ಕರ್ನಾಟಕ

karnataka

ETV Bharat / sports

ಲಾಕ್​ಡೌನ್​ ಸಮಯವನ್ನು ಪದಕ ಹುಡುಕಾಟಕ್ಕೆ ಮೀಸಲಿಟ್ಟ ವಿಶ್ವಕಪ್ ವಿಜೇತ  ಆರ್ಚರ್ - ಜೋಫ್ರಾ ಆರ್ಚರ್ ಲೇಟೆಸ್ಟ್ ನ್ಯೂಸ್

ಏಕದಿನ ವಿಶ್ವಕಪ್ ವಿಜೇತ ಪದಕ ಕಳೆದುಕೊಂಡಿದ್ದು, ಲಾಕ್​ಡೌನ್​ನ ಹೆಚ್ಚು ಸಮಯವನ್ನು ಪದಕ ಹುಡುಕುವುದರಲ್ಲೇ ಕಳೆದಿದ್ದೇನೆ ಎಂದು ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಹೇಳಿದ್ದಾರೆ.

Jofra Archer reveals he has lost his World Cup winner's medal
ಪದಕ ಕಳೆದುಕೊಂಡ ಜೋಫ್ರಾ ಆರ್ಚರ್

By

Published : Apr 26, 2020, 2:24 PM IST

ಲಂಡನ್: 2019ರ ಏಕದಿನ ವಿಶ್ವಕಪ್ ಫೈನಲ್​ ಪಂದ್ಯ ಗೆದ್ದ ಬಳಿಕ ಪಡೆದುಕೊಂಡಿದ್ದ ಚಿನ್ನದ ಪದಕ ಕಳೆದುಕೊಂಡಿರುವುದಾಗಿ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಹೇಳಿದ್ದಾರೆ.

ಸುಮಾರು ಒಂದು ವಾರದಿಂದ ನಾನು ಮನೆಯನ್ನೆಲ್ಲ ಹುಡುಕಾಡಿದ್ದೇನೆ ಆದರೆ ಚಿನ್ನದ ಪದಕ ಪತ್ತೆಯಗಿಲ್ಲ, ನನಗೆ ಯಾರೋ ಕಳುಹಿಸಿದ ಫೋಟೋದಲ್ಲಿ ಅದನ್ನು ಮನೆಯಲ್ಲೆ ತೂಗುಹಾಕಲಾಗಿತ್ತು. ಆದರೆ, ಈಗ ಆ ಸ್ಥಳದಲ್ಲಿಲ್ಲ ಎಂದು ರೇಡಿಯೋ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ

ಜೋಫ್ರಾ ಆರ್ಚರ್

ಕೊರೊನಾ ಸೋಂಕು ತಡೆಯಲು ಲಾಕ್​ಡೌನ್​ ಘೋಷಣೆ ಮಾಡಿದ್ದು, ತಮ್ಮ ಲಾಕ್​ಡೌನ್​ನ ಹೆಚ್ಚು ಸಮಯವನ್ನು ಪದಕ ಹುಡುಕುವುದರಲ್ಲೇ ಕಳೆದಿದ್ದೇನೆ ಎಂದಿದ್ದಾರೆ.

2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶಿಸಿದ್ದ ಆರ್ಚರ್ ಇಂಗ್ಲೆಂಡ್​ಪರ ಅತಿಹೆಚ್ಚು ವಿಕೆಟ್ ಪಡೆದಿದ್ದರು. ಅಲ್ಲದೆ ಫೈನಲ್ ಪಂದ್ಯದ ಸೂಪರ್ ಓವರ್​ನಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು

ABOUT THE AUTHOR

...view details