ಮ್ಯಾಂಚೆಸ್ಟರ್: ಇಂಗ್ಲೆಂಡ್ನಲ್ಲಿ ಐಸಿಸಿ ಏಕದಿನ ವಿಶ್ವಕಪ್ ಮಹಾಸಂಗ್ರಾಮ ನಡೆಯುತ್ತಿದ್ದು, ವಿವಿಧ ತಂಡದ ಪ್ಲೇಯರ್ಸ್ಗಳಿಂದ ದಾಖಲೆ ಮೇಲೆ ದಾಖಲೆ ನಿರ್ಮಾಣಗೊಳ್ಳುತ್ತಿವೆ. ಇದೀಗ ಇಂಗ್ಲೆಂಡ್ ತಂಡದ ಬ್ಯಾಟ್ಸ್ಮನ್ ಇಯಾನ್ ಮಾರ್ಗನ್ ನೂತನ ದಾಖಲೆ ಬರೆದಿದ್ದಾರೆ.
ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಕ್ಯಾಪ್ಟನ್ ಇಯಾನ್ ಮಾರ್ಗನ್ ಆರಂಭದಿಂದಲೇ ಅಫ್ಘಾನಿಸ್ತಾನ ಬೌಲರ್ಗಳ ಮೇಲೆ ಅಬ್ಬರಿಸಿದ್ರು. 71 ಎಸೆತಗಳಲ್ಲಿ ಬರೋಬ್ಬರಿ 148 ರನ್ ಸಿಡಿಸಿದ ಅವರು, 17 ಸಿಕ್ಸರ್ ಹಾಗೂ 4 ಬೌಂಡರಿ ಸಿಡಿಸಿದರು.
36 ಎಸೆತಗಳಲ್ಲೇ ಅರ್ಧಶತಕ ಸಾಧನೆ ಮಾಡಿದ ಮಾರ್ಗನ್, ಕೇವಲ 57 ಎಸೆತಗಳಲ್ಲಿ ಶತಕ ಸಾಧನೆ ಮಾಡಿ ಮಿಂಚಿದರು. ಇದು ಏಕದಿನ ವಿಶ್ವಕಪ್ ಇತಿಹಾಸದಲ್ಲೇ ದಾಖಲಾದ ನಾಲ್ಕನೇ ಅತಿ ವೇಗದ ಶತಕ ಸಾಧನೆ ಇದಾಗಿದೆ. ಇದರ ಜತೆಗೆ ವಿಶ್ವಕಪ್ನ ಒಂದೇ ಇನ್ನಿಂಗ್ಸ್ನಲ್ಲಿ 17 ಸಿಕ್ಸರ್ ಸಿಡಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ಇದರ ಮಧ್ಯೆ ಇಂಗ್ಲೆಂಡ್ ತಂಡದ ಆಟಗಾರರಿಂದ ವಿಶ್ವಕಪ್ನಲ್ಲಿ ಮೂಡಿ ಬಂದಿರುವ ಅತಿ ದೊಡ್ಡ ಜೊತೆಯಾಟ ಇದಾಗಿದ್ದು, ರೂಟ್-ಮಾರ್ಗನ್ ಸೇರಿ 189ರನ್ಗಳ ಕೂಡುಗೆ ನೀಡಿದ್ದಾರೆ. ಇನ್ನು ವಿಶ್ವಕಪ್ನಲ್ಲಿ ಇಂಗ್ಲೆಂಡ್ ತಂಡ 397ರನ್ ಸಿಡಿಸಿರುವುದು ಅತಿ ದೊಡ್ಡ ಸ್ಕೋರ್ ಆಗಿದೆ. ಜತೆಗೆ ಇಂದಿನ ಪಂದ್ಯದಲ್ಲಿ ಬರೋಬ್ಬರಿ 25 ಸಿಕ್ಸರ್ ಇಂಗ್ಲೆಂಡ್ ಬ್ಯಾಟ್ಸ್ಮನ್ಗಳಿಂದ ಸಿಡಿದಿವೆ.
ವಿಶ್ವಕಪ್ನಲ್ಲಿ ಅತಿವೇಗದ ಶತಕ
- ಒ'ಬ್ರೇನ್ 2011ರಲ್ಲಿ ಇಂಗ್ಲೆಂಡ್ ವಿರುದ್ಧ 50 ಎಸೆತಗಳಲ್ಲಿ ಶತಕ
- ಗ್ಲೇನ್ ಮ್ಯಾಕ್ಸ್ವೆಲ್ 2015ರಲ್ಲಿ ಶ್ರೀಲಂಕಾ ವಿರುದ್ಧ 51 ಎಸೆತಗಳಲ್ಲಿ ಶತಕ
- 2015ರಲ್ಲಿ ಎಬಿ ಡಿವಿಲಿಯರ್ಸ್ ಶ್ರೀಲಂಕಾ ವಿರುದ್ಧ 52 ಎಸೆತಗಳಲ್ಲಿ ಶತಕ
- ಇಂದಿನ ಪಂದ್ಯದಲ್ಲಿ ಅಫ್ಘಾನ್ ವಿರುದ್ಧ ಮಾರ್ಗನ್ 57 ಎಸೆತಗಳಲ್ಲಿ ಶತಕ
ವಿಶ್ವಕಪ್ನಲ್ಲಿ ಅತಿ ಹೆಚ್ಚು ಸಿಕ್ಸರ್
- ಇಯಾನ್ ಮಾರ್ಗನ್ ಆಫ್ಘಾನ್ ವಿರುದ್ಧ 17ಸಿಕ್ಸರ್
- 2015ರಲ್ಲಿ ಜಿಂಬಾಬ್ವೆ ವಿರುದ್ಧ 16 ಸಿಕ್ಸರ್
- ಮಾರ್ಟಿನ್ ಗುಪ್ಟಿಲ್ 11 ಸಿಕ್ಸರ್, 2015