ಅಹ್ಮದಾಬಾದ್: ಫ್ಲ್ಯಾಟ್ ಪಿಚ್ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಕೌಶಲ್ಯ ಹೊಂದಿರುವ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ವಿಕೆಟ್ ಪಡೆದಿರುವುದು ನನಗೆ ತೃಪ್ತಿ ತಂದಿದೆ ಎಂದು ಭಾರತ ತಂಡದ ವೇಗಿ ಮೊಹಮ್ಮದ್ ಸಿರಾಜ್ ತಿಳಿಸಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ತಂಡದ ಅನನುಭವಿ ಯುವ ಆಟಗಾರರನ್ನು ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಕೆಡ್ಡಾಕ್ಕೆ ಬೀಳಿಸಲು ಯಶಸ್ವಿಯಾದರೆ, ಯುವ ವೇಗಿ ಮೊಹಮ್ಮದ್ ಸಿರಾಜ್ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಮತ್ತು ಅನುಭವಿ ಬ್ಯಾಟ್ಸ್ಮನ್ ಜಾನಿ ಬೈರ್ಸ್ಟೋವ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
"ನಾನು ರೂಟ್ಗೆ ಬೌಲಿಂಗ್ ಮಾಡುವಾಗ ಹೆಚ್ಚಿನ ಎಸೆತಗಳನ್ನು ಹೊರ ಹಾಕಿ ನಂತರ ಕೆಲವು ಎಸೆತಗಳನ್ನು ಒಳಗೆ ಹಾಕಲು ಬಯಸಿದ್ದೆ. ನಂತರ ಹೊಸ ಓವರ್ ಪ್ರಾರಂಭಿಸಿದ ಸಮಯದಲ್ಲಿ ಇನ್ಸ್ವಿಂಗ್ ಬೌಲಿಂಗ್ ಮಾಡಿದೆ. ನನ್ನ ಯೋಜನೆ ಫಲಿಸಿತು, ಯೋಜಿಸಿದಂತೆ ರೂಟ್ ವಿಕೆಟ್ ಪಡೆದೆ. ಅದು ನನಗೆ ಹೆಚ್ಚಿನ ತೃಪ್ತಿ ನೀಡಿದೆ" ಎಂದು ಸಿರಾಜ್ ರೂಟ್ ವಿಕೆಟ್ ಪಡೆಯಲು ರೂಪಿಸಿದ್ದ ಯೋಜನೆಯನ್ನು ಬಹಿರಂಗಗೊಳಿಸಿದ್ದಾರೆ.