ಮೆಲ್ಬೋರ್ನ್ :ಕೆಲವೊಂದು ಸಾರಿ ಎಲ್ಲರೂ ಹಿನ್ನಡೆ ಅನುಭವಿಸುತ್ತಾರೆ. ಸ್ಟೀವ್ ಸ್ಮಿತ್ ಕೂಡ ಇದಕ್ಕೆ ಹೊರತಾಗಿಲ್ಲ. 2019ರ ಆ್ಯಶಸ್ ಟೆಸ್ಟ್ ಸರಣಿ ವೇಳೆ ನಾನೂ ಕೂಡ ವೈಫಲ್ಯ ಅನುಭವಿಸಿದ್ದೆ ಎಂದು ಆಸೀಸ್ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಹೇಳಿದ್ದಾರೆ.
ಭಾರತದ ವಿರುದ್ಧದ ಸರಣಿಯಲ್ಲಿ ನಾಲ್ಕು ಇನ್ನಿಂಗ್ಸ್ಗಳಿಂದ ಕೇವಲ 10 ರನ್ ಗಳಿಸಿರುವ ಸ್ಮಿತ್ 2 ಬಾರಿ ಅಶ್ವಿನ್ ಮತ್ತು ಒಂದು ಬಾರಿ ಬುಮ್ರಾಗೆ ವಿಕೆಟ್ ಒಪ್ಪಿಸಿದ್ದರು. ಆದರೆ, ಸ್ಮಿತ್ ಪರ ಬ್ಯಾಟ್ ಬೀಸಿರುವ ವಾರ್ನರ್, ಅವರ ಬ್ಯಾಟಿಂಗ್ ವಿಧಾನದಲ್ಲಿ ಯಾವುದೇ ಕೊರತೆ ಇಲ್ಲ ಎಂದಿದ್ದಾರೆ. ಯಾಕೆಂದರೆ, ಸಿದ್ಧತೆಯ ವಿಷಯದಲ್ಲಿ ಸ್ಮಿತ್ ಒಂದು ಸಣ್ಣ ಅವಕಾಶವನ್ನೂ ಬಿಡುವುದಿಲ್ಲ ಎಂದಿದ್ದಾರೆ.
"ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಸ್ಮಿತ್ ಅವರನ್ನು ಹಿಂದಿಕ್ಕಿ ವಿಲಿಯಮ್ಸನ್ ಅಗ್ರಸ್ಥಾನ ಪಡೆದಿದ್ದಾರೆ. ಆದರೆ, ಅಂಕಿ-ಅಂಶಗಳನ್ನು ಗಮನಿಸಿದ್ರೆ ಸ್ಮಿತ್ ಉತ್ತಮ ಆಟಗಾರ. ಟೆಸ್ಟ್ ಪಂದ್ಯದಲ್ಲಿ ಈಗಲೂ 60 ರನ್ ಸರಾಸರಿ ಹೊಂದಿದ್ದಾರೆ.