಿಕೊಂಡಿದ್ದಾರೆ.

ಜಹನಾರಾ ಆಲಂ

ಈ ಟಿವಿ ಭಾರತದ ಜೊತೆ ಜಹಾನಾರ ಇನ್ನು ಹಲವಾರು ವಿಚಾರಗಳನ್ನು ಹಂಚಿಕೊಡಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವಿಡಿಯೋ ನೋಡಿ.

ABOUT THE AUTHOR

...view details