ಕರ್ನಾಟಕ

karnataka

ETV Bharat / sports

ಸಾಧನೆ ಮಾಡಿದವರನ್ನ ಗೌರವದಿಂದ ಕಾಣಿ... ಮಾತಿನ ಮಲ್ಲ ಮಂಜ್ರೇಕರ್​ ವಿರುದ್ಧ ಸಿಡಿದೆದ್ದ ಜಡೇಜಾ! - ಭಾರತ ತಂಡದ ಆಲ್​ರೌಂಡರ್

ಸದಾ ಒಂದಿಲ್ಲೊಂದು ವಿವಾದದಲ್ಲಿ ಸಿಲುಕುವ ಕಾಮೆಂಟೇಟರ್ ಸಂಜಯ್​ ಮಂಜ್ರೇಕರ್​ ಇದೀಗ ಜಡೇಜಾರನ್ನು ಕೆಣಕಿ ತಕ್ಕ ಶಾಸ್ತಿ ಮಾಡಿಸಿಕೊಂಡಿದ್ದಾರೆ.

Ravindra Jadeja

By

Published : Jul 4, 2019, 3:36 AM IST

ಮುಂಬೈ: ಭಾರತ ತಂಡದ ಆಲ್​ರೌಂಡರ್​ ರವೀಂದ್ರ ಜಡೇಜಾರನ್ನು ಏಕದಿನ ಕ್ರಿಕೆಟ್​ಗೆ ಲಾಯಕ್ಕಿಲ್ಲ ಎಂದಿದ್ದ ಕಾಮೆಂಟೇಟರ್​ ಸಂಜಯ್​ ಮಂಜ್ರೇಕರ್​ರನ್ನು ಜಡೇಜಾ ಟ್ವಿಟರ್​ನಲ್ಲಿ ತರಾಟೆ ತೆಗೆದುಕೊಂಡಿದ್ದಾರೆ.

ವಿಶ್ವಕಪ್​ನಲ್ಲಿ ಕೇವಲ ಹೆಚ್ಚುವರಿ ಆಟಗಾರನಾಗಿಯೇ ಮುಂದುವರಿದಿರುವ ಜಡೇಜಾರಿಗೆ ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ಅವಕಾಶ ಸಿಗಬಹುದಾ ಎಂಬ ವಿಚಾರವಾಗಿ ಸುದ್ದಿ ಏಜೆನ್ಸಿಯೊಂದಕ್ಕೆ ಪ್ರತಿಕ್ರಿಯಿಸಿದ್ದ ಸಂಜಯ್​ ಮಂಜ್ರೇಕರ್, '50 ಓವರ್​ಗಳ ಪಂದ್ಯದಲ್ಲಿ ಚೂರು ಚೂರಾಗಿರುವ ಆಟಗಾರನ ದೊಡ್ಡ ಅಭಿಮಾನಿ ನಾನಲ್ಲ, ಜಡೇಜಾ ಟೆಸ್ಟ್ ಪಂದ್ಯದಲ್ಲಿ ಉತ್ತಮ ಬೌಲರ್, ಆದರೆ ಅವರು 50 ಓವರ್​ಗಳ ಪಂದ್ಯದಲ್ಲಿ ಆತ ಉತ್ತಮ ಬ್ಯಾಟ್ಸ್ ಮನ್ ಹಾಗೂ ಸ್ಪೀನ್ ಬೌಲರ್ ಅಲ್ಲ' ಎಂದು ಹೇಳಿಕೆ ನೀಡಿದ್ದರು.

ಮಂಜ್ರೇಕರ್ ಹೇಳಿಕೆಯಿಂದ ಸಿಟ್ಟಿಗೆದ್ದಿರುವ ಜಡೇಜಾ"ನಾನು ನೀವು ಆಡಿರುವ ಎರಡರಷ್ಟು ಪಂದ್ಯಗಳನ್ನಾಡಿದ್ದೇನೆ, ಇಂದು ಆಡುತ್ತಿದ್ದೇನೆ. ಮೊದಲು ಸಾಧನೆ ಮಾಡಿದ ವ್ಯಕ್ತಿಗಳನ್ನು ಗೌರವದಿಂದ ಕಾಣುವುದನ್ನು ಕಲಿತುಕೊಳ್ಳಿ, ನಿಮ್ಮ ಮಾತಿ ಅತಿಸಾರವನ್ನು ಕೇಳಿ ಸಾಕಾಗಿದೆ" ಎಂದು ಟ್ವಿಟರ್​ನಲ್ಲಿ ಮಂಜ್ರೇಕರ್​ರನ್ನು ತರಾಟೆ ತೆಗೆದುಕೊಂಡಿದ್ದಾರೆ.

ಮಂಜೇಕ್ರರ್​ ಇದಕ್ಕೂ ಮೊದಲು ಧೋನಿ,ಭುವನೇಶ್ವರ್​ ಹಾಗೂ ಪೊಲಾರ್ಡ್​ರ ಪ್ರದರ್ಶನ ಕುರಿತು ಟ್ವೀಟ್​ ಮಾಡಿ ಟ್ರೋಲ್​ಗೆ ಗುರಿಯಾಗಿದ್ದರು. ಅಲ್ಲದೆ ಪೊಲ್ಲಾರ್ಡ್​ ಮಂಜ್ರೇಕರ್​ಗೆ ಟ್ವೀಟ್​ ಮೂಲಕವೇ ಉತ್ತರಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಜಡೇಜರನ್ನು ಟೀಕಿಸಿ ಅವರಿಂದಲೇ ತಕ್ಕ ಶಾಸ್ತಿ ಮಾಡಿಸಿಕೊಂಡಿದ್ದಾರೆ.

ABOUT THE AUTHOR

...view details