ಮ್ಯಾಂಚೆಸ್ಟರ್: ಮೊದಲ ಟೆಸ್ಟ್ನ ಮೊದಲ ಇನಿಂಗ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಮುನ್ನಡೆ ಗಳಿಸಿದ್ದ ಪಾಕಿಸ್ತಾನ ತಂಡ ಎರಡನೇ ಇನಿಂಗ್ಸ್‌ನಲ್ಲಿ ಮಂಕಾಗಿದೆ. ಇಂಗ್ಲೆಂಡ್ ತಂಡದ ಸ್ಟಾರ್ ಆಲ್ರೌಂಡರ್ ಸ್ಟೋಕ್ಸ್ ಕೊನೆ ಗಳಿಗೆಯಲ್ಲಿ 2 ವಿಕೆಟ್ ಕಬಳಿಸುವ ಮೂಲಕ ಆಂಗ್ಲರ ತಂಡ ಕೊಂಚ ಮೇಲುಗೈ ಸಾಧಿಸುವಂತೆ ಮಾಡಿದ್ದಾರೆ.
ಮೂರನೇ ದಿನದಾಟದ ಅಂತ್ಯಕ್ಕೆ ದ್ವಿತೀಯ ಇನ್ನಿಂಗ್ಸ್ ಬ್ಯಾಟಿಂಗ್ ನಡೆಸುತ್ತಿರುವ ಪಾಕಿಸ್ತಾನ 8 ವಿಕೆಟ್ ಕಳೆದುಕೊಂಡು 137 ರನ್ ಗಳಿಸಿದೆ. ಈ ಮೂಲಕ 244 ರನ್ಗಳ ಮುನ್ನಡೆಯಲ್ಲಿದೆ.
ಪಾಕಿಸ್ತಾನ ಮೊದಲ ಇನಿಂಗ್ಸ್‌ನಲ್ಲಿ 326 ರನ್‌ಗಳಿಸಿದ್ದು, ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ಗುರುವಾರ ದಿನದಾಟದ ಮುಕ್ತಾಯಕ್ಕೆ ನಾಲ್ಕು ವಿಕೆಟ್ ಕಳೆದುಕೊಂಡು 92 ರನ್ ಗಳಿಸಿತ್ತು. ಓಲಿ ಪೋಪ್ (62) ಮತ್ತು ಜೋಸ್ ಬಟ್ಲರ್ (38) ರನ್ಗಳಿಸಿ ಅಲ್ಪಮೊತ್ತಕ್ಕೆ ಕುಸಿಯುವ ಆತಂಕ ದೂರ ಮಾಡಿದರು.
ಪೋಪ್ ಮತ್ತು ಬಟ್ಲರ್ ವಿಕೆಟ್ ಪಡೆದ ನಸೀಮ್ ಶಾ ಮತ್ತು ಯಾಸೀರ್ ಶಾ ಪಾಕಿಸ್ತಾನಕ್ಕೆ ಮೇಲುಗೈ ತಂದುಕೊಟ್ರು. ಕ್ರಿಸ್ ವೋಕ್ಸ್, ಜೋಫ್ರಾ ಆರ್ಚರ್ ಮತ್ತು ಸ್ಟುವರ್ಟ್ ಬ್ರಾಡ್ ಕೊಂಚ ರನ್ಗಳಿಸಿ ತಂಡವನ್ನು 200ರ ಗಡಿ ದಾಟಿಸಿದ್ರು. ಅಂತಿಮವಾಗಿ ಇಂಗ್ಲೆಂಡ್ ತಂಡ 219 ರನ್ಗಳಿಗೆ ಮೊದಲ ಇನ್ಸಿಂಗ್ನಲ್ಲಿ ಪತನ ಕಂಡಿತು.
ದ್ವಿತೀಯ ಇನ್ನಿಂಗ್ಸ್ನಲ್ಲಿ ಆಂಗ್ಲ ವೇಗಿಗಳು ಉತ್ತಮವಾಗಿ ಸ್ಪೆಲ್ ಮಾಡಿ ಪಾಕ್ ಆಟಗಾರರಿಗೆ ಪೆವಿಲಿಯನ್ ದಾರಿ ತೋರಿಸಿದ್ರು. ಪರಿಣಾಮಕಾರಿ ದಾಳಿ ಮಾಡಿದ ಸ್ಟುವರ್ಟ್ ಬ್ರಾಡ್, ಕ್ರಿಸ್ ವೋಕ್ಸ್, ಬೆನ್ ಸ್ಟೋಕ್ಸ್ ತಲಾ ಎರಡು ವಿಕೆಟ್ ಪಡೆದ್ರು. 44 ಓವರ್ಗಳಲ್ಲಿ 8 ವಿಕೆಟ್ಗೆ 137 ರನ್ಗಳಿಸಿರುವ ಪಾಕ್ ನಾಲ್ಕನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ.